ಸಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆಯಲಿರುವ ಕಾನಿಪಾ ಧ್ವನಿ ಪತ್ರಕರ್ತರ ಜಿಲ್ಲಾಮಟ್ಟದ ಸಮಾವೇಶ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಸಮಾರಂಭ ಇಂದು ಅಫಜಪೂರ್ ಶಾಸಕ ಎಂ ವೈ ಪಾಟೀಲ್ ನೇತೃತ್ವದಲ್ಲಿ ಬಿಡುಗಡೆಗೊಳಿಸಲಾತು . ಈ ಸಂದರ್ಭದಲ್ಲಿ ಶಾಸಕ ಎಂ ವೈ ಪಾಟೀಲ್ ಮಾತನಾಡಿ ಜಿಲ್ಲಾ ಪತ್ರಕರ್ತರ ಸಮಾವೇಶಕ್ಕೆ ಶುಭ ಕೋರಿದರು ನಂತರ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಪಗಡೆ ಮಾತನಾಡಿ ಸಪ್ಟೆಂಬರ್ ೧೬ರಂದು ಕಲ್ಯಾಣ ಕರ್ನಾಟಕ ಭಾಗಕ್ಕೆ ಅವಿಸ್ಮರಣೀಯ ದಿನವಾಗಿದ್ದು ಎಲ್ಲ ಸ್ವಾಭಿಮಾನಿ ಪತ್ರಕರ್ತರು ಕಾರ್ಯಕ್ರಮದ ಯಶಸ್ವಿಗೆ ಪ್ರಯತ್ನಿಸಬೇಕು ಎಂದು ಕರೆ ನೀಡಿದರು. ನಂತರ ಆಫ್ಜಲ್ಪುರ್ ತಾಲೂಕ ಅಧ್ಯಕ್ಷ ಯಲ್ಲಾಲಿಂಗ ಪೂಜಾರಿ ಮಾತನಾಡಿ ಈ ಬೃಹತ್ ಸಮಾವೇಶಕ್ಕೆ ನಾವೆಲ್ಲರೂ ಹಗಲಿರುಳು ಶ್ರಮಿಸಿ ಕಾರ್ಯಕ್ರಮದ ಯಶಸ್ವಿಗೆ ಕಾರಣರಾಗೋಣ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಪಗಡೆ, ಉಪಾಧ್ಯಕ್ಷ ಮಹಮ್ಮದ್ ಸಾಬೀರ ಗೌರಿ, ಖಜಾಂಚಿ ರಾಜಶೇಖರ ಮಾತೋಳಿ,ಸಹ ಕಾರ್ಯದರ್ಶಿ ಪವನ್ ಕುಲ್ಕರ್ಣಿ ಅಫ್ಜಲ್ ಪುರ್ ತಾಲೂಕ ಅಧ್ಯಕ್ಷ ಯಲ್ಲಾ ಲಿಂಗ ಪೂಜಾರಿ, ಗೌರವಾಧ್ಯಕ್ಷ ಶ್ರೀಶೈಲ್ ಸಿಂಗೆ, ಉಪಾಧ್ಯಕ್ಷ ಚನ್ನು ಹಿಂಚಗೇರಿ, ಪ್ರಧಾನ ಕಾರ್ಯದರ್ಶಿ ರಾಹುಲ್ ಅಣ್ಣೇನವರ್, ಖಜಾಂಚಿ ಉಮೇಶ್ ಅಚಲೇರಿ, ಮಂಜು ಹಡಪದ್, ಮಲ್ಲು ಬಗಲೂರ್, ಜೇವರ್ಗಿ ತಾಲೂಕಾ ಅಧ್ಯಕ್ಷ ಚಂದ್ರಶಾಗೌಡ ಮಾಲಿಪಾಟೀಲ್, ಆಳಂದ ಪ್ರಧಾನ ಕಾರ್ಯದರ್ಶಿ ಮಹೇಂದ್ರ , ಸಂತೋಷ್ ಪೂಜಾರಿ, ಕಾಶಿಬಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.