ಚುನಾವಣೆ ದಿನದಂದು :-
ಮತಗಟ್ಟೆಯ ೨೦೦ ಮೀಟರ್ ಒಳಗೆ ಯಾವುದೇ ಪ್ರಚಾರ ಮಾಡಲು ಅವಕಾಶವಿರುವುದಿಲ್ಲ. ಮತಗಟ್ಟೆಗಳಲ್ಲಿ ಪಿಆರ್ಓ ಮತ್ತು ಮೈಕ್ರೋ ಅಬ್ಸರ್ವರ್ ಹೊರತುಪಡಿಸಿ ಉಳಿದ ಜನರಿಗೆ ಮೊಬೈಲ್ ಬಳಸಲು ಅವಕಾಶವಿರುವುದಿಲ್ಲ. ಮೈಕ್ ಬಳಸಲು ಅವಕಾಶವಿರುವುದಿಲ್ಲ. ಆದರೆ ೨೦೦ ಮೀಟರ್ ನಂತರ ಅಭ್ಯರ್ಥಿಗಳಿಗೆ ಒಂದು ಟೇಬಲ್, ೨ ಕುರ್ಚಿ ಮತ್ತು ೩*೫ ಒಂದು ಬ್ಯಾನರ್ ಅಳವಡಿಸಲು ಅವಕಾಶವಿದೆ. ಆದರೆ ಯಾವುದೇ ಕರ ಪತ್ರ ನೀಡಲು ಅವಕಾಶವಿರುವುದಿಲ್ಲ. ಮತಗಟ್ಟೆಯೊಳಗೆ ಯಾವುದೇ ಆಯುಧವನ್ನು ತೆಗೆದುಕೊಂಡು ಹೋಗಲು ನಿರ್ಬಂಧವಿರುತ್ತದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ ವಾಡ್ ಮಾತನಾಡಿ, ಜಿಲ್ಲೆಯಲ್ಲಿ ೩೦೦೦ ಪೊಲೀಸನ್ನು ಮತಗಟ್ಟೆ ಕರ್ತವ್ಯಕ್ಕೆ ನೇಮಿಸಲಾಗಿದೆ. ೩೧ ಕಂಪನಿ ಸಿಆರ್ಪಿಎಫ್, ೨೧ ಬಿಎಸ್ಎಫ್, ೧೦ ಜಾರ್ಖಂಡ್ ಸೇನಾ ಪೊಲೀಸರು ಮತ್ತು ೫೦೦ ತಮಿಳುನಾಡು ಪೊಲೀಸರು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ವಿವರಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷೆ ಡಾ: ಕೆ. ವಿದ್ಯಾಕುಮಾರಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಸ್ವೀಪ್ ಚಟುವಟಿಕೆಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಲಾಗಿದೆ. ಮತದಾರರ ನಡೆ ಮತಗಟ್ಟೆ ಕಡೆ ಕಾರ್ಯಕ್ರಮವನ್ನು ಸಹ ಯಶಸ್ವಿಯಾಗಿ ಜಿಲ್ಲೆಯಾದ್ಯಂತ ಏರ್ಪಡಿಸಲಾಗಿದ್ದು, ಯುವ ಮತದಾರರು, ಸಖಿ ಹಾಗೂ ದಿವ್ಯಾಂಗ ಮತಗಟ್ಟೆಗಳನ್ನು ಸ್ಥಾಪಿಸಲಿದ್ದು, ೨೬೫ ಮತಗಟ್ಟೆಗಳು ಜಿಲ್ಲೆಯ ವಿಶೇಷತೆಯನ್ನು ಬಿಂಬಿಸಲಿವೆ, ಸೋಮನಕುಣಿತ, ವೀರಗಾಸೆ ಥೀಮ್ ಬಳಸಿ ಮತಗಟ್ಟೆಗಳನ್ನು ಅಲಂಕರಿಸಲಾಗಿದೆ. ಜಿಲ್ಲೆಯಲ್ಲಿ ೮೦+ ಮತ್ತು ದಿವ್ಯಾಂಗ ಮತದಾರರಿಗೆ ರ್ಯಾಂಪ್, ರೈಲಿಂಗ್, ಕುಡಿಯುವ ನೀರು, ವೀಲ್ ಚೇರ್, ಬೂತಗನ್ನಡಿ, ಬ್ರೆöÊಲ್ ವ್ಯವಸ್ಥೆ, ಶೌಚಾಲಯ, ವಿಶ್ರಾಂತಿ ಕೊಠಡಿ ಮುಂತಾದ ವ್ಯವಸ್ಥೆಗಳನ್ನು ಚುನಾವಣಾ ಆಯೋಗದ ನಿರ್ದೇಶನುಸಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಪಾಲಿಕೆ ಆಯುಕ್ತ ಹೆಚ್.ವಿ.ದರ್ಶನ್ ಹಾಜರಿದ್ದರು.
ಎಂಸಿಎAಸಿ ಸಮಿತಿಯ ಅನುಮತಿ ಇಲ್ಲದೆ ಮೇ ೯, ೧೦ರಂದು ಮುದ್ರಣ ಮಾಧ್ಯಮದಲ್ಲಿ ಜಾಹೀರಾತು ಪ್ರಕಟಿಸುವಂತಿಲ್ಲ-ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ
ತುಮಕೂರು(ಕ.ವಾ)ಮೇ.೭: ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿ ಜಾಹೀರಾತನ್ನು ರಾಜ್ಯ/ಜಿಲ್ಲಾ ಮಟ್ಟದ ಎಂಸಿಎAಸಿ ಸಮಿತಿಯ ಪೂರ್ವ ದೃಢೀಕರಣ ಪಡೆಯದೆ ಯಾವುದೇ ರಾಜಕೀಯ ಪಕ್ಷ, ಅಭ್ಯರ್ಥಿ, ಸಂಘಟನೆ ಅಥವಾ ವ್ಯಕ್ತಿ ಯಾವುದೇ ಜಾಹೀರಾತನ್ನು ಮೇ ೯ ಹಾಗೂ ೧೦, ೨೦೨೩ರಂದು ಮುದ್ರಣ ಮಾಧ್ಯಮದಲ್ಲಿ ಪ್ರಕಟಿಸಬಾರದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಂಗ ಸಭಾಂಗಣದಲ್ಲಿAದು ವಿಧಾನಸಭಾ ಸಾರ್ವತ್ರಿಕ ಚುನಾವಣೆ ೨೦೨೩ರ ಸಂಬAಧ ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ರಾಷ್ಟç, ರಾಜ್ಯ, ಜಿಲ್ಲೆ ಮತ್ತು ಸ್ಥಳೀಯ ಮುದ್ರಣ ಮಾಧ್ಯಮಗಳು ಎಂಸಿಎAಸಿ ಸಮಿತಿಯ ದೃಢೀಕರಣವಿಲ್ಲದೆ ವಿಧಾನಸಭಾ ಚುನಾವಣೆಗೆ ಸಂಬAಧಿಸಿದ ಯಾವುದೇ ಜಾಹೀರಾತನ್ನು ಪ್ರಕಟ ಮಾಡಬಾರದು ಎಂದು ಅವರು ತಿಳಿಸಿದರು.
ವಿದ್ಯುನ್ಮಾನ ಮಾಧ್ಯಮ :-
ಒಂದು ಮತ ಕ್ಷೇತ್ರದಲ್ಲಿ ಮತದಾನ ಮುಗಿಯುವುದಕ್ಕೆ ನಿಗಧಿಪಡಿಸಿರುವ ಸಮಯದ ೪೮ ಗಂಟೆಗೂ ಮೊದಲು ದೂರದರ್ಶನ, ಸಿನಿಮಾಟೋಗ್ರಫಿ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಚುನಾವಣಾ ವಿಷಯವನ್ನು ಪ್ರಸಾರ ಮಾಡುವುದನ್ನು ಜನತಾ ಪ್ರಾತಿನಿಧ್ಯ ಕಾಯ್ದೆ ೧೯೫೧ರ ಸೆಕ್ಷನ್ ೧೨೬ ನಿಷೇಧಿಸಲಾಗಿದೆ. ಚುನಾವಣಾ ವಿಷಯ ಅಂದರೆ ಫಲಿತಾಂಶದ ಮೇಲೆ ಪ್ರಭಾವ ಅಥವಾ ಪರಿಣಾಮ ಬೀರುವ ಉದ್ದೇಶ ಹಾಗೂ ಲೆಕ್ಕಾಚಾರ ಒಳಗೊಂಡಿರುವ ವಿಷಯಗಳನ್ನು ಪ್ರಸಾರ ಮಾಡತಕ್ಕದ್ದಲ್ಲ.
ಈ ನಿಯಮ ಉಲ್ಲಂಘಿಸುವ ಯಾವುದೇ ವ್ಯಕ್ತಿಗೆ ೨ ವರ್ಷಗಳಿಗೂ ವಿಸ್ತರಿಸಬಹುದಾದ ಸೆರೆವಾಸ ಅಥವಾ ದಂಡ ಇವೆರಡರಿಂದಲೂ ಶಿಕ್ಷಿಸಲ್ಪಡಲಾಗುವುದು ಮತ್ತು ೪೮ ಗಂಟೆ ಪೂರ್ವದಿಂದ ಚುನಾವಣೆ ಮುಕ್ತಾಯಗೊಂಡ ಅರ್ಧ ಗಂಟೆಯ ಮುಂಚೆ ಯಾವುದೇ ಚುನಾವಣಾ ಪೂರ್ವ ಸಮೀಕ್ಷೆ ಹಾಗೂ ಅಭಿಪ್ರಾಯಗಳಿಗೆ ನಿರ್ಬಂಧವಿರುತ್ತದೆ ಎಂದು ತಿಳಿಸಿದರು.
ರಾಜಕೀಯ ಪಕ್ಷಗಳು ಬಹಿರಂಗ ಚುನಾವಣಾ ಪ್ರಚಾರ ನಡೆಸತಕ್ಕದ್ದಲ್ಲ-ಜಿಲ್ಲಾ ಚುನಾವಣಾಧಿಕಾರಿ

Leave a comment
Leave a comment


