ಅಫಜಲಪೂರ : ತಹಸೀಲ್ದಾರ ಕಾರ್ಯಾಲಯದಲ್ಲಿ ಆಸ್ತಿ ಮೊಟೇಷನ್ ಸಲುವಾಗಿ 7000 ರೂಪಾಯಿಲಂಚ ಸ್ವೀಕರಿಸುವ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ನಂದರ್ಗಾ ಗ್ರಾಮದ ಗ್ರಾಮ ಲೆಕ್ಕಿಗ ಸಿದ್ದರಾಮ ಪಡಶೆಟ್ಟಿ ಬಿದ್ದಿದ್ದಾರೆ. ಹಲವು ದಿನಗಳವರೆಗೆ ಆಸ್ತಿ ಮುಟೇಷನ್ ಸಲುವಾಗಿ ಗ್ರಾಮ ಲೆಕ್ಕಿಗರಿಗೆ ಹೇಳಿದ್ದರು ಕೂಡ ಗ್ರಾಮ ಲೆಕ್ಕಿಗ ನಿರ್ಲಕ್ಷ ವಹಿಸಿದರು ಮತ್ತು 14 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು, ಇದರಿಂದ ಬೇಸತ್ತ ಸೈಫನ್ ಸಾಬ್, ಆಜೀಜ್ ಎಂಬುವವರು ಲೋಕಾಯುಕ್ತ ಕಚೇರಿಗೆ ದೂರು ಕೂಡ ನೀಡಿದ್ದರು. ಇದರಿಂದ
ತಕ್ಷಣ ಕಾರ್ಯ ಪ್ರವೃತ್ತರಾದ ಲೋಕಾಯುಕ್ತ ಟೀಮ್. ಲೋಕಾಯುಕ್ತ ಎಸ್ಪಿ ಜಾನ್ ಆಂಟೋನಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಮಂಜುನಾಥ್, ಧ್ರುವತಾರ, ಪಿಎಸ್ಐ ಹಣಮಂತ ಮಸೂದ ಶರಣು ಸೇರಿದಂತೆ ಲೋಕಾಯುಕ್ತ ಪೊಲೀಸ ಸಿಬ್ಬಂದಿಗಳು ಸೋಮವಾರ ಮದ್ಯಾಹ್ನ ತಾಲೂಕಿನ ತಹಸೀಲ್ದಾರ ಕಾರ್ಯಾಲಯದಲ್ಲಿ 7000 ರೂಪಾಯಿ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಗ್ರಾಮ ಲೆಕ್ಕಿಗನನ್ನು ಬಲೆಗೆ ಬೀಳಿಸಿದ್ದಾರೆ. ಈ ಕುರಿತು ಆರೋಪಿಯನ್ನು ಬಂಧಿಸಿದ್ದು ಲೋಕಾಯುಕ್ತ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.
ವರದಿ ಚನ್ನು ಹಿಂಚಗೇರಿ.