ತುಮಕೂರು: ಮಹಾನಗರ ಪಾಲಿಕೆ ಸದಸ್ಯರಾದ ಸೈಯದ್ ನಯಾಜ್ ರವರು ಹಾಗೂ ಅವರ ಧರ್ಮಪತ್ನಿ ರವರು ಪವಿತ್ರ ಹಜ್ ಯಾತ್ರೆಗೆ ತೆರಳುತ್ತಿದ್ದು, ಈ ಹಿನ್ನೆಲೆ ಇಂದು ಮಾಜಿ ಶಾಸಕರಾದ ಡಾ. ರಫೀಕ್ ಅಹ್ಮದ್ ರವರ ನಿವಾಸದಲ್ಲಿ ದಂಪತಿಗಳಿಗೆ ಅಭಿನಂದನೆ ಸಲ್ಲಿಸಿ ಶುಭ ಕೋರಿದರು.
ಈ ವೇಳೆ ಮಾಜಿ ಶಾಸಕರಾದ ಡಾ. ಷಫಿ ಅಹ್ಮದ್, ಮಹಾಪೌರರಾದ ಶ್ರೀಮತಿ ಪ್ರಭಾವತಿ ಸುಧೀಶ್ವರ್, ಮಾಜಿ ಮಹಾಪೌರರಾದ ಫರೀಧಾ ಬೇಗಂ, ಮಹಾನಗರ ಪಾಲಿಕೆ ಸದಸ್ಯರಾದ ಜಿ.ಕುಮಾರ್, ಇನಾಯತ್ ಉಲ್ಲಾ, ಶಕೀಲ್ ಅಹ್ಮದ್ ಷರೀಫ್, ಮುತವಲ್ಲಿ ಅಸ್ಲಾಂ ಪಾಷ, ಸೈಯದ್ ಹಫೀಜ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಸೈಯದ್ ಮೆಹಬೂಬ್ ಪಾಷ, ಮುಖಂಡರುಗಳಾದ ಅಫ್ತಾಬ್ ಅಹ್ಮದ್, ಜಿಯಾ, ಉಬೇದ್ ಉಲ್ಲಾ, ಮೊಹಮ್ಮದ್ ಪೀರ್, ಶೆಟ್ಟಳಯ್ಯ, ಅಖಿಲೇಶ್, ಚಾಂದ್ ಪಾಷ, ಷಫಿ ಖಾಲಿದ್, ಹುಸೇನ್ ಉಪಸ್ಥಿತರಿದ್ದರು.