ಅಫಜಲಪೂರ : ತಾಲೂಕಿನ ಪ್ರಸಿದ ಧಾರ್ಮಿಕ ಕ್ಷೇತ್ರವಾದ ಇಂಗಳಗಿ ಬಿ ಗ್ರಾಮದ ಶ್ರೀ ಕಾಳಲಿಂಗೇಶ್ವರರ ಜಾತ್ರಾ ಮಹೋತ್ಸವ ಇದೆ ದಿನಾಂಕ ಡಿಸೇಂಬರ್ 14.15. ಮತ್ತು 16 ರಂದು ನಡೆಯಲಿದೆ ಎಂದು ದೇವಸ್ಥಾನದ ಸಮಿತಿ ತಿಳಿಸಿದೆ. ದಿನಾಂಕ 07-12-24 ರಂದು ಪ್ರತಿದಿನ ಸಂಜೆ 7 ಗಂಟೆಗೆ ಮುಗುಳ ಖೋಡದ ಶ್ರೀ ಯಲ್ಲಾಲಿಂಗ ಮಹಾರಾಜರ ಮಹಾಪುರಾಣವನ್ನು ಶ್ರೀ ಸಿದ್ದೇಶ್ವರ ಶಾಸ್ತ್ರೀಗಳು ಇವರಿಂದ ಜರುಗಲಿದ್ದು ಹಾಗೂ ಶನಿವಾರ ದಿನಾಂಕ 14 ರಂದು ಬೆಳಿಗ್ಗೆ ಎತ್ತಿನ ಬಂಡಿಯ ಓಟದ ಸ್ಪರ್ಧೆ, ರವಿವಾರ 15 ರಂದು ದೀಪೋತ್ಸವ ಹಾಗೂ ಸೋಮವಾರ 16 ರಂದು ಅಗ್ನಿ ಪ್ರವೇಶ ಹಾಗೂ ರುದ್ರ, ಪುರವಂತರೊಂದಿಗೆ ವಾದ್ಯ ವೈಭವಗಳೊಂದಿಗೆ ಹಾಗೂ ಕುಂಭ ಕಳಸ ಮುತ್ತಿನಾರುತಿಯೊಂದಿಗೆ ಶ್ರೀ ಕಾಳಲಿಂಗೇಶ್ವರ ಅಡ್ಡಪಲ್ಲಕಿ ಉತ್ಸವ ಗ್ರಾಮದ ಪ್ರಮುಖ ಭೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಲಿದ್ದು ಜೊತೆಗೆ ದಿನಾಂಕ 16 ರಂದು ನೂತನವಾಗಿ ನಿರ್ಮಾಣಗೊಂಡ ಭವ್ಯ ರಥೋತ್ಸವವನ್ನು ಸಾಯಂಕಾಲ 5:30 ಗಂಟೆಗೆ ಜರುಗಲಿದೆ ಎಂದರು. ಈ ವರ್ಷದ ಜಾತ್ರಾ ಮಹೋತ್ಸವದಲ್ಲಿ ನಾಡಿನ ಹಾಗೂ ಜಿಲ್ಲೆಯ ವಿವಿಧ ಮಠದ ಮಹಾಸ್ವಾಮಿಜಿಗಳು ಜಾತ್ರಾಯಲ್ಲಿ ಪಾಲ್ಗೊಳ್ಳಲಿದ್ದು ಹಾಗೂ ತಾಲೂಕಿನ ಅನೇಕ ರಾಜಕೀಯ ಗಣ್ಯರು ಕೂಡ ಜಾತ್ರಾ ಮಹೋತ್ಸವ ದಲ್ಲಿ ಭಾಗವಹಿಸಳಿದ್ದಾರೆ, ಜೊತೆಗೆ ಸುತ್ತಮುತ್ತಲಿನ ಎಲ್ಲ ಗ್ರಾಮಸ್ಥರು ಈ ನಮ್ಮ ಕಾಳಲಿಂಗಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಕುಪೇಂದ್ರಗೌಡ ಪಾಟೀಲ್, ಬಸವಂತ್ರಾಯ ಪಾಟೀಲ್, ದತ್ತಾನಗೌಡ ಸನಗುಂದಿ, ಕಾಳಪ್ಪ ಕುಂಬಾರ, ಸಂಗನಗೌಡ ಬಿರಾದಾರ,ಸಿದ್ದಣಗೌಡ ,ಚಿಂಚೋಳಿ ಗುರುನಾಥ ಕಡಣಿ, ಶರಣಗೌಡ ಪಾಟೀಲ್, ಅಣ್ಣಾರಯಗೌಡ ಪಾಟೀಲ್, ಸಂತೋಷ ಮಲಗೊಂಡ, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.