ತುಮಕೂರು: ಮನುಷ್ಯರು ಪ್ರತಿನಿತ್ಯ ಒಂದಲ್ಲ ಒಂದು ರೋಗಕ್ಕೆ ತುತ್ತಾಗುತ್ತಿದ್ದಾರೆ. ಮನುಷ್ಯನ ಅನಾರೋಗ್ಯದ ಸಂದರ್ಭದಲ್ಲಿ ಚಿಕಿತ್ಸೆ ಮತ್ತು ಹಾರೈಕೆ ಅತಿ ಮುಖ್ಯವಾಗಿದ್ದು, ಸಾವಿನ ಮನೆಯ ಕದ ತಟ್ಟಿದವರಿಗೂ ಉತ್ತಮವಾದ ಗುಣಮಟ್ಟದ ಚಿಕಿತ್ಸೆ ನೀಡುವುದರಿಂದ ಬದುಕಿರುವ ಉದಾಹರಣೆಗಳು ಇವೆ. ಈ ನಿಟ್ಟಿನಲ್ಲಿ ರೋಗಿಗಳನ್ನು ಉತ್ತಮ ರೀತಿಯಲ್ಲಿ ಆರೈಕೆ ಮಾಡುವುದು ಕೆಲವೇ ಕ್ಷಣಗಳಲ್ಲಿ ಸಾಯುತ್ತೇನೆ ಎಂಬ ಭರವಸೆ ಇರುವ ರೋಗಿಗಳಿಗೆ ಕಾಳಜಿಯ ಆರೈಕೆ ನೀಡಿದಾಗ ಅವರಲ್ಲಿ ಸ್ವಲ್ಪಮಟ್ಟಿನ ಚೇತರಿಕೆ ಕಂಡು ಬದುಕುಳಿವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ಭಾರತ ಕ್ಯಾನ್ಸರ್ ರಿಲೀಫ್ ಸಂಸ್ಥೆಯ ಸಂಸ್ಥಾಪಕಿ ಲಂಡನ್ನ ಡಾ. ಜಿಲ್ಲಿ ಬರ್ನ್ ಅವರು ತಿಳಿಸಿದರು.
ತುಮಕೂರು ನಗರ ಹೊರವಲಯದ ಅಗಳಕೋಟೆಯ ಡಾ. ಎಚ್ ಎಂ ಗಂಗಾಧರಯ್ಯನವರ ಸ್ಮಾರಕ ಭವನದಲ್ಲಿ ಶ್ರೀ ಸಿದ್ದಾರ್ಥ ಕಾಲೇಜ್ ಆಫ್ ನರ್ಸಿಂಗ್ ಹಾಗೂ ಟಿ.ಬೇಗೂರು ಕಾಲೇಜುಗಳ ಸಹಯೋಗದಲ್ಲಿ ಮಂಗಳವಾರದoದು ಹಮ್ಮಿಕೊಳ್ಳಲಾಗಿದ್ದ ‘ರೂಲ್ ಆಫ್ ನರ್ಸಿಂಗ್ ಪಿಲೇಟಿವ್ ಕೇರ್’ ಎಂಬ ಕಾರ್ಯಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಅವರು ಮಾತನಾಡಿದರು.
ವೈದ್ಯೋ ನಾರಾಯಣ ಹರಿ ಎಂಬ ಗಾದೆ ಮಾತಿನಂತೆ ಆಸ್ಪತ್ರೆಗಳಲ್ಲಿ ವೈದ್ಯರಿಗಿಂತ ದಾರಿಯರ ಪಾತ್ರ ಬಹುಮುಖ್ಯವಾಗಿದ್ದು, ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ರೋಗಿಗಳಿಗೂ ಸ್ವಾಗತಿಸಿ-ಉಪಚರಿಸಿ ಚೇತರಿಕೆ ಕಾಣುವವರೆಗೆ ಉತ್ತಮವಾದ ಕಾಳಜಿ ವಹಿಸಿ ಹಾರೈಕೆ ಮಾಡುವವರು ಶುಶ್ರೂಕಿಯರು. ರೋಗಿಗಳೊಂದಿಗೆ ಉತ್ತಮವಾದ ಬಾಂಧವ್ಯ ಹೊಂದಿ ಮಾತುಕತೆ ನಡೆಸುವ ಮೂಲಕ ರೋಗಿಗಳ ರೋಗ ನಿವಾರಣೆ ಮಾಡುವಲ್ಲಿ ದಾದಿಯರು ಯಶಸ್ವಿಯಾಗುತ್ತಿದ್ದು, ಲವಲವಿಕೆಯಿಂದ ಕೆಲಸ ಮಾಡಿದಾಗ ಸಾವಿನ ಹಂಚಿನಲ್ಲಿರುವ ರೋಗಿಗಳನ್ನು ಗುಣಪಡಿಸಿ ಆರೋಗ್ಯಕರವಾಗಿಸಬಹುದು ಎಂದು ಡಾ. ಜಿಲ್ಲಿ ಬರ್ನ್ ತಿಳಿಸಿದರು.