ಕಾರ್ಮಿಕ ವಿರೋಧಿ ಸಂಹಿತೆ ಬೇಡ – ಗುತ್ತಿಗೆ ಕಾರ್ಮಿಕರಿಗೆ ಖಾಯಂ, 31,ಸಾವಿರ ಕನಿಷ್ಟ ಕೂಲಿಗಾಗಿ
ಜಿಲ್ಲಾಧಿಕಾರಿಗಳ ಕಛೇರಿ ಎದರು ಪ್ರತಿಭಟನೆ.
ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಿ ಶ್ರೀಮಂತರ ಮೇಲಿನ ತೆರಿಗೆ ಹೆಚ್ಚಿಸಿ, ಬಡವರಿಗೆ ಬದುಕಲು ಅವಕಾಶ ನೀಡುವ ನೀತಿಗಳನ್ನು ಜಾರಿಗೆ ತರಬೇಕು. ರೈಲ್ವೆ, ವಿದ್ಯುತ್ ಒಳಗೊಂಡು ಎಲ್ಲಾ ಸಾರ್ವಜನಿಕ ಕ್ಷೇತ್ರಗಳ ಎಲ್ಲಾ ಖಾಸಗಿಕರಣ ಕೈಬಿಡಬೇಕು. ಸಾರ್ವಜನಿಕ ರಂಗದ ಬಲಪಡಿಸಬೇಕು. ಕನಿಷ್ಟ ವೇತವನ್ನು ರೂ 31,000/- ಬೆಲೆ ಸೂಚ್ಯಾಂಕವನ್ನುಪ್ರಾಮಾಣಿಕವಾಗಿಪ್ರಕಟಿಸಬೇಕು. ಸರ್ವೋಚ್ಚ ನ್ಯಾಯಾಲಯದ ತೀರ್ಪಿನನ್ವಯ ವೈಜ್ಞಾನಿಕ ರೀತಿಯಲ್ಲಿ ಕನಿಷ್ಟ ವೇತನವನ್ನು ನಿಗದಿಪಡಿಸಿ ಜಾರಿಗೊಳಿಸಬೇಕು.
ನಮ್ಮ ಸಂವಿಧಾನದ ಪರಿಚ್ಛೇದ 39 (ಡಿ) ನಲ್ಲಿ ಪ್ರತಿಪಾದಿಸಿರುವ ಸಮಾನ ಕೆಲಸಕ್ಕೆ ಸಮಾನ ವೇತನವನ್ನುಖಾತ್ರಿಪಡಿಸಬೇಕು. ಮುನಿಸಿಪಾಲಿಟಿ, ಅಸ್ವತ್ರೆ, ನಿಗಮ,ವಿ.ವಿ, ಸರ್ಕಾರಿ ಗುತ್ತಿಗೆ ಕಾರ್ಮಿಕ ವ್ಯವಸ್ಥೆಯನ್ನು ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಲು ತಮಿಳುನಾಡು ಮತ್ತು ಆಸ್ಸಾಂ ಮಾದರಿಯಲ್ಲಿ ಕಾನೂನು ಜಾರಿಗೆ ತರಬೇಕು. ಕಾರ್ಮಿಕ ಸಂಘಟನೆಗಳಿಗೆ ಕಡ್ಡಾಯ ಮಾನ್ಯತೆ ನೀಡುವ ಕಾನೂನು ಜಾರಿಗೆ ಬರಬೇಕು. ಕಾರ್ಮಿಕ ವಿರೋಧಿಯಾದ 4 ಕಾರ್ಮಿಕಸಂಹಿತೆಗಳನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು, ಕೆಲಸದ ಅವಧಿ ಹೆಚ್ಚಿಸುವ, ಮಹಿಳೆಯರನ್ನುರಾತ್ರಿಪಾಳಿಯಲ್ಲಿ ದುಡಿಸಿಕೊಳ್ಳಲು ಅವಕಾಶ ನೀಡುವುದು ಸೇರಿದಂತೆ ಎಲ್ಲಾ ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ವಾಪಸ್ ಪಡೆಯಬೇಕು. ಕೆಲಸದ ಸ್ಥಳದಲ್ಲಿನ ಲೈಂಗಿಕ ಕಿರುಕುಳ ತಡೆಗಟ್ಟಲು ಅನುಷ್ಠಾನ ಸಮಿತಿ (PಔSಊ) ಸ್ಥಾಪಿಸಬೇಕು. ಇಎಸ್ಐ, ಇಪಿಎಫ್, ಗ್ರಾಚ್ಯುಟಿ, ಬೋನಸ್ ಕಾಯಿದೆಯಲ್ಲಿ ವಿಧಿಸಲಾದ ಎಲ್ಲಾ ವೇತನ ಮಿತಿಗಳನ್ನು ತೆರೆವುಗೊಳಿಸಬೇಕು. ಗ್ಯಾಚ್ಯುಟಿಯನ್ನು ಪ್ರತಿ ವರ್ಷದ ಸೇವೆಗೆ 30 ದಿನಗಳ ವೇತನ, ಕಾರ್ಖಾನೆಯನ್ನು ಮುಚ್ಚುವಾಗಅಥವಾ ರಿಟ್ರಂಚ್ಮೆAಟ್ ಮಾಡುವಾಗ ನೀಡಬೇಕಾದ ಪರಿಹಾರ ಮೊತ್ತವನ್ನು ಪ್ರತಿ ವರ್ಷದ ಸೇವೆಗೆ 15ದಿನಗಳಿಂದ 90 ದಿನಗಳಿಗೆ ಹೆಚ್ಚಿಸಬೇಕು. ಎಂದು ಒತ್ತಾಯಿಸಿ ಸಿಐಟಿಯು ತುಮಕೂರು ಜಿಲ್ಲಾ ಸಮಿತಿ ಅಡಿಯಲ್ಲಿ ದಿ; 25- 01-2024 ರಂದು ಮಧ್ಯಾನ್ಹ – 2 ಗಂಟೆಯಿAದ 4 ತನಕ ಪ್ಯಾಕ್ಟರಿ, ಗುತ್ತಿಗೆ , ಪಂಚಾಯತ್. ಮುನಿಸಿಪಲ್,ಕಾರ್ಮಿಕರು ಇಂದು ಜಿಲ್ಲಾಧಿಕಾರಿಗಳ ಕೆಛೇರಿ ಎದುರು ಧರಣಿ ನಡೆಸಿದರು,
ಕಾರ್ಮಿಕರು ಧರಣಿ ನಡೆಸುತ್ತಿದ ಸ್ಥಳಕ್ಕೆ ಬಂದ ಜಿಲ್ಲಾ ಉಸ್ತುವಾರಿ ಸಚಿವರು ಹಾಗು ರಾಜ್ಯ ಗೃಹ ಸಚಿವರಾದ ಡಾ;ಜಿ. ಪರಮೇಶ್ವರ್ ಮನವಿ ಪತ್ರಗಳನ್ನು ಸ್ವಿಕರಿಸಿದರು. ಸಚಿವರಿಗೆ ಎಲ್ಲಾ ಮುನಿಸಿಪಾಲ್ ಕಾರ್ಮಿಕರಿಗೆ [ ಯು.ಜಿ.ಡಿ , ಶೌಚಾಲಯ, ಪಾರ್ಕ, ಡೈರ್ಸ್, ನೀರು ಸ್ಕಂಕರಣ ಘಟಕ, ನೀರು ಸರಬರಾಜು ನೌಕರರು ] ಈ ತಕ್ಷಣ ನೇರ ಪಾವತಿಯಡಿ ತಂದು ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿಲು. ಗುತ್ತಿಗೆ ಕಾರ್ಮಿಕರು, ಗ್ರಾಮ ಪಂಚಾಯತ್ ನೌಕರರಿಗೆ ಇರುವ ಸಮಸ್ಯಗಳ ಪರಿಹರಿಸಲು ಕೊರಿ ಮನವಿ ಪತ್ರವನ್ನು ಅರ್ಪಿಸಲಾಯಿತು. ಮನವಿ ಸ್ವಿಕರಿಸಿದ ಸಚಿವರು ರಾಜ್ಯ ಸರ್ಕಾರವು ಕಾರ್ಮಿಕರ – ಧಮನಿತರ ಪರವಾಗಿದೆ ನಿಮ್ಮ ಬೇಡಿಕೆಗಳನ್ನು ಪರಿಹಾರಿಸಲು ಚರ್ಚಿಸಿ ಕ್ರಮ ಕೈಗೋಳ್ಳುವುದಾಗಿ ತಿಳಿಸಿದರು. ಖಾಯಂ ಅದ ಪೌರ ಕಾರ್ಮಿಕರಿಗೆ -6-7 ತಿಂಗಳ ಸಂಬಳ ಬಂದಿಲ್ಲ ಎಂದು ಗಮನಕ್ಕೆ ತಂದಾಗ ತಕ್ಷಣದಲ್ಲಿ ಸಂಬಳ ನೀಡುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು
ಜಿಲ್ಲಾಧಿಕಾರಿಗಳಾದ ಶ್ರೀಮತಿ ಶುಭ ಕಲ್ಯಾಣ ಅವರಿಗೆ ಮನವಿ ಸಲ್ಲಿಸಿದ ಮುನಿಸಿಪಲ್ , ಅಸ್ವತ್ರೆ, ವಿ.ವಿ. ಮತ್ತಿತರೆ ಗುತ್ತಿಗೆ ಕಾರ್ಮಿಕರು ಜಿಲ್ಲೆಯಲ್ಲಿ ಕಾರ್ಮಿಕರ ಭವಣೆಗಳನ್ನು ಅಲಿಸಿ – ಕಾನೂನು ಜಾರಿಗೆ ಬೇಕಾಗಿ ಒಂದು ಸಭೆ ನಡೆಸುವಂತೆ ಪ್ರತಿಭಟನಾಕರರು ಒತ್ತಾಯಸಿದರು. ಇದಕ್ಕೆ ಪ್ರತಿಕಿಯೆ ನಿಡಿ ಮುಂದಿನ ತಿಂಗಳಲ್ಲಿ ಸಭೆ ನಡೆÀಸುವುದಾಗಿ ಭರವಸೆ ನೀಡಿದರು
ಪ್ರತಿಭಟೆಯನ್ನು ಉದ್ದೆಶಿಸಿ ಸಿಐಟಿಯು ಜಿಲ್ಲಾ ಅಧ್ಯಕ್ಷ ಸೈಯದ್ ಮುಜೀಬ್, ಖಚಾಂಚಿ ಎ. ಲೋಕೆಶ್, ಕಾರ್ಯದರ್ಶಿ ಎನ್.ಕೆ ಸುಬ್ರಮಣ್ಯ, ಪೌರ ಕಾರ್ಮಿಕರ ಸಂಘ ಮಂಜುನಾಥ್ , ಪಂಚಾಯತ್ ನೌಕರ ಸಂಘ ನಾಗೇಶ್ ರಘು ಬಿಳಿಗೆರೆ. ನೀರು ಸರಬರಾಜು ನೌಕರ ಸಂಘದ ಅಧ್ಯಕ್ಷ ಕುಮಾರ್, ಕಸದವಾಹನ ಚಾಲಕರ ಸಂಘದ ಮಾರುತಿ. ಮಂಜುನಾಥ್, ಕರ್ನ ಲಿರ್ಸ್ ಕಾರ್ಮಿಕ ಸಂಘ ಶಿವ ಕುಮಾರ್ ಸ್ವಾಮಿ,ಹುಚ್ಚೆಗೌಡ,ದೀಲಿಪ್, ಫಿಟ್ ವೇಲ್ ಕಾರ್ಮಿಕರ ಸಂಘ ಅಧ್ಯಕ್ಷ ಮುತ್ತುರಾಜ್, ಜನವಾಧಿ ಮಹಿಳಾ ಸಂಘಟನೆ ಟಿ ಆರ್. ಕಲ್ಪನಾ, ದಲಿತ ಹಕ್ಕು ಗಳ ಸಮಿತಿಯ ರಾಜು ವೆಂಕಟಪ್ಪ, ಭೋಧಕೇತರ ನೌಕರ ಸಂಘದ ಟಿ.ಜಿ ಶಿವಲಿಂಗಯ್ಯ, ಗ್ರಾಮ ಪಂಚಾಯತ್ ನೌಕರ ಸಂಘ ಪಂಚಕ್ಷಾರಿï, ಶಂಕರಪ್ಪ, ಪಂಚಾಕ್ಷರಿ ಮಾತನಾಡಿದರು.
ಪ್ರತಿಭಟನೆಯುಲ್ಲಿ ಪೌರ, ನೀರು ಸರಬರಾಜು,ಲೋರ್ಸ್. ಕ್ಲೀರ್ಸ್, ಪಾರ್ಕ , ಶೌಚಾಲಯ, ಯು.ಜಿ.ಡಿ . ಸ್ಮಶಾಣ,, ನೀರು ಸಂಸ್ಕರಣಾ ಘಟಕ,ವಾಹನ ಚಾಲಕರು ಸೇವೆಗಳನ್ನ ಈ ರಾಜ್ಯ ಬಜೆಟ್ಟö್ನಲ್ಲಿ ನೇರ ಪಾವತಿಯಡಿ ಸಮಾನ ವೇತನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರತ್ಯೇಕ ಮನವಿ ಸಲ್ಲಿಸಿದರು .