ಕಲ್ಬುರ್ಗಿ ನಗರದಲ್ಲಿ ಇಂದು ಬ್ಲಿಂಕ್ ಚಿತ್ರ ತಂಡದ ವತಿಯಿಂದ ಕಲಬುರ್ಗಿ ಕಾನಿಪ ಧ್ವನಿ ಪತ್ರಿಕಾ ಭವನದಲ್ಲಿ ಬ್ಲಿಂಕ್ ಚಲನಚಿತ್ರ ನಿರ್ಮಾಪಕ ಜನನಿ ಪಿಚ್ಚರ್ಸ್ ರವಿಚಂದ್ರನ ಎ.ಜೆ ಅವರ ಗೆಳೆಯರ ಬಳಗ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಾರ್ಚ್ 8ಕ್ಕೆ ಜನನಿ ಪಿಚ್ಚರ್ಸ್ ನಿರ್ಮಾಣದ ಚೊಚ್ಚಲು ಸಿನಿಮಾ ಬ್ಲಿಂಕ್ ತೆರೆ ಕಾಣುತ್ತಿದೆ ಸಾಕಷ್ಟು ಅಡೆತಡೆಗಳಿದ್ದರೂ ಅದನ್ನು ಧೈರ್ಯದಿಂದ ಎದುರಿಸಿ ನಿಮ್ಮ ಮುಂದೆ ಬರುತ್ತಿದ್ದೇವೆ ಈ ಸುದ್ದಿ ವಾಹಿನಿಯಲ್ಲಿ ಟ್ರೈಲರ್ ನಿಮಗೆ ಇಷ್ಟವಾದಲ್ಲಿ ದಯಮಾಡಿ ಚಿತ್ರವನ್ನು ಮೊದಲು ಮೂರು ದಿನದಲ್ಲಿ ನೋಡಿ ನಮ್ಮ ತಂಡದ ಕನಸಿಗೆ ಉಸಿರು ಕೊಡಿ ಕನ್ನಡದಲ್ಲಿ ಹಿಂದೆಂದೂ ಆಗಿರದ ಅಪರೂಪದ ಪ್ರಯೋಗವನ್ನು ತೆರೆಯ ಮೇಲೆ ತರಬೇಕು ಎಂಬ ನಮ್ಮ ಆಸೆಗೆ ಜೀವ ಬಂದು ಬ್ಲಿಂಕ್ ಚಿತ್ರ ರೂಪದಲ್ಲಿ ಮಾರ್ಚ್8ಕ್ಕೆ ತೆರೆ ಮೇಲೆ ಮೂಡಿ ಬರುತ್ತಿದೆ ನೋಡಿ ಹರಿಸಿ ಹಾರೈಸಿ ಎಂದು ಸಾರ್ವಜನಿಕರಲ್ಲಿ ಕರ್ನಾಟಕದ ಕಲಾ ಅಭಿಮಾನಿಗಳಲ್ಲಿ ವಿನಂತಿಸಿಕೊಂಡರು.

ಇದೇ ಸಂದರ್ಭದಲ್ಲಿ ಕೋಲಿ ಸಮಾಜದ ಯುವ ಮುಖಂಡ ಪ್ರೇಮ್ ಕೋಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕಲ್ಯಾಣ ಕರ್ನಾಟಕ ನಾಡಿನ ಬಿಸಿಲು ನಾಡು ತೊಗರಿ ನಾಡು ಎಂದು ಕರೆಸಿಕೊಳ್ಳುವ ಕಲಬುರ್ಗಿಯಲ್ಲಿ ಕಲೆಗೆ ಹಾಗೂ ಕಲಾಕಾರರಿಗೆ ಕೊರತೆ ಇಲ್ಲ ಈ ಭಾಗದ ಅದು ಕಲಬುರ್ಗಿ ಅನೇಕ ಕಲಾವಿದರು ಬೆಂಗಳೂರಿನ ಬೆಳ್ಳಿ ತೆರೆಯಲ್ಲಿ ತಮ್ಮದೇ ಆದ ಶ್ರಮದಿಂದ ಪ್ರಸಿದ್ಧರಾಗಿದ್ದಾರೆ ಅಂತ ಬೆಂಗಳೂರಿನ ಬೆಳ್ಳಿತರೆ ಸಿನಿಮಾ ಕ್ಷೇತ್ರದಲ್ಲಿ ಮಿಂಚುತ್ತಿರುವ ಕಲಬುರ್ಗಿ ಯುವ ಕಲಾವಿದ ಗಂಗಾನಗರ ನಿವಾಸಿ ಕುಮಾರ ರವಿಚಂದ್ರ ತಮ್ಮ ಸ್ವಂತ ಶ್ರಮ ಮತ್ತು ಸತತ ಸಾಧನೆಯಿಂದ ಬೆಂಗಳೂರಿನ ಸಿನಿಮಾ ಲೋಕದಲ್ಲಿ ಯುವಕಲಾವಿದ ಹಾಗೂ ಸಿನಿಮಾ ಪ್ರಡ್ಯೂಸರ್ ಹಾಗೂ ನಿರ್ದೇಶಕರಾಗಿ ಪ್ರಸಿದ್ಧರಾಗಿದ್ದಾರೆ ಇವರ ಮೊಟ್ಟಮೊದಲ ಸಿನಿಮಾ ಬ್ಲಿಂಕ್ ಚಲನಚಿತ್ರ ಕೊಡುಗೆ ಕಲ್ಬುರ್ಗಿಯ ಕುವರ ರವಿಚಂದ್ರನ್ ಅವರು ಚಲನಚಿತ್ರಕ್ಕೆ ಭದ್ರ ಅಡಿಪಾಯ್ ಹಾಕಿದ್ದಾರೆ ಆದ ಕಾರಣ ತಾವೆಲ್ಲರೂ ಕಲ್ಯಾಣ ಕರ್ನಾಟಕದ ಭಾಗದ ಸರ್ವ ಕಲಾ ಅಭಿಮಾನಿಗಳಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ಮಾರ್ಚ್ ಎಂಟಕ್ಕೆ ಸಿನಿಮಾ ಥಿಯೇಟರ್ ಗೆ ಹೋಗಿ ಚಲನಚಿತ್ರವನ್ನು ವೀಕ್ಷಿಸಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಪ್ರೇಮ್ ಕೋಲಿ, ರಾಕೇಶ್ ಕೂಡಿ ರವಿಚಂದ್ರನ್ ಎ ಜಿ ಅವರ ಸಹೋದರ ಮತ್ತು ಅವರ ಗೆಳೆಯರು ಉಪಸ್ಥಿತರಿದ್ದರು.



