ಜಲಜೀವನ ಮಿಷನ್ ಯೋಜನೆಯನ್ನು ತಾಲೂಕಿನಲ್ಲಿ ಸಮರ್ಪಕವಾಗಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಶಾಸಕ ಎಂ ವಾಯ್ ಪಾಟೀಲ ಕಾರ್ಯ ಪ್ರವತ್ತರಾಗಿದ್ದಾರೆ, ಅದರಂತೆ ಇತೀಚಿಗೆ ಮಾಶಾಳ ಗ್ರಾಮದಲ್ಲಿ ಸುಮಾರು 4 ಕೋಟಿ 24 ಲಕ್ಷ ರೂಪಾಯಿ ವೆಚ್ಚದಲ್ಲಿ ಜಲ ಜೀವನ ಮಿಷನ ಗ್ರಾಮೀಣ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಉದ್ಘಾಟಿಸಿದ್ರು,ಆದ್ರೆ ಉದ್ಘಾಟಿಸಿ ಇನ್ನೇನು ಯೋಜನೆ ಅನುಷ್ಠಾನಕ್ಕೆ ತರಬೇಕು ಎಂದು ಕಾರ್ಯ ಪ್ರಾರಂಭವಾಗುವ ಪೂರ್ವದಲ್ಲೇ ಹಲವಾರು ವಿಘ್ನಗಳು ಎದುರಾಗುತ್ತಿವೆ, ಇದಕ್ಕೆ ಪುಷ್ಟಿ ಎಂಬಂತೆ ನಿನ್ನೆ ಮಾಶಾಳ ಗ್ರಾಮದಲ್ಲಿ ಜಲ ಜೀವನ ಮಿಷನ್ ಯೋಜನೆಯ ಗುತ್ತಿಗೆದಾರರ ಕಾರ್ಮಿಕರ ಮೇಲೆ ತಡರಾತ್ರಿ ಕಾಮಗಾರಿ ಸ್ಥಗಿತಗೊಳಿಸುವಂತೆ ಬೇದರಿಕೆ ಒಡ್ಡಲಾಗಿದೆ. ಈ ಕೃತ್ಯದ ಹಿಂದೆ ಉದ್ಯಮಿ ಎಸ್ ವಾಯ ಪಾಟೀಲ್ ಅವರ ಸಂಬಂಧಿ ಅಳಿಯ ನಾನಾ ಸಾಹೇಬ ಗೌಡ ಪಾಟೀಲ್ ಅವರ ಬೆಂಬಲಿಗರ ಕೈವಾಡವಿದೆ ಎಂದು ಸ್ಥಳೀಯರು ಆರೋಪಿಸಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ,ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಗ್ರಾಮ ಪಂಚಾಯತ ಸದಸ್ಯರಾದ ಶಿವು ಪ್ಯಾಟಿ, ಮರೆಪ್ಪ ಮುಗಳಿ, ಸಾತಪ್ಪ ಅವುಟಗಿ ಮಾತನಾಡಿ ನಾನಸಾಹೇಬ ಗೌಡ ಪಾಟೀಲ್ ಅವರು ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಗೆ ಹಿಂಬದಿಯಿಂದ ಬೆಂಬಲಗರಿಗೆ ಬಿಟ್ಟು ಅಡೆ ತಡೆ ಉಂಟು ಮಾಡುತ್ತಿರುವದು ಸರಿಯಲ್ಲ, ಯೋಜನೆಯ ಗುತ್ತಿಗೆ ತನ್ನ ಪಾಲಾಗಿಲ್ಲ ಎಂದು ಸ್ವಾರ್ಥಕ್ಕಾಗಿ ನಾನಸಾಹೇಬ ಗೌಡ ಕಾಮಗಾರಿಗೆ ಬೇಕು ಅಂತಾನೆ ಉದ್ದೇಶ ಪೂರ್ವಕವಾಗಿ ತಡೆ ಒಡುತ್ತಿರುವದು ಸ್ವಾರ್ಥವಲ್ಲದೆ ಮತ್ತಿನ್ನೇನು, ಗ್ರಾಮದ ಉದ್ದಾರ, ಅಭಿವೃದ್ಧಿ ಬಯಸದ ಇವರು ಕೇವಲ ತಮ್ಮ ಸ್ವ ಹಿತಾಸಕ್ತಿಗೋಸ್ಕರ ಕರ್ತವ್ಯ ನೀರತ ಕಾರ್ಮಿಕರಿಗೆ ಹಿಂಬದಿಯಿಂದ ಕುಳಿತು ಕೆಲವು ಹುಡುಗರಿಗೆ ಬಿಟ್ಟು ಬೇದರಿಕೆ ಹಾಕಿಸುವದು ಗ್ರಾಮದ ಮೇಲೆ ನಾನಾಗೌಡ ಅವರಿಗೆ ಎಷ್ಟು ಕಾಳಜಿ ಇದೆ ಎಂಬುದು ತೋರಿಸುತ್ತದೆ ಎಂದು ಪರೋಕ್ಷವಾಗಿ ನಾನಸಾಹೇಬ ಗೌಡ ಅವರ ಸ್ವಾರ್ಥತೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.