ಸಂವಿಧಾನ ಉಳಿದರೆ, ಪ್ರಜಾಪ್ರಭುತ್ವ ಉಳಿಯುತ್ತದೆ. ಪ್ರಜಾಪ್ರಭುತ್ವ ಉಳಿದರೆ ನಮ್ಮ ಹಕ್ಕುಗಳನ್ನು ನಾವು ಚಲಾಯಿಸಲು ಸಾಧ್ಯವಾಗುತ್ತದೆ. ಇಲ್ಲವಾದರೆ ಬಾಯಿಗೆ ಬೀಗ ಹಾಕಿಕೊಂಡು ಗುಲಾಮರಂತೆ ಬದುಕಬೇಕಾಗುತ್ತದೆ. ಇದರ ಬಗ್ಗೆ ನಾವು ಮೌನ ವಹಿಸದೆ ಧ್ವನಿ ಎತ್ತಬೇಕಾಗುತ್ತದೆ. ಹೀಗಾಗಿ ಸಮಸ್ಯೆಗಳ ಬಗ್ಗೆ ಅರಿತು, ಅದಕ್ಕೆ ಪರಿಹಾರಗಳನ್ನು ಸೂಚಿಸುವಂತಹ ಚರ್ಚೆ ಆಗಬೇಕಾಗಿದೆ ಎಂದು ಅವರು ಹೇಳಿದರು.

ಸಂವಿಧಾನ ಒಂದು ಕತೆ-ಕಾದಂಬರಿಯಲ್ಲ, ಹೀಗಾಗಿ ಯಾರಿಗೂ ಅರ್ಥವಾಗುವುದಿಲ್ಲ. ಭಾರತವನ್ನು ಅರ್ಥ ಮಾಡಿಕೊಂಡರೆ ಮಾತ್ರ ಸಂವಿಧಾನವು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಭಾರತವನ್ನು ತಿಳಿದುಕೊಳ್ಳಬೇಕಾದರೆ ದೇಶದ ಸಾಮಾಜಿಕ ವ್ಯವಸ್ಥೆ, ಆರ್ಥಿಕ ಸ್ಥತಿಗತಿಗಳನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ ಎಂದು ಅವರು ವಿವರಿಸಿದರು.

ಸೇವಾದಳದ ಉಸ್ತುವಾರಿ ಹಾಗೂ ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ, ಬಿಹಾರ್ನಲ್ಲಿ ಮತದಾರರನ್ನು ಪಟ್ಟಿಯಿಂದ ತೆಗೆಯಲಾಯಿತು. ಕೆಲವು ಸಮುದಾಯಗಳನ್ನು ಗುರಿ ಮಾಡಿ ಎಸ್ಐಆರ್ ಅನ್ನು ಜಾರಿ ಮಾಡಲಾಗಿದೆ. ಮತದಾರರ ಮೌಲ್ಯಮಾಪನ ಮಾಡುತ್ತಿರುವವರ ಉದ್ದೇಶ ಏನು? ಹೊರ ದೇಶಗಳಿಂದ ಬಂದು ಇಲ್ಲಿ ಮತದಾರರಪಟ್ಟಿಯನ್ನು ಇಟ್ಟುಕೊಂಡಿದ್ದಾರೆ ಎಂದು ಆಯೋಗವು ಉತ್ತರಿಸುತ್ತಿದ್ದು, ಮೊದಲು ಗಡಿ ರಾಜ್ಯಗಳಲ್ಲಿ ಎಸ್.ಐ.ಆರ್ ಮಾಡದೇ,ದೇಶದ ಬೇರೆ ರಾಜ್ಯಗಳಲ್ಲಿ ಎಸ್.ಐ.ಆರ್ ಮಾಡುತ್ತಿರುವ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದರು.
ಕರ್ನಾಟಕ ಪ್ರದೇಶ ಯಂಗ್ ಬ್ರಿಗೇಡ್ ಸೇವಾದಳದ ಅಧ್ಯಕ್ಷ ಜುನೈದ್ ಪಿ.ಕೆ ಮಾತನಾಡಿ, ದೇಶದಲ್ಲಿ ಯಾವುದೇ ಪಕ್ಷದ ಸರಕಾರ ಅಧಿಕಾರಕ್ಕೆ ಬರಲಿ, ಸೌಹಾರ್ಧತೆ ಮತ್ತು ಸಮಾಜವಾದವನ್ನು ಗೌರವಿಸಬೇಕು.ಆದರೆ ದೇಶದಲ್ಲಿ ಮನುವಾದವನ್ನು ಹೇರಿಕೆ ಮಾಡುವ ಸರಕಾರ ಅಧಿಕಾರದಲ್ಲಿದೆ.ಶ್ರೇಷ್ಟವಾದ ಭಾರತ ಸಂವಿಧಾನದ ಆಶಯಗಳಿಗೆ ಧಕ್ಕೆ ಉಂಟು ಮಾಡಲಾಗುತ್ತಿದೆ. ಸಂವಿಧಾನಕ್ಕೆ ವಿರುದ್ಧವಾಗಿ ಎಸ್.ಐ.ಆರ್ ಅನ್ನು ಜಾರಿ ಮಾಡಿ, ಜೀವಾಂತ ಸಮಾಧಿ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಯಂಗ್ ಬ್ರಿಗೇಡ್ ಸೇವಾದಳದ ಪದಾಧಿಕಾರಿಗಳು ಸೇರಿದಂತೆ ಯುವಕರು ಉಪಸ್ಥಿತರಿದ್ದರು






