ಕಲಬುರಗಿ : ನಿನ್ನೆ ನಡೆದ ನಾಗಾರ ಪಂಚಮಿ ಹಬ್ಬವನ್ನು ಕಲಬುರಗಿಯಲ್ಲಿ ಮಹಿಳೆಯರು ನಾಗದೇವರಿಗೆ ಹಾಲು ಎರೆಯುವದರ ಮೂಲಕ ಅದ್ದೂರಿಯಾಗಿ ಚರಿಸಿದರು. ಕಲಬುರಗಿಯ ಬಂಬು ಬಜಾರ ನಿವಾಸಿಗಳು ವಿಶೇಷವಾಗಿ ಸಂಪ್ರದಾಯದಂತೆ ವಿಶೇಷ ಉಡುಗೆ ತೊಟ್ಟು ದೇವಸ್ಥಾನಕ್ಕೆ ಆಗಮಿಸಿ ನಾಗದೇವರಿಗೆ ಪೂಜೆ ಮಾಡಿ ಹಬ್ಬ ಆಚರಿಸಿದರು. ನಂತರ ಮಾತನಾಡಿದ ವೈಷ್ಣವಿ ಕಲಬುರಗಿಯವರು ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗಪಂಚಮಿಯನ್ನು ನಾವೆಲ್ಲರೂ ಶ್ರದ್ದಾ ಭಕ್ತಿಯಿಂದ ಆಚರಿಸಿದ್ದು ಈ ಹಬ್ಬದ ಸಂದರ್ಭದಲ್ಲಿ ನಾಗದೇವನಿಗೆ ಹಾಲು ಎರೆಯುವದರಿಂದ ನಮ್ಮೆಲ್ಲರ ಇಷ್ಟಾರ್ಥಗಳನ್ನು ಪೂರೈಸುತ್ತವೆ ಎಂಬ ನಂಬಿಕೆ ಇದೆ ಎಂದರು. ಸಂದರ್ಭದಲ್ಲಿ ನಾಗವೇಣಿ ಆರ್ ಪಾಟೀಲ್, ರೇಣುಕಾ ಕಲಬುರಗಿ,ವೈಷ್ಣವಿ ಕಲಬುರಗಿ, ನಿಖಿತಾ ಕಲಬುರಗಿ, ಸೇರಿದಂತೆ ಅನೇಕ ಮಹಿಳೆಯರು ನಾಗದೇವನಿಗೆ ಹಾಲು ಎರೆದು ಹಬ್ಬ ಆಚರಿಸಿದರು.