ಮುಂಬೈ ಮಾಧರಿ ಸ್ಲಂ ಅಭಿವೃದ್ಧಿ ಕರ್ನಾಟಕಕ್ಕೆ ಅವೈಜ್ಞಾನಿಕ – ಎ.ನರಸಿಂಹಮೂರ್ತಿ
ಇಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ತುಮಕೂರು ಉಪವಿಭಾಗದವತಿಯಿಂದ ತುಮಕೂರು ನಗರದ ಎನ್.ಆರ್.ಕಾಲೋನಿಯಲ್ಲಿ ಭಾರತದ ಮಾಜಿ ಉಪಪ್ರಧಾನಿ ಬಾಬು ಜಗಜೀವನ್ ರಾಮ್ ರವರ 40ನೇ ಪುಣ್ಯಸ್ಮರಣೆ ಅಂಗವಾಗಿ ಟೈಲರಿಂಗ್ ತರಬೇತಿ ಹಾಗೂ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಟೈಲರಿಂಗ್ ತರಭೇತಿಯನ್ನು ಶ್ರೀ ದುರ್ಗಮ್ಮ ದೇವಸ್ಥಾನದ ಹತ್ತಿರ ಸಮುದಾಯ ಭವನದಲ್ಲಿ ಪ್ರಾರಂಭಿಸಿದ್ದು ಕೇಂದ್ರದ ಉದ್ಘಾಟನೆಯನ್ನು ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಭಾನುಪ್ರತಾಪ್ ಸಿಂಹ ನೆರವೇರಿಸಿದರು. ಮಾತನಾಡಿ ಸ್ಲಂ ಮಹಿಳೆಯರು ಕೌಶಲ್ಯ ಆಧಾರಿತ ತರಭೇತಿಗಳಿಂದ ಆರ್ಥಿಕವಾಗಿ ಸದೃಡರಾಗಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಜನಜಾಗೃತಿಯನ್ನು ಉದ್ದೇಶಿಸಿ ಮಾತನಾಡಿದ ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ ಇತ್ತೀಚೆಗೆ ಕರ್ನಾಟಕ ಸರ್ಕಾರದ ನೂತನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಸತಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ ಹೊಸದಾಗಿ ಕೊಳಗೇರಿಗಳು ತಲೆ ಎತ್ತುತ್ತಿವೆ ಇದಕ್ಕೆ ಅವಕಾಶ ನೀಡಬಾರದು ಯಾವುದೇ ವಸತಿ ಯೋಜನೆಗೆ ಕೈಹಾಕುವ ಮುನ್ನ ಸ್ಪಷ್ಟತೆ ಇರಬೇಕು, ಸ್ಲಂಗಳ ಮರು ಅಭಿವೃದ್ಧಿಗಾಗಿ ಮುಂಬೈ ಮಾಧರಿಯಲ್ಲಿ ಯೋಜನೆ ಸಿದ್ದಪಡಿಸುವಂತೆ ನಿರ್ದೇಶನ ನೀಡಿರುವುದು ಸ್ಲಂ ಜನವಿರೋಧಿಯಾಗಿದೆ ಸ್ಲಂ ಅಭಿವೃದ್ಧಿಯನ್ನು ವಸತಿ ಯೋಜನೆಗೆ ಸೀಮಿತಗೊಳಿಸಿಕೊಂಡಿರುವುದೇ ಸಂವಿಧಾನ ವಿರೋಧಿ ಕಾರಣ ಕೊಳಗೇರಿಗಳಲ್ಲಿರುವ ಜನರಿಗೆ ವಸತಿ ಎಷ್ಟು ಮುಖ್ಯಯೋ ಅಸ್ಟೇ ಪ್ರಮಾಣದಲ್ಲಿ ಬಡತನ ನಿವಾರಣೆ ಮತ್ತು ಸಮಗ್ರ ಅಭಿವೃದ್ಧಿಗೊಳ್ಳುವುದು ಮುಖ್ಯವಾಗಿದೆ ಸಮಗ್ರ ಅಭಿವೃದ್ಧಿ ಸ್ಲಂ ಕಾಯಿದೆ ಮತ್ತು 2016 ರಲ್ಲಿ ಜಾರಿಗೆ ಬಂದ ಸ್ಲಂ ನೀತಿ ಕೊಳಗೇರಿ ನಿವಾಸಿಗಳ ಆರೋಗ್ಯ, ಶಿಕ್ಷಣ, ನಿರುದ್ಯೋಗ ಮತ್ತು ಕೌಶಲ್ಯ ತರಭೇತಿಗಳನ್ನು ನೀಡುವ ಆಶಯವನ್ನು ಹೊಂದಿದೆ ಇದಕ್ಕೆ ಪೂರಕವಾಗಿಯೇ ಮುಖ್ಯಮಂತ್ರಿಗಳು ಕೊಳಚೆ ಪ್ರದೇಶಗಳ ಅಭಿವೃದ್ಧಿಯನ್ನು ಕೈಗೊಳ್ಳಬೇಕು, ಸಮಗ್ರ ಅಭಿವೃದ್ಧಿ ಸಂವಿಧಾನದ ಆಶಯ ಮತ್ತು ಸಾಮಾಜಿಕ ನ್ಯಾಯ ಮುಂಬೈ ಮಾಧರಿ ಸ್ಲಂ ಅಭಿವೃದ್ಧಿ ಖಾಸಗಿ ಪಿಪಿಪಿ ಮಾಧರಿಯ ಸಂವಿಧಾನ ವಿರೋಧಿಯಾಗಿದ್ದು ನಮ್ಮ ಜನರ ಕೈಯಲ್ಲಿರುವ ಭೂಮಿಯನ್ನು ಕಾಪರ್ೋರೇಟ್ ಕಂಪನಿಗಳ ಕೈಗೆ ಕೊಡುವ ಈ ನಡೆ ಅವೈಜ್ಞಾನಿಕವಾಗಿದ್ದು ನಮ್ಮನ್ನು 2 ಎರಡು ಕಾಲಿನ ಪ್ರಾಣಿಗಳಂತೆ ಪರಿಗಣಿಸುವುದನ್ನು ಈ ಸಕರ್ಾರ ಕೈಬಿಡಬೇಕು ಸ್ಲಂ ಜನರಿಗೆ ತಮ್ಮ ಜೀವಿತಾವಧಿಯಲ್ಲಿ ಮನೆ ಒದಗಿಸುವುದಕ್ಕೆ 2023ರಲ್ಲಿ ಕಾಂಗ್ರೇಸ್ ಪಕ್ಷ ನೀಡಿರುವ ಪ್ರಣಾಳಿಕೆ ಭರವಸೆಯಲ್ಲಿ ಸ್ಲಂ ಜನರಿಗೆ ಉಚಿತ ಮನೆಗಳನ್ನು ನೀಡಲು ವಸತಿ ಹಕ್ಕು ಜಾರಿಗೊಳಿಸುವ ಮೂಲಕ ಲ್ಯಾಂಡ್ ಬ್ಯಾಂಕ್ ನೀತಿಯನ್ನು ಜಾರಿಗೊಳಿಸಬೇಕೆಗಾಗಿದೆ ಎಂದರು.
ಟೈಲರಿಂಗ್ ತರಭೇತಿ ಕೇಂದ್ರದ ನಿರ್ದೇಶಕ ರಾಘವೇಂದ್ರ ಮಾತನಾಡಿ ಎನ್.ಆರ್ ಕಾಲೋನಿಯ 100 ಮಹಿಳೆಯರಿಗೆ 30 ದಿನಗಳ ಟೈಲರಿಂಗ್ ತರಭೇತಿಗಳನ್ನು ಎರಡು ಬ್ಯಾಚ್ಗಳಲ್ಲಿ ನೀಡಲಾಗುತ್ತಿದ್ದು ಇದರ ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿ ಮುಂದಿನ ದಿನಗಳಲ್ಲಿ ಆರೋಗ್ಯ ಜಾಗೃತಿ ಸೇರಿದಂತೆ ಇನ್ನಿತರೆ ಕೌಶಲ್ಯ ತರಭೇತಿಯನ್ನು ಮಂಡಳಿಯ ಐಇಸಿ ಕಾರ್ಯಮದಡಿಯಲ್ಲಿ ಕೈಗೊಳ್ಳಲಾಗುವುದೆಂದರು.
ತುಮಕೂರು ಸ್ಲಂ ಸಮಿತಿಯ ಕಾರ್ಯದರ್ಶಿ ಅರುಣ್ ಮಾತನಾಡಿ ತರಭೇತಿಯಲ್ಲಿ ಭಾಗವಹಿಸುವ ಮಹಿಳೆಯರಿಗೆ ತರಭೇತಿ ಭತ್ಯೇ ನೀಡಲು ಮಂಡಳಿ ಮುಂದಾಗಬೇಕು. ಹಕ್ಕುಪತ್ರ ನೊಂದಣಿ, ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಬೇಕೆಂದರು.
ಈ ಕಾರ್ಯಕ್ರಮದಲ್ಲಿ ಸ್ಲಂ ಬೋರ್ಡ್ ಅಧೀಕ್ಷರಾದ ಜಗದೀಶ್, ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆಯ ಸಂಚಾಲಕರಾದ ಅನುಪಮಾ, ತುಮಕೂರು ಸ್ಲಂ ಸಮಿತಿಯ ಶಂಕ್ರಯ್ಯ, ಮೋಹನ್ ಟಿ.ಆರ್, ಮುಂತಾದವರು ಭಾಗವಹಿಸಿದ್ದರು.



