ತುಮಕೂರು:ಕುಸಿದಿರುವ ಕೊಬ್ಬರಿ ಬೆಲೆ ಹೆಚ್ಚಳದ ಬಗ್ಗೆ ಸಂಸತ್ ಸದಸ್ಯರು ಅಧಿವೇಶನದಲ್ಲಿ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿ ಇಂದು ಸಂಯುಕ್ತ ಹೋರಾಟ-ಕರ್ನಾಟಕ ವತಿಯಿಂದ ಇಂದು ಸಂಸದರ ಕಚೇರಿ ಇರುವ ಜಿಲ್ಲಾಧಿಕಾರಿಗಳ ಕಚೇರಿ ಬಳಿ ವಿವಿಧ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
ಸಂಯುಕ್ತ ಹೋರಾಟ-ಕರ್ನಾಟಕ ತುಮಕೂರು ಜಿಲ್ಲಾ ಘಟಕದ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ವಿವಿಧ ರೈತಪರ ಸಂಘಟನೆಗಳು ಮುಖಂಡರು,ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ ಕ್ವಿಂಟಾಲ್ಗೆ ೨೦ ಸಾವಿರ ರೂ ನೀಡಬೇಕು.ಹೋಬಳಿಗೊಂದು ನ್ಯಾಫೇಡ್ ಕೇಂದ್ರಗಳನ್ನು ತೆರೆದು ವರ್ಷವಿಡಿ ಕೊಬ್ಬರಿ ಖರೀದಿಸ ಬೇಕೆಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಕೊಬ್ಬರಿ ಬೆಲೆ ತೀವ್ರವಾಗಿ ಕುಸಿದಿದ್ದು,ಬೆಂಬಲ ಬೆಲೆಗಿಂತಲೂ ಕಡಿಮೆ ಅಂದರೆ ೭೫೦೦ ರೂಗಳಿಗೆ ಕ್ವಿಂಟಾಲ್ ಕೊಬ್ಬರಿ ಖರೀದಿಸಲಾಗುತ್ತಿದೆ.ತೋಟಗಾರಿಕಾ ಇಲಾಖೆಯೇ ಕೃಷಿ ಉತ್ಪನ್ನಗಳ ಬೆಲೆ ನಿಗಧಿ ಆಯೋಗ ನೀಡಿರುವ ವರದಿಯ ಪ್ರಕಾರ ಒಂದು ಕ್ವಿಂಟಾಲ್ ಕೊಬ್ಬರಿ ಬೆಳೆಯಲು ೧೬೭೩೦ ರೂ ಖರ್ಚಾಗುತ್ತದೆ.ಡಾ.ಎಂ.ಎಸ್.ಸ್ವಾಮಿನಾಥನ್ ಆಯೋಗದ ವರದಿ ಅನ್ವಯ ಉತ್ಪಾಧನಾ ವೆಚ್ಚ+ಶೇ೫೦ರ ಲಾಭ ಸೇರಿ ಬೆಂಬಲ ಬೆಲೆ ನಿಗಧಿ ಪಡಿಸಬೇಕಾಗಿದೆ.ಇದರ ಪ್ರಕಾರ ಒಂದು ಕ್ವಿಂಟಾಲ್ ಕೊಬ್ಬರಿಗೆ ಕನಿಷ್ಠ ೨೫೦೦೦ ರೂ ನೀಡಬೇಕಾಗುತ್ತದೆ.ಕೇಂದ್ರ ಸರಕಾರ ಕೂಡಲೇ ವೈಜ್ಞಾನಿಕ ಬೆಂಬಲಬೆಲೆ ಘೋಷಿಸಬೇಕು.ಹಾಗೂ ವರ್ಷವಿಡಿ ನ್ಯಾಫೇಡ್ ಮೂಲಕ ಕೊಬ್ಬರಿ ಖರೀದಿ ಮಾಡಬೇಕು ಎಂಬುದು ನಮ ಒತ್ತಾಯವಾಗಿದೆ ಎಂದರು.
ರಾಜ್ಯದಿAದ ಸುಮಾರು ೨೮ ಜನ ಸಂಸದರು ಆಯ್ಕೆಯಾಗಿದ್ದರೂ ಯಾರೊಬ್ಬರು ಕೊಬ್ಬರಿ ದರ ಕುಸಿತದ ಬಗ್ಗೆ ಅಧಿವೇಶನದಲ್ಲಿ ಮಾತನಾಡುತ್ತಿಲ್ಲ.ಕೊಬ್ಬರಿ ಬೆಳೆಯು ಸುಮಾರು ೧೫ ಜಿಲ್ಲೆಗಳ ಸಂಸದರು ಈ ಬಗ್ಗೆ ಚಕಾರವೆತ್ತುತ್ತಿಲ್ಲ. ಹಾಗಾಗಿ ಈ ಅಧಿವೇಶನದಲ್ಲಿ ಕೊಬ್ಬರಿ ದರ ಕುಸಿತದ ಬಗ್ಗೆ ಸಂಸದರು ಚರ್ಚಿಸಬೇಕು.ಅಲ್ಲದೆ ಶೂನ್ಯ ತೆರಿಗೆ ಅಡಿಯಲ್ಲಿ ನೆರೆ ಹೊರೆಯ ದೇಶಗಳಿಂದ ರಪ್ತಾಗುತ್ತಿರುವ ಖಾದ್ಯ ತೈಲ ಮತ್ತು ತೆಂಗಿನ ಉತ್ಪನ್ನಗಳನ್ನು ತಡೆ ಹಿಡಿಯುವಂತೆ ಸರಕಾರದ ಮೇಲೆ ಒತ್ತಡ ತರಬೇಕೆಂಬುದು ನಮ್ಮ ಹೋರಾಟವಾಗಿದೆ.ಇದರ ಭಾಗವಾಗಿಯೇ ಇಂದು ರಾಜ್ಯದ ಎಲ್ಲಾ ಸಂಸದ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಗುತ್ತಿದೆ ಎಂದು ಎ.ಗೋವಿಂದರಾಜು ತಿಳಿಸಿದರು.
ಸಂಯುಕ್ತ ಹೋರಾಟ-ಕರ್ನಾಟಕದದ ತುಮಕೂರು ಜಿಲ್ಲಾ ಸಂಚಾಲಕ ಸಿ.ಯತಿರಾಜು ಮಾತನಾಡಿ,ತಾಳೆ ಎಣ್ಣೆ ಮತ್ತು ಖಾದ್ಯ ತೈಲಗಳ ಎತ್ತೇಚ್ಚ ಅಮಧಿನ ಫಲವಾಗಿ ಇಂದು ಕೊಬ್ಬರಿ ಬೆಲೆ ಕುಸಿದಿದೆ. ಹಾಗಾಗಿ ಕೇಂದ್ರ ಸರಕಾರ ಕೂಡಲೇ ಶೂನ್ಯ ತೆರಿಗೆಯಲ್ಲಿ ಅಮದಾಗುತ್ತಿರುವ ಎಣ್ಣೆ ಕಾಳು ಮತ್ತು ಕೊಬ್ಬರಿ ಎಣ್ಣೆಯನ್ನು ಸಂಪೂರ್ಣ ನಿಷೇಧಿಸಬೇಕು.ಹಾಗೆಯೇ ರಾಜ್ಯದ ವಿಷಯದಲ್ಲಿ ಬರುವ ಕೃಷಿಯ ಸಂಪೂರ್ಣ ಜವಾಬ್ದಾರಿಯನ್ನು ರಾಜ್ಯಕ್ಕೆ ಬಿಡಬೇಕು. ಹಾಗಾದಾಗ ಮಾತ್ರ ಪ್ರಕಾಶ್ ಕಮ್ಮರಡಿ ಅವರ ಕೃಷಿ ಬೆಲೆ ನಿಗಧಿ ಆಯೋಗದ ವರದಿ ಜಾರಿಗೆ ಬರಲು ಸಾಧ್ಯ ಎಂದರು.
ಕುಸಿದಿರುವ ಕೊಬ್ಬರಿ ಬೆಲೆ, ಸಂಸತ್ ಸದಸ್ಯರು ಚರ್ಚೆ ನಡೆಸಬೇಕು
Leave a comment
Leave a comment