ಹೇಮಾವತಿ ನಾಲಾ ವಲಯ ಗೊರೂರು ಜಲಾಶಯದಿಂದ ತುಮಕೂರಿಗೆ ಹಂಚಿಕೆಯಾದ ನೀರಿನಲ್ಲೇ ಮಾಗಡಿ ಹಾಗೂ ರಾಮನಗರಕ್ಕೆ ಶ್ರೀರಂಗ ಯೋಜನೆ ಅಡಿ ನೀರು ಸೆಳೆಯುವ ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ವಿರೋಧಿಸಿ ನಡೆಯುತ್ತಿರುವ ಹೋರಾಟದ ಮುಂದಿನ ಹೆಜ್ಜೆಯ ಬಗ್ಗೆ ತುಮಕೂರು ನಗರದ ಸುಧಾ ಟಿ ಹೌಸ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೋರಾಟದ ನೇತೃತ್ವ ವಹಿಸಿರುವ ಮಾಜಿ ಸಚಿವರಾದ ಸೊಗಡು ಶಿವಣ್ಣನವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು.

ಸಭೆಯಲ್ಲಿ
ಹೇಮಾವತಿ ನೀರಿನ ತುಮಕೂರು ಜಿಲ್ಲೆಯ ಹಕ್ಕಿಗೆ ಬಗ್ಗೆ ಇದೇ ಮೇ 30 ರ ಬೆಳಗ್ಗೆ 10 ಘಂಟೆಗೆ ಜಿಲ್ಲೆಯ ಜನಪ್ರತಿನಿಧಿಗಳು, ಹೋರಾಟಗಾರರು, ತುಮಕೂರಿನ ಎಲ್ಲಾ ಸಂಘ ಸಂಸ್ಥೆಗಳು, ಸಂಘಟನೆಗಳು, ನಾಗರೀಕರು ಮತ್ತು ರೈತರನ್ನು ಒಳಗೊಂಡು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ.ಪರಮೇಶ್ವರ್ ರವರ ಹೆಗ್ಗೆರೆ ನಿವಾಸದ ಬಳಿ ಬೃಹತ್ ಪ್ರತಿಭಟನಾ ಸಭೆ ನಡೆಸಿ ಮನವಿ ಪತ್ರ ನೀಡುವ ಬಗ್ಗೆ ತೀರ್ಮಾನಿಸಲಾಯಿತು.
ದಿನಾಂಕ 30.05.2024 ರಂದು ಜಿಲ್ಲಾ ಉಸ್ತುವಾರಿ ಸಚಿವರ ಮನೆ ಮುಂಭಾಗ ಪ್ರತಿಭಟನೆ ನಡೆಸಲು ಹತ್ತು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗುಬ್ಬಿಯ ದಿಲೀಪ್ ಕುಮಾರ್ ಬೆಟ್ಟಸ್ವಾಮಿ ಬೆಳಗುಂಬ ಪ್ರಭಾಕರ, ಪಂಚಾಕ್ಷರಯ್ಯ, ಕು. ರಾಮಣ್ಣ, ತಿಪಟೂರಿನ ಪ್ರಸನ್ನ, ಕೆ ಪಿ ಮಹೇಶ್, ಹೊಸಹಳ್ಳಿಯ ಕುಮಾರಸ್ವಾಮಿ, ತರಕಾರಿ ಮಹೇಶ್, ರಾಮಚಂದ್ರ ರಾವ್ ಶಬ್ಬೀರ್ ಅಹ್ಮದ್, ರಂಗನಾಯಕ್ ಸೌಮ್ಯಗೌಡ ಉಪಸ್ಥಿತರಿದ್ದರು.



