ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಾದ ಮುನಿಸಿಪಾಲಿಟಿ/ ಮಹಾ ನಗರ ಪಾಲಿಕೆಗಳಲ್ಲಿ ಗುತ್ತಿಗೆ ಅಧಾರಿತ ಪೌರಕಾರ್ಮಿಕರು, ಲೋಡರ್, ಕಸದ & ಇತರೆ ವಾಹನ ಚಾಲಕರು. ಸಹಾಯಕರು, ನೀರು ಸರಬರಾಜು ವಿಭಾಗದ ಕಾರ್ಮಿಕರು, ಪಾರ್ಕ್, ಸ್ಮಶಾಣ,ಯು.ಜಿ.ಡಿ, ಘನತಾಜ್ಯ ವಿಲೆವಾರಿ, ಯು.ಜಿ.ಡಿ ನೀರು ಸಂಸ್ಕರಣಾ ಕಾರ್ಮಿಕರ ಪಾಲಿಕೆಗಳಲ್ಲಿ ದುಡಿಯುತ್ತಿರುವ ನೀರು ಸರಬರಾಜು ವಿಭಾಗದ ಕಾರ್ಮಿಕರ ಕಳೆದ ೧೫- ೨೦ ವರ್ಷಗಳಿಂದ ನಿರಂತರವಾಗಿ ನಾಗರೀಕರಿಗೆ ಅಗತ್ಯವಾದ ಸ್ವಚ್ಚತೆ, ಯು.ಜಿ.ಡಿ. ನೀರು ಸರಬರಾಜು ವಿಭಾಗದಲ್ಲಿ ನಿರಂತರವಾಗಿ ದುಡಿಯುತ್ತಿರುವ ಕಾರ್ಮಿಕರು ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ವಿಬಜನೆ ಮಾಡಿ ಪರಸ್ಪರ ಕಿತ್ತಾಡುವಂತೆ ಮಾಡಿರುವ ಅಧಿಕಾರಿಗಳ ನಡೆಯನ್ನುಯ ತಿರ್ವ್ರವಾಗಿ ಖಂಡಸಿರುವ ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಸೈಯದ್ ಮುಜೀಬ್ ಅವರು ನೂತನ ಸರ್ಕಾರ ಎಲ್ಲಾ ಮುನಿಸಿಪಲ್ ಕಾರ್ಮಿಕರಿಗೆ “ ಖಾಯಂಮಾತಿ ಗ್ಯಾರೆಂಟಿ “ ನೀಡುವಂತೆ ಒತ್ತಾಯಿಸಿದರು
ಅವರು ಪೌರ ಕಾರ್ಮಿಕರು, ಕಸದ ವಾಹನ ಚಾಲಕರ. ನೀರು ಸರಬರಾಜು ನೌಕರ, ಯು.ಜಿ.ಡಿ. ಶೌಚಾಲಯ ಕಾರ್ಮಿಕರ ಸಂಘಗಳು ಜಂಟಿಯಾಗಿ ದಿ; ೧೦-೧೧-೨೦೨೩ ರಂದು ಮಧ್ಯನ್ಹö್ನ-೨-೩೦ ಕ್ಕೆ ತುಮಕೂರು ಜಿಲ್ಲಾಧಿಕಾರಿಗಳ ಕಛೇರಿ ಎದುರು ಸೇವೆ ಖಾಯಂಮಾತಿ ಮತ್ತು ನೇರ ಪಾವತಿಯಡಿಯಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡ ಬೇಕು ಎಂದು ಒತ್ತಾಯಿಸಿ ನಡೆಸಿದ ಪ್ರತಿಭಟನೆಯನ್ನು ಉದ್ದೆಶಿಸಿ ಮಾತನಾಡುತ್ತಿದ್ದರು.
ವಾಹನ ಚಾಲಕರ ಸಂಘದ ಅಧ್ಯಕ್ಷ ಪ್ರಕಾಶ್ ಮಾತನಾಡಿ ಖಾಯಂಗೊಳಿಸುವ ತನಕ ಎಲ್ಲಾ ಕಾರ್ಮಿಕರಿಗೆ ನೇರ ಪಾವತಿಯಡಿಯಲ್ಲಿ ಸಂಬಳ ನೀಡಬೇಕು. ಸುಪ್ರೀಂ ಕೋರ್ಟನ ತೀರ್ಪಿನಂತೆ ಎಲ್ಲಾ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು,
ನೀರು ಸರಬರಾಜು ನೌಕರರ ಸಂಘದ ಅಧ್ಯಕ್ಷರಾದ ಕುಮಾರ್ ಎಲ್ಲಾ ಕಾರ್ಮಿಕರಿಗೆ ದಿನದಲ್ಲಿ ಎಂಟು ಗಂಟೆ ಕೆಲಸ, ಹೆಚ್ಚುವರಿ ಕೆಲಸಕ್ಕೆ ಕಾನೂನು ಬದ್ದ ವೇತನ, ವಾರದಲ್ಲಿ ಸಂಬಳ ಸಹಿತ ರಜೆ, ರಾಷ್ಟಿçÃಯ ಹಬ್ಬಗಳ, ಹಬ್ಬಗಳರಜೆ, ಗಳಿಕೆ ರಜೆ, ಅನಾರೋಗ್ಯ ರಜೆ, ಹತ್ತಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ / ಮರಣ ಹೊಂದುವ ಮುನಿಸಿಪಲ್ ಕಾರ್ಮಿಕರು/ ಅವಲಂಬಿತರಿಗೆ ಉಪಧನ ನೀಡುವ ಸರ್ಕಾರ ಕ್ರಮ ವಹಿಸಲು ವಿನಂತಿಸಿದರು
ಕಸದ ವಾಹನ ಚಾಲಕರ ಮತ್ತು ಸಹಾಯ, ಕ್ಲಿನರ್ಗಳ ಸಂಘದ ಕಾರ್ಯದರ್ಶಿಮಾರುತಿ ಮಾತನಾಡಿ ಎಲ್ಲಾ ಗುತ್ತಿಗೆ ಮುನಿಸಿಪಾಲ್ ಕಾರ್ಮಿಕರು ಅಲ್ಪ ವೇತನದಲ್ಲಿ ಬದುಕುತ್ತಿರುವ ಕಾರಣ ಎಲ್ಲರಿಗೂ ಸರ್ಕಾರದ ಗೃಹಭಾಗ್ಯ ಯೋಜನೆಯಡಿಯಲ್ಲಿ ಒಳಗೊಂಡು ಉಚಿತ ನೀವೇಶನವನ್ನು ನೀಡಬೇಕು,
ಜಿಲ್ಲಾಧಿಕಾರಿಗಳ ಅಗಮನಕ್ಕೆ ಪಟ್ಟು ಹಿಡಿದ ಪ್ರತಿಭಟನಾಕಾರರು. ಪ್ರತಿಭಟನಾಕರರು ಜಿಲ್ಲಾ ಮಟ್ಟದ ಅಧಿಕಾರಿಗಳು ಬಂದು ಅಹವಾಲು ಸ್ವಿಕರಿಸುವಂತೆ ಪಟ್ಟು ಹಿಡಿದರು ತಹಸೀಲ್ದಾರ್ ಪೋನ್ ಮೂಲಕ ವಿನಂತಿಸಿದರು. ನಂತರ ಶಿರಸ್ಥೇದ್ದಾರ್ ಬಂದು ಕಾದರು ಕಡೆಗೆ ಜಿಲ್ಲಾಧಿಕಾರಿಗಳು ಜಿಲ್ಲಾ ಯೋಜನಾ ನಿರ್ದೇಶಕರಾದ ಅಂಜನಪ್ಪ ಅವರು ಬಂದು ಮನವಿ ಸ್ವಿಕರಿಸಿ ಸಭೆ ನಡೆಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು
ಕಾರ್ಮಿಕ ಕಾನೂನುಗಳ ಜಾರಿಗೆ ಸಂಬAದಿಸಿದAತ ಕಾರ್ಮಿಕ ನಿರಿಕ್ಷಕರಾದ ವೆಂಟಕಶ್ ಬಾಬು ಅವರಿಗೆ ಮನವಿ ಸಲ್ಲಿಸಲಾಯಿತು . ತುಮಕೂರು ಪೌರ ಕಾರ್ಮಿಕ ಸಂಘದ ಕಾರ್ಯಧರ್ಶಿ ಎನ್.ಕೆ.ಸುಬ್ರಮಣ್ಯ, ಮಂಜುನಾಥ್ ಆಂಜನ ಮೂರ್ತಿ , ತುಮಕೂರು ಮಹಾ ನಗರ ಪಾಲಿಕೆ ಕಸದ ವಾಹನ ಚಾಲಕರು ಮತ್ತು ಸಹಾಯಕರ ಸಂಘ. ಖಚಾಂಚಿ ಮಂಜುನಾಥ್, ಉಪಾಧ್ಯಕ್ಷ ರಾಮಚಂದ್ರು, ತನ್ವೀರ್,ಸಾಧಿಕ್ , ಸಹ ಕಾರ್ಯಧರ್ಶಿ ಅನಂದ ಕುಮಾರ್, ,ð,ಗಂಗಾಧರ್ ವಾಹನ ಚಾಲಕ ಸಂಘದ ಖಜಾಂಚಿ ಎನ್ ನಾಗರಾಜುಯ ಮುಂದಾಳತ್ವ ವಹಿಸಿದ್ದರು