ಕ್ಯಾತ್ಸಂದ್ರ ಗೋಕಟ್ಟೆ ಪ್ರಕರಣ – ತಲಾ ೨ಲಕ್ಷ ರೂ. ಪರಿಹಾರ
ತುಮಕೂರು(ಕ.ವಾ.)ಆ.೧೪: ಕ್ಯಾತ್ಸಂದ್ರದ ಸಿದ್ಧಗಂಗಾಮಠದ ಬಳಿ ಇರುವ ಗೋಕಟ್ಟೆಯಲ್ಲಿ ಕಾಲು ಜಾರಿ ಬಿದ್ದ ರಂಜಿತ್ ನನ್ನು ರಕ್ಷಿಸಲು ಆತನ ತಾಯಿ ಲಕ್ಷ್ಮೀ ಸ್ನೇಹಿತರಾದ ಶಂಕರ, ಹರ್ಷಿತ್ ಮತ್ತು ಮಹದೇವಪ್ಪ ಈ ನಾಲ್ವರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನಾ ಸ್ಥಳಕ್ಕೆ ಮಾನ್ಯ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ರವರು ಅಧಿಕಾರಿಗಳೊಂದಿಗೆ ಖುದ್ದು ಭೇಟಿ ನೀಡಿ ಶ್ರೀ ಮಠದ ಸ್ವಾಮಿಜೀಗಳೊಂದಿಗೆ ಈ ಕುರಿತಾಗಿ ಚರ್ಚಿಸಿದರು.
ಬಳಿಕ ಮೃತರ ಕುಟುಂಬಸ್ಥರೊAದಿಗೆ ಮಾತನಾಡಿ ಅವರಿಗೆ ಸಾಂತ್ವನ ಹೇಳಿದರಲ್ಲದೆ, ಸ್ಥಳದಲ್ಲಿಯೇ ಮಾನ್ಯ ಮುಖ್ಯಮಂತ್ರಿಗಳನ್ನು ದೂರವಾಣಿಯ ಮೂಲಕ ಸಂಪರ್ಕಿಸಿ ಮೃತ ಕುಟುಂಬಕ್ಕೆ ತಲಾ ೨ ಲಕ್ಷ ರೂ.ಗಳ ಪರಿಹಾರವನ್ನು ಘೋಷಣೆ ಮಾಡಿದರು. ಮೃತರ ಆತ್ಮಕ್ಕೆ ಶಾಂತಿ ಕೋರಿ, ಇಂತಹ ದುರ್ಘಟನೆಗಳು ಮರುಕಳಿಸದಂತೆ ಮುಂಜಾಗೃತ ಕ್ರಮಗಳನ್ನು ಅನುಸರಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಶಾಲೆಗಳ ಸುತ್ತಮುತ್ತ ಇರುವಂತಹ ಕೆರೆ ಕಟ್ಟೆ ಸ್ಥಳಗಳಿಗೆ ಮಕ್ಕಳು ತೆರಳದಂತೆ ಪೋಷಕರು ಮಕ್ಕಳಿಗೆ ತಿಳಿ ಹೇಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಜಿ.ಪ್ರಭು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ಕುಮಾರ್ ಶಹಾಪೂರ್ವಾಡ್ ಉಪಸ್ಥಿತರಿದ್ದರು.
ಕ್ಯಾತ್ಸಂದ್ರ ಗೋಕಟ್ಟೆ ಪ್ರಕರಣ – ತಲಾ ೨ಲಕ್ಷ ರೂ. ಪರಿಹಾರ

Leave a comment
Leave a comment


