ಹಾಸ್ಟೆಲ್ ಊಟ ಸವಿದು ಇತರೆ ಅಧಿಕಾರಿಗಳಿಗೆ ಮಾದರಿಯಾದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ
ತುಮಕೂರು: ಜೂ. ಎಲ್ಲರಿಗೂ ಸರ್ಕಾರಿ ಸೇವೆ ಮಾಡುವ ಅವಕಾಶ ದೊರೆಯುವುದಿಲ್ಲ,ಸೇವೆಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯಾರು ಸರಿಯಾಗಿ ಸ್ಪಂದಿಸುತ್ತಾರೋ ಅವರು ಬಹಳ ದಿನ ಜನ-ಮನದಲ್ಲಿ ಉಳಿದುಕೊಳ್ಳುತ್ತಾರೆ ಅದೇ ರೀತಿಯಾಗಿ ಸರಳ ಸಜ್ಜನಿಕೆ ಸಮಾಜಮುಖಿ ಅಧಿಕಾರಿಯಾದ ತುಮಕೂರು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ಅವರು ಪರಿಶೀಲನಾ ನೇಪದಲ್ಲಿ ಹಾಸ್ಟೆಲ್ ಒಂದರ ಮಧ್ಯಾಹ್ನದ ಊಟ ತರಿಸಿಕೊಂಡು ಊಟ ಸವಿದು ಇತರೆ ಅಧಿಕಾರಿಗಳಿಗೆ ಮಾದರಿ ಯಾಗಿದ್ದಾರೆ.
ಜಿಲ್ಲೆಯ ಎಲ್ಲಾ ವಸತಿ ಶಾಲೆಗಳಿಗೆ ಮತ್ತು ಹಾಸ್ಟೆಲ್ ಗಳಿಗೆ ಭೇಟಿ ನೀಡಿ ಉನ್ನತ ಅಧಿಕಾರಿ ಎಂಬ ಅಹಂಕಾರವಿಲ್ಲದೆ
ವಸತಿ ಶಾಲೆಯ ಮತ್ತು ಹಾಸ್ಟೆಲ್ ನ ಇಂದಿನ ಪೀಳಿಗೆಯಲ್ಲಿ ಶಿಸ್ತು ಬರುವುದು ಕಷ್ಟ ಮತ್ತು ಅದನ್ನು ಕಾಪಾಡಿ ಸುಧಾರಣೆ ಮಾಡುವುದು ಮತ್ತೊಂದು ಕಾರ್ಯವಾಗಿರುತ್ತದೆ ಇದಲ್ಲದೆ ಪೋಷಕರು ಮತ್ತು ಕೆಳ ಅಧಿಕಾರಿಗಳ ಆಡಳಿತವನ್ನು ನಿರ್ವಹಿಸುವಲ್ಲಿ ತುಂಬಾ ಕ್ಲಿಷ್ಟಕರವಾಗಿರುತ್ತದೆ.ಸರ್ಕಾರದ ನಿಯಮಗಳು ಮತ್ತು ನಿಬಂಧನೆಗಳಿಗೆ ಸಾಮೂಹಿಕ ಅನುಸರಣೆ ಇದ್ದಾಗ, ಅವು ಮನೆಯ ವಾತಾವರಣಕ್ಕಿಂತ ಹೆಚ್ಚಾಗಿ ಅಂಟಿಕೊಳ್ಳುತ್ತವೆ ನಿಯಮಗಳು ಮತ್ತು ನಿಬಂಧನೆಗಳು ಯಶಸ್ವಿ ಮತ್ತು ಆರೋಗ್ಯಕರ ಜೀವನಕ್ಕೆ ಮಾರ್ಗವನ್ನು ಒದಗಿಸುತ್ತವೆ.
ರಚನಾತ್ಮಕ ಜೀವನ ವಿಧಾನವು ಭವಿಷ್ಯದ ಜೀವನದ ಸವಾಲುಗಳನ್ನು ಎದುರಿಸಲು ಅಗತ್ಯವಾದ ಶಿಕ್ಷಣದ ಹರಿವು ಮುಖ್ಯವಾಗಿರುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಮಕ್ಕಳ ಭವಿಷ್ಯಕ್ಕೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಕೃಷ್ಣಪ್ಪ ನವರು
ಅಲ್ಲಿಯೇ ಊಟ ಮಾಡಿ ವಿದ್ಯಾರ್ಥಿಗಳು ತಿನ್ನುವ ಆಹಾರವನ್ನು ಪರೀಕ್ಷೆ ಮಾಡುತ್ತಾರೆ.ಮತ್ತು ಕಚೇರಿ ಕೆಲಸ ಮಾಡುವಾಗ ಕಚೇರಿ ವ್ಯಾಪ್ತಿಯ ಅಕ್ಕ ಪಕ್ಕದ ಹಾಸ್ಟೆಲ್ ಗಳಿಂದ ಒಂದೊಂದು ದಿನ ಒಂದೊಂದು ಕಡೆಯಿಂದ ಊಟ ತರಿಸಿ ಊಟ ಮಾಡುತ್ತಾರೆ, ಊಟದಲ್ಲಿ ಸ್ವಚ್ಛತೆಯನ್ನು ಕಾಪಾಡದ ಹಾಸ್ಟೆಲ್ ವಾರ್ಡನ್ ಗಳಿಗೆ ತಕ್ಷಣವೇ ನೋಟಿಸ್ ಜಾರಿ ಮಾಡುತ್ತಾರೆ.
ಇಂತಹ ಸರಳ ಮತ್ತು ದಕ್ಷ ಅಧಿಕಾರಿಗಳು ನಮ್ಮ ತುಮಕೂರು ಜಿಲ್ಲೆಗೆ ಅನಿವಾರ್ಯತೆಯು ಸಹ ಇದೆ,ಇದೇ ರೀತಿಯ ಮಾದರಿಯನ್ನು ತಾಲೂಕು ಅಧಿಕಾರಿಗಳು ಸಹ ಅನುಸರಿಸಿದ್ದೇ ಆದರೇ ತುಮಕೂರು ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯನ್ನು ಮೊದಲ ಸ್ಥಾನದಲ್ಲಿ ನೋಡಬಹುದು.