ಕಲಬುರಗಿ : ಅವ್ವಣ್ಣ ಮ್ಯಾಕೇರಿ ಅವರಿಗೆ ಕಲಬುರಗಿ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಕೋಲಿ ಕಬ್ಬಲಿಗ್ ಸಮನ್ವಯ ಸಮಿತಿ ಪಕ್ಷದ ವರಿಷ್ಟರಿಗೆ ಆಗ್ರಹಿಸಿದೆ. ಕಲಬುರಗಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೋಲಿ ಕಬ್ಬಲಿಗ ಸಮನ್ವಯ ಸಮಿತಿಯ ಹಾಗೂ ಕೋಲಿ ಸಮಾಜದ ಮುಖಂಡ ಪ್ರೇಮ ಕೋಲಿ ಯವರು ಕೋಲಿ/ಕಬ್ಬಲಿಗ ಸಮಾಜದ ಪ್ರಭಾವಿ ಹಿಂದುಳಿದ ನಾಯಕರು ಮತ್ತು ಬಿಜೆಪಿ ಪಕ್ಷದ ನಿಷ್ಠಾವಂತ ಮುಖಂಡರು ಹಾಗೂ ಒಂದೇ ಪಕ್ಷದಲ್ಲಿ ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಬಂದ ಅವ್ವಣ್ಣ ಮ್ಯಾಕೇರಿ ಯವರು ಹಿಂದುಳಿದ ನಾಯಕರು ಅಷ್ಟೇ ಅಲ್ಲದೇ ಎಲ್ಲಾ ಸಮಾಜದ ಜೊತೆ ಅನೋನ್ಯತೆಯಿಂದ ವಿಶ್ವಾಸಗಳಿಸಿರುವ ನಾಯಕರು. ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಯಾವುದೇ ಸಮಾಜದಲ್ಲಿ ಅನ್ಯಾಯ ನಡೆದರೂ,ಅದರ ಬಗ್ಗೆ ಧ್ವನಿ ಎತ್ತುವ ಹುಟ್ಟು ಹೋರಾಟಗಾರರು.ಕಲಬುರಗಿ ಜಿಲ್ಲೆಯಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಕೋಲಿ ಸಮಾಜದ ನಾಯಕರು ಮಾತ್ರವಲ್ಲದೆ,ಎಲ್ಲಾ ಸಮಾಜದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ನಾಯಕರು, ಪಕ್ಷದ ಸಂಘಟನೆ ಹಾಗೂ ಪಕ್ಷವು ವಹಿಸಿರುವ ಸ್ಥಳಿಯದಿಂದ ರಾಜ್ಯ ಮಟ್ಟದವರೆಗೆ ಎಲ್ಲಾ ಜವಾಬ್ದಾರಿಗಳನ್ನು ಅತ್ಯಂತ ಯಶಸ್ವಿಯಾಗಿ
ನಿರ್ವಹಿಸಿರುತ್ತಾರೆ.ಅದರಂತೆ ಸಮಾಜದಲ್ಲಿರುವ ಅನ್ಯಾಯ, ಅತ್ಯಾಚಾರ, ಕೊಲೆ, ಅನೈತಿಕ ಚಟುವಟಿಕೆಗಳ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವ ಮುಖಾಂತರ ಬಡವರಿಗೆ ನ್ಯಾಯ ಒದಗಿಸುವ ಕೆಲಸ ಮಾಡುವ ಏಕೈಕ ನಾಯಕ ಶ್ರೀ ಅವ್ವಣ್ಣ
ಮ್ಯಾಕೇರಿಯವರು ಮಾಡಿರುತ್ತಾರೆ.ಇವರ ಪ್ರತಿಭೆಯನ್ನು ಗುರುತಿಸಿದ ರಾಜ್ಯ ಬಿಜೆಪಿ ಪಕ್ಷ ಇವರನ್ನು ಈ ಹಿಂದೆ ಬಿಜೆಪಿ ಜಿಲಾದ್ಯಕ್ಷರನ್ನು ನೇಮಿಸಿತು.ಅದರಂತೆ ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ಮಾಜಿ ಶಾಸಕರು ಅಭಿನಂದನೆ ಸಲ್ಲಿಸಿ, ಆದೇಶ ಪತ್ರ ಹೊರಡಿಸಿವುದು ಮಾತ್ರ ಬಾಕಿ ಇತ್ತು ಆದರೆ ಇವರು ಅಫಜಲಪೂರ ಮತಕ್ಷೇತ್ರದಲ್ಲಿ ಪ್ರಬಲ ಶಕ್ತಿಶಾಲಿ ನಾಯಕರಾಗಿ ಬೆಳೆಯುತ್ತಾರೆ ಎಂಬ ದುರುದ್ದೇಶದಿಂದ ಶ್ರೀ ಮಾಲೀಕಯ್ಯ ಗುತ್ತೇದಾರ ಇವರು ಬಿಜೆಪಿ ವರಿಷ್ಠರ ಮೇಲೆ ಒತ್ತಡ ಹೇರಿ ಇವರನ್ನು ಜಿಲ್ಲಾಧ್ಯಕ್ಷ ಸ್ಥಾನದಿಂದ ವಂಚಿತರನ್ನಾಗಿ ಮಾಡಿದರೂ. ಇದರಿಂದ ಕೋಪಿತವಾದ ಕೂಲಿ ಸಮಾಜ ಪ್ರತಿಭಟನೆಗಳು ಮಾಡಿದಾಗ
ಸಮಾಧಾನ ಮಾಡಿಸಿ ತಾತ್ಕಾಲಿಕವಾಗಿ ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿತು.ಪಕ್ಷದ ರಾಜ್ಯಾಧ್ಯಕ್ಷರು ಮುಂದಿನ ದಿನಗಳಲ್ಲಿ ಜಿಲ್ಲಾಧ್ಯಕ್ಷರ ಬದಲಾವಣೆ ಸಂಧರ್ಭದಲ್ಲಿ ಅವ್ವಣ್ಣ ಮ್ಯಾಕೇರಿ ಇವರನ್ನು
ಪರಿಗಣಿಸುತ್ತೇವೆ ಎಂದು ಆಶ್ವಾಸನೆ ನೀಡಿರುತ್ತಾರೆ,
ಅದ್ದರಿಂದ ಕಲಬುರಗಿ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷರ ಸ್ಥಾನ ಬದಲಾವಣೆ ಖಚಿತವಾಗಿದ್ದು, ಈ ಸುದ್ದಿಗೋಷ್ಠಿ ಮೂಲಕ ಕಲಬುರಗಿ ಜಿಲ್ಲೆಯ ಬಿ.ಜೆ.ಪಿ ಪಕ್ಷದ ಎಲ್ಲಾ ಮುಖಂಡರಿಗೂ ಹಾಗೂ ರಾಜ್ಯದ್ಯಕ್ಷರಿಗೂ ಅವ್ವಣ್ಣ ಮ್ಯಾಕೇರಿ ಯವರಿಗೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಬೇಕು ಎಂದು ಈ ಮೂಲಕ ಆಗ್ರಹ ಮಾಡುತ್ತೇನೆ ಎಂದರು. ಅಷ್ಟೇ ಅಲ್ಲದೆ ಅವ್ವಣ್ಣ ಮ್ಯಾಕೇರಿ ಇವರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡಿದ್ದಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಇನ್ನಷ್ಟು ಶಕ್ತಿ ಶಾಲಿಯಾಗಿ ಬೆಳೆಯುತ್ತೆ ಆದುದ್ದರಿಂದ ವರಿಷ್ಟರು ಹೆಚ್ಚಿನ ಆಸಕ್ತಿ ವಹಿಸಿ ಅವ್ವಣ್ಣ ಮ್ಯಾಕೇರಿಯವರನ್ನು ಕಲಬುರಗಿ ಬಿಜೆಪಿ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಕಾಂತ ಕಿರಸಾವಳಗಿ,ಭೋಗೇಶ ಜಮಾದಾರ, ಮಲ್ಲಿಕಾರ್ಜುನ ಉದನೂರು, ಪ್ರೇಮ ಕೋಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.