ತುಮಕೂರು : ರಾಜ್ಯದಲ್ಲಿ ಕನ್ನಡ ನಾಮಫಲಕ 60 ಭಾಗ, ಇಂಗ್ಲೀಷ್ 40 ಭಾಗ ಸರ್ಕಾರ್ ಆದೇಶವಿದ್ದು ತುಮಕೂರಿನಲ್ಲಿ 60 ಇಂಗ್ಲೀಷ್ ಬಳಕೆಯಾಗಿದ್ದು ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಇಂದು ತುಮಕೂರು ಜಿಲ್ಲಾದಿಕಾರಿಗಳಿಗೆ ಕರ್ನಾಟಕ ರಾಜ್ಯ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆಯ ಜಿಲ್ಲಾಧ್ಯಕ್ಷರಾದ ಅರುಣ್ ಕುಮಾರ್ ರವರು ಮನವಿಯನ್ನು ಸಲ್ಲಿಸಿದರು.ತಮ್ಮ ಮನವಿಯಲ್ಲಿ ತುಮಕೂರು ಜಿಲ್ಲೆಯಲ್ಲಿ ಕನ್ನಡ ನಾಮಫಲಕ ಸರ್ಕಾರ ಕನ್ನಡ ನಾಮಫಲಕ ಬಳಸಬೇಕೆಂದು ಸರ್ಕಾರದಿಂದ ಆದೇಶವಾಗಿದ್ದು, ಆದರು ಸಹಿತ ಯಾವುದೇ ರೀತಿಯಾಗಿ ನಾಮಫಲಕವನ್ನು ಜಿಲ್ಲೆಯಲ್ಲಿ ಕನ್ನಡ ಬಳಸದೆ ಅಧಿಕವಾಗಿ ಪರಭಾಷೆಯನ್ನು ಬಳಸುತ್ತ ಕನ್ನಡಕ್ಕೆ ಅವಮಾನ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಇರುವಂತಹ ನಾಮಫಲಕಗಳನ್ನು ಕನ್ನಡಲ್ಲಿ ಬಳಸಬೇಕೆಂದು ಖಡ್ಡಾಯವಾಗಿ ಮಾನ್ಯ ಜಿಲ್ಲಾಧಿಕಾರಿಗಳು ಈ ಕೂಡಲೇ ಆದೇಶ ನೀಡಬೇಕು ಹಾಗೇಯೇ ಜಿಲ್ಲೆಯಲ್ಲಿ ಎಳೆನೀರು ಅಧಿಕೃತವಾಗಿ 50-60 ರೂಗಳಿಗೆ ಕೆಲ ದಲ್ಲಾಳಿಗಳು ಮಾರಾಟ ಮಾಡುತ್ತಿದ್ದು ರೈತರಿಗೆ ಕನಿಷ್ಠ ಬೆಲೆ 10, 12, 15 ರೂಗಳಿಗೆ ಖರೀದಿ ಮಾಡಿ ಜನರಿಗೆ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಡುತ್ತಿದ್ದು ರೈತರಿಗೆ ಅನ್ಯಾಯವಾಗುತ್ತಿದ್ದು ಈ ಕೂಡಲೇ ಮಾನ್ಯ ಜಿಲ್ಲಾಧಿಕಾರಿಗಳು ಇದನ್ನು ಕೂಡ ನಿಗಧಿತ ಬೆಲೆಯಲ್ಲಿ ಮಾರಾಟ ಮಾಡಲು ಸೂಚನೆ ನೀಡಬೇಕೆಂದು ಹಾಗೂ ಬೇಸಿಗೆ ಸಮೀಪಿಸುತ್ತಿದ್ದ ಇದನ್ನ ಅರಿತು ಎಳೆನೀರು ವ್ಯಾಪಾರಿಗಳು ಸಾರ್ವಜನಿಕರ ಜೇಬಿಗೆ ಕತ್ತರಿ ಕತ್ತರಿಹಾಕುವದನ್ನು ಸರ್ಕಾರ ಮತ್ತು ಜಿಲ್ಲಾಡಳಿತ ತಡೆಗಟ್ಟುವ ನಿಟ್ಟಿನಲ್ಲಿ ಎಳೆನೀರು ವ್ಯಾಪಾರಿಗಳಿಗೆ ತಿಳುವಳಿಕೆ ಪತ್ರ ಹಾಗೂ ಸಾರ್ವಜನಿಕರಿಗೂ ರೈತರಿಗೂ ಈ ಕುರಿತು ಅರಿವು ಮೂಡಿಸಬೇಕೆಂದು ಒತ್ತಾಯಿಸಿ ಮನವಿಯನ್ನು ಸಲ್ಲಿಸಿದ್ದಾರೆ.ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಅರುಣ್ ಕುಮಾರ್ ರಾಜ್ಯಾಧ್ಯಕ್ಷರು ರಾಜು ರಾಜ್ಯ ಕಾರ್ಯದರ್ಶಿ ಲಕ್ಷ್ಮಣ್ ರಾಜ್ಯ ಉಪಾಧ್ಯಕ್ಷರು ಮಹದೇವ್ ಕಾರ್ಮಿಕ ಜಿಲ್ಲಾಧ್ಯಕ್ಷರು ಯತೀಶ್ ಯುವ ಜಿಲ್ಲಾಧ್ಯಕ್ಷರು ಕಿರಣ್ ರಾಜ್ಯ ಉಪಾಧ್ಯಕ್ಷರು ಕಾರ್ಮಿಕರ ಶ್ರೀನಿವಾಸ್ ಜಿಲ್ಲಾ ಕಾರ್ಯದರ್ಶಿ ರೋಷನ್ ಜುಬೇರ್ ಪಾಷಾ



