ಅಫಜಲಪೂರ : ಭೀಕರ ರಸ್ತೆ ಅಫಘಾತ ಸಂಭವಿಸಿ ಇಬ್ಬರು ರೈತರು ಧಾರುಣವಾಗಿ ಮೃತ ಪಟ್ಟಿರುವ ಘಟನೇ ಅಫಜಲಪೂರ ತಾಲೂಕಿನ ಗಡಿ ಗ್ರಾಮ ಬಡದಾಳದಲ್ಲಿ ನಡೆದಿದೆ, ಮೃತರು ಸುರೇಶ ನೀಲಂಗಿ (45) ಅಲ್ಲವುದ್ದಿನ್ ಆವೇರಿ (55) ಎಂದು ಹೇಳಲಾಗಿದೆ. ಇಬ್ಬರು ರೈತರು ಕೃಷಿ ಚಟುವಟಿಕೆಗೆ ಅವಶ್ಯಕವಾಗಿರುವ ರಸಗೊಬ್ಬರ, ಬೀಜ ತರಲು ಆಫ್ಜಲ್ಪುರಕ್ಕೆ ತೆರಳಿ ನಂತರ ಮರಳಿ ಗ್ರಾಮಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ಅಫಘಾತ ಸಂಭವಿಸಿದೆ.ಗ್ರಾಮದ ಸಮೀಪ ಟಿಪ್ಪರ, ಹಾಗೂ ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಪರಿಣಾಮ ಸ್ಥಳದಲ್ಲೇ ಭೀಕರವಾಗಿ ಇಬ್ಬರು ಧರುಣವಾಗಿ ಮೃತಪಟ್ಟಿದ್ದಾರೆ. ಇಬ್ಬರು ರೈತರ ನಿಧನಕ್ಕೆ ಕುಟುಂಬದಲ್ಲಿ ನೀರವ ಮೌನ ಆವರಿಸಿದ್ದು ಕುಟುಂಬ ಬೀದಿಗೆ ಬಂದಿದೆ. ಅಫಘಾತ ಸ್ಥಳಕ್ಕೆ ಆಫ್ಜಲ್ಪುರ್ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಸಾರ್ವಜನಿಕರು ಟಿಪ್ಪರ್ ಚಾಲಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸೂಕ್ತ ಪರಿಹಾರಕ್ಕೆ ಆಗ್ರಹಿಸಿದ್ದಾರೆ,