ಎಸ್ ವೀಕ್ಷಕರೆ ವಿದ್ಯುತ ತಂತಿ ಸ್ಪರ್ಶಸಿ ಎತ್ತು ಸಾವನೊಪ್ಪಿದ ಹೃದಯ ವಿದ್ರಾವಕ ಘಟನೆ ಅಫಜಲಪುರ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ನಡೆದಿದೆ, ಶ್ರೀಶೈಲ ಹಣಮಂತ ಹರಸೂರ ಎಂಬುವ ಅಂಕಲಗಿ ಗ್ರಾಮದ ಹೊಸ ಬಡಾವಣೆ ರೈತನಾಗಿದ್ದು ಮುಂಜಾನೆಯ ಸಮಯದಲ್ಲಿ ಕೃಷಿ ಚಟುವಟಿಕೆಗೆಂದು ಎತ್ತಿನ ಬಂಡಿ ಕಟ್ಟಿಕೊಂಡು ಹೋಗುತ್ತಿರುವಾಗ ಮಾರ್ಗ ಮದ್ಯದಲ್ಲಿ ವಿದ್ಯುತ ತಂತಿ ತುಂಡಾಗಿ ಬಿದ್ದಿದ್ದು ರೈತ ಗಮನಿಸದೆ ಇದ್ದಾಗ ಎತ್ತು ಮುಂದಕ್ಕೆ ಸಾಗಿ ವಿದ್ಯುತ ತಂತಿಯ ಮೇಲೆ ಕಾಲಿಟ್ಟು ಸ್ಥಳದಲ್ಲೆ ಮೃತ ಪಟ್ಟಿದೆ. ಸುಮಾರು ಒಂದು ಲಕ್ಷ ರೂಪಾಯಿ ಬೆಲೆ ಬಾಳುವ ಎತ್ತು ಕಳೆದುಕೊಂಡು ರೈತ ಕಂಗಲಾಗಿದ್ದಾನೆ.ವಿಷಯ ತಿಳಿದ ಪಶು ವೈದ್ಯಧಿಕಾರಿಗಳು, ಜೇಸ್ಕಾಂ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಪಂಚನಾಮೇ ಮಾಡಿಕೊಂಡು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ, ಮತ್ತು ಸೂಕ್ತ ಪರಿಹಾರಕ್ಕಾಗಿ ಗ್ರಾಮಸ್ಥರು ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.