CEN ಪೊಲೀಸ್ ಠಾಣೆಯ ಕಲಬುರಗಿ ನಗರದ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ಗಳು ಕಳೆದುಕೊಂಡ ಬಗ್ಗೆ E-Lost ಮತ್ತು CEIR PORTAL ನಲ್ಲಿ ತಮ್ಮ ದೂರುಗಳನ್ನು ದಾಖಲಿಸಿರುತ್ತಾರೆ. ಸದರಿ ಮೊಬೈಲ್ಗಳ ಪತ್ತೆ ಕುರಿತು ಮಾನ್ಯ ಶ್ರೀಮತಿ ಕನಿಕಾ ಸಿಕ್ರಿವಾಲ್, ಐ.ಪಿ.ಎಸ್ ಉಪ-ಪೊಲೀಸ್ ಆಯುಕ್ತರು (ಕಾ&ಸು) ಕಲಬುರಗಿ ನಗರ, ಮಾನ್ಯ ಶ್ರೀ ಪ್ರವೀಣ ಹೆಚ್. ನಾಯಕ್ ಉಪ-ಪೊಲೀಸ್ ಆಯುಕ್ತರು (ಅ&ಸಂ) ಕಲಬುರಗಿ ನಗರ, ಶ್ರೀ ಚಂದ್ರಶೇಖರ ಸಹಾಯಕ ಪೊಲೀಸ್ ಆಯುಕ್ತರು ಉತ್ತರ ಉಪ-ವಿಭಾಗ ಕಲಬುರಗಿ ನಗರ, ರವರ ಮಾರ್ಗದರ್ಶನದಲ್ಲಿ ಹಾಗೂ ಶ್ರೀ ನಾಸೀರ್ ಡಿ. ಸನದಿ ಪಿ.ಐ CEN ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಮತ್ತು ಶ್ರೀ ರವಿಕುಮಾರ ಎ.ಎಸ್.ಐ, CEN ಪೊಲೀಸ್ ಠಾಣೆ CEIR PORTAL ನಿರ್ವಹಿಸುತ್ತಿರುವ ಸಿಬ್ಬಂದಿಯವರಾದ ಶ್ರೀ ಶಿವರಾಜ ಸಿಪಿಸಿ-268, ಹೊನ್ನುರಸಾಬ ಸಿಪಿಸಿ-266, ಶ್ರೀ ಅಮರನಾಥ ಸಿಪಿಸಿ-261, ಶ್ರೀ ಅಂಬ್ರೇಶ ಸಿಪಿಸಿ-404, ಶ್ರೀ ರವಿಚಂದ್ರ ಎಪಿಸಿ-26 ಅಪರಾಧ ವಿಭಾಗದ ಸಿಬ್ಬಂದಿಗಳಾದ, ಶ್ರೀ ಗುರುನಾಥ ಸಿಪಿಸಿ-94, ಶ್ರೀ ಗೋಪಾಲ ಸಿಪಿಸಿ-126, ರವರ ಕಾರ್ಯಕ್ಷಮತೆಯಿಂದ ಆಂದ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಹಾಗೂ ವಿವಿಧ ಜಿಲ್ಲೆಗಳಿಂದ ಒಟ್ಟು ಅಂ.ಕಿ. 24,50,000/- ರೂಪಾಯಿಗಳ ಬೆಲೆಬಾಳುವ 101 ಮೊಬೈಲ್ಗಳನ್ನು ಪತ್ತೆಮಾಡಿ ದೂರುದಾರರಿಗೆ/ವಾರಸ್ತುದಾರರಿಗೆ ಹಿಂತಿರುಗಿಸಲಾಯಿತು.
ಸದರಿ ಮೊಬೈಲ್ಗಳ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಚೇತನ್.ಆರ್., ಐ.ಪಿ.ಎಸ್. ಕಲಬುರಗಿ ನಗರ ರವರು ಶ್ಲಾಘಿಸಿರುತ್ತಾರೆ.