ಕಲ್ಬುರ್ಗಿ ನಗರದಲ್ಲಿ ಇಂದು ಮಣಿಕಂಠ ರಾಠೋಡ್ ನೇತೃತ್ವದಲ್ಲಿ ಕಲಬುರ್ಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡುತ್ತಾ ಐತಿಹಾಸಿಕ ಸ್ಥಳವಾದ ಕೋಟೆಯ ಆವರಣದೊಳಗೆ ಅಕ್ರಮ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಕೋಟಿ ವ್ಯಾಪ್ತಿಯಲ್ಲಿ ಸುಮಾರು 288ಕುಟುಂಬಗಳ ಪುನರ್ ವಸತಿ ಸಮಗ್ರ ಯೋಜನೆ ರೂಪಿಸಿ ಕೋಟೆ ತೆರವು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸ್ಪಷ್ಟ ಆದೇಶ ಹೊರಡಿಸಿದರು ಆದರೆ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ನ್ಯಾಯಾಲಯದ ನಿರ್ದೇಶನವನ್ನು ಪಾಲಿಸಲು ಗಣನೀಯ ಪ್ರಯತ್ನ ಮಾಡದೆ ನ್ಯಾಯಾಲಯದ ಆದೇಶಗಳು ಸ್ಪಷ್ಟ ಉಲ್ಲಂಘನೆ ಮಾಡುತ್ತಿದೆ. ಇನ್ನೊಂದು ಕಡೆ ಮೊನ್ನೆ ಕಲಬುರ್ಗಿ ಫಿಲ್ಟರ್ ಬೆಡ್ ಪ್ರದೇಶದ ಸಮೀಪ ಆಶ್ರಯ ಕಾಲೋನಿಯಲ್ಲಿನ ಅತಿಕ್ರಮಗಳನ್ನು ತೆಗೆದುಹಾಕುವಲ್ಲಿ ಜಿಲ್ಲಾಡಳಿತ ಮತ್ತು ಕಲಬುರ್ಗಿ ಮಹಾನಗರ ಪಾಲಿಕೆ ಎಷ್ಟೊಂದು ದಿಟ್ಟ ನಿರ್ಧಾರ ತೆಗೆದುಕೊಂಡಿದೆ ಅದೇ ರೀತಿ ಕೋಟೆಯಲ್ಲಿ ವಾಸಿಸುವ ಜನರ ತೆರುವುಗೊಳಿಸಲು ಯಾಕೆ ಕ್ರಮ ತೆಗೆದುಕೊಂಡಿಲ್ಲ ಎಂದು ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ವಿರುದ್ಧ ಮಾತನಾಡಿದ ಮಣಿಕಂಠ ರಾಠೋಡ್ ಒಂದು ವೇಳೆ ಫಿಲ್ಟರ್ ನಿವಾಸಿಗಳಿಗೆ ಕೂಡಲೇ ನಿವೇಶನಗಳನ್ನು ಕಲ್ಪಿಸಿ ಕೊಡದೆ ಹೋದರೆ ಮುಂದೆ ಜಿಲ್ಲಾಧಿಕಾರಿಗಳ ಕಚೇರಿ ಮುಂಬಾಗದಲ್ಲಿ ಶಾಂತಿಯುತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಬಂಜಾರ ಸಮುದಾಯದ ಯುವಕರು ಮುಖಂಡರು ಉಪಸ್ಥಿತರಿದ್ದರು.