ಕಲ್ಬುರ್ಗಿ ನಗರದಲ್ಲಿಂದು ಕರ್ನಾಟಕ ಯುವಶಕ್ತಿ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಅವ್ವಣ್ಣಗೌಡ ಪಾಟೀಲ್ ಅವರ ನೇತೃತ್ವದಲ್ಲಿ 68ನೇ ಕನ್ನಡ ರಾಜ್ಯೋತ್ಸವ ಹಾಗೂ ಯುವ ಜಾಗೃತಿ ಸಮಾರಂಭ ,ಕರ್ನಾಟಕ ನಾಮಕರಣದ 50ನೇ ವರ್ಷದ ಸುವರ್ಣ ಸಂಭ್ರಮ, ಸಂಗೀತೋತ್ಸವ,ವಿವಿಧ ಕ್ಷೇತ್ರದಲ್ಲಿ ಸಾಧನೆಗೈದಿರುವ ಸಾಧಕರಿಗೆ ರಾಜ್ಯೋತ್ಸವ ಶಕ್ತಿ ಪ್ರಶಸ್ತಿ ಪುರಸ್ಕಾರ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಗರದ ಎಸ್.ಎಂ .ಪಂಡಿತರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನ ಡಾಕ್ಟರ್ ಮಲ್ಲಣ್ಣಪ್ಪ ಮಹಾಸ್ವಾಮಿಗಳು ತೊನಸಳ್ಳಿ ಹಾಗೂ ಶ್ರೀ ವೀರಮಹಾಂತ ಶಿವಾಚಾರ್ಯರು ಮಹಾಂತೇಶ್ವರ ಮಠ ವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಯುವಶಕ್ತಿ ಗೌರವ ಅಧ್ಯಕ್ಷರಾದ ಚಿನ್ನಸ್ವಾಮಿ ಕನಕಪೂರ ಉದ್ಘಾಟಿಸಿದರು.
ತದನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷರಾದ ಅವ್ವಣ್ಣಗೌಡ ಪಾಟೀಲ್ ಕಾರ್ಯಕ್ರಮಕ್ಕೆ ಆಗಮಿಸಿದ ರಾಜ್ಯೋತ್ಸವ ಶಕ್ತಿ ಪುರಸ್ಕೃತ ಸಾಧಕರಿಗೆ ಮುಖ್ಯ ಅತಿಥಿಗಳಿಗೆ ಹಾಗೂ ಸಂಘಟನೆಯ ಸದಸ್ಯರುಗಳಿಗೆ ವಿಶೇಷವಾಗಿ ಗರುಡ ಪುರಾಣ ಚಿತ್ರ ತಂಡದವರಿಗೆ ಧನ್ಯವಾದ ಸಲ್ಲಿಸಿಧರು. ಸಂಘಟನೆ ಸದಸ್ಯತ್ವ ಹೊಂದಿದವರಿಗೆ ಶಿಕ್ಷಣ ಆರೋಗ್ಯ ಮತ್ತು ಕೃಷಿ ಕ್ಷೇತ್ರದ ಸೌಲಭ್ಯ ಒದಗಿಸಿಕೊಡುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ವಿಶೇಷ ತಿಥಿಗಳಾಗಿ ಆಗಮಿಸಿದ ಸಾಕ್ಷಿ ಮೇಘನಾ ಗರುಡ ಪುರಾಣದ ಚಿತ್ರದ ನಟ ನಿರ್ದೇಶಕ ಮಂಜುನಾಥ್ ನಾಗ್ಬಾ, ದಿಶಾ ಶೆಟ್ಟಿ, ಹಾಗೂ ಕೆಂಚಣ್ಣ ಎಸ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಇಂತಹ ಕಾರ್ಯಕ್ರಮ ಸಾಧಕರಿಗೆ ಸನ್ಮಾನ ಸತ್ಕಾರ ಮಾಡುವುದರಿಂದ ಅವರಲ್ಲಿನ ಪ್ರತಿಭೆಯನ್ನು ಪ್ರೋತ್ಸಾಹಿಸಿದಂತಾಗುತ್ತದೆ. ನಮಗೆ ಮೇಲು ಕೀಳನ್ನದೆ ಪ್ರೀತಿ ಗೌರವ ತೋರಿಸಿದಕ್ಕಾಗಿ ಸದಾ ಉತ್ತರ ಕರ್ನಾಟಕದ ಜನತೆಗೆ ವಿಶೇಷವಾಗಿ ಕಲಬುರ್ಗಿ ಜನತೆಗೆ ನಾವು ಚಿರಋಣಿಯಾಗಿರುತ್ತೇವೆ. ಇದೇ ರೀತಿ ನಮ್ಮ ಮೇಲೆ ಸದಾ ನಿಮ್ಮ ಪ್ರೀತಿ ವಿಶ್ವಾಸ ಪ್ರೋತ್ಸಾಹ ಇರಲೆಂದು ಕೇಳಿಕೊಳ್ಳುತ್ತೇವೆ ಎಂದರು.
ಈ ಕಾರ್ಯಕ್ರಮದಲ್ಲಿ ಚಿನ್ನಸ್ವಾಮಿ ಕನಕಪುರ ಕರ್ನಾಟಕ ಯುವಶಕ್ತಿ ರಾಜ್ಯ ಗೌರವಾಧ್ಯಕ್ಷರು ಬೆಂಗಳೂರು, ಗರುಡ ಪುರಾಣದ ಚಿತ್ರತಂಡ ಕಲಾವಿದರು ನಟ ಮಂಜುನಾಥ್ ನಾಗಬಾ,ನಟಿ ದಿಶಾ ಶೆಟ್ಟಿ, ಹಾಸ್ಯ ನಟ ಕೆಂಚಣ್ಣ ಎಸ್ , ಸಾಕ್ಷಿ ಮೇಘನಾ ಕನ್ನಡದ ಖ್ಯಾತ ಚಿತ್ರ ನಟಿ, ಕಲ್ಯಾಣ್ ರಾವ್ ಬಿರಾದಾರ್, ರಾಜಶೇಖರ್ ತಲಾರಿ ,ಮಹದೇವ್ ಬಂದಳ್ಳಿ ಮೋಹನ್ ಪಾಟೀಲ್, ಮಡಿವಾಳಪ್ಪ ನರಿಬೋಳ್ ,ಅವಣ್ಣ ಮ್ಯಾಕೇರಿ, ಗುಂಡು ಐನಾಪುರ್, ಸೇರಿದಂತೆ ಸಂಘಟನೆಯ ಸರ್ವ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಭಕ್ತ ಕುಂಬಾರ ಅಚ್ಚುಕಟ್ಟಾಗಿ ನಿರೂಪಿಸಿದರು. ಕಾರ್ಯಕ್ರಮದ ಸ್ವಾಗತ ಭಾಷಣ ಹೇರೂರು ಪ್ರೌಢಶಾಲೆಯ ಪ್ರಾಂಶುಪಾಲರಾದ ರಾಜಶೇಖರ್ ತಲಾರಿ ನೆರವೇರಿಸಿದರು.



