ತುಮಕೂರು, ಅ.೧೪- ಹಿರಿಯೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಪೂರ್ಣಿಮ ಹಾಗೂ ಇವರ ಪತಿ ಡಿ.ಟಿ. ಶ್ರೀನಿವಾಸ್ ದಂಪತಿ ಕಾಡುಗೊಲ್ಲ ಜನಾಂ ಗದ ವಿರೋಧಿಗಳು. ಇವರು ನಮ್ಮ ಅಭಿವೃದ್ಧಿಯನ್ನು ಸಹಿಸುತ್ತಿಲ್ಲ ಎಂದು ಜಿಲ್ಲಾ ಕಾಡುಗೊಲ್ಲ ಮುಖಂಡರ ವೇದಿಕೆ ಮುಖ್ಯಸ್ಥ ಜಿ.ಕೆ.ನಾಗಣ್ಣ ನೇರ ಆರೋಪ ಮಾಡಿದರು.
ನಗರದಲ್ಲಿ ಇಂದು ಬೆಳಿಗ್ಗೆ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿ, ನಮ್ಮ ಜನಾಂ ಗದವರಲ್ಲದ ಈ ದಂಪತಿ ಕಾಡುಗೊಲ್ಲರ ಹೆಸರು ಹೇಳಿಕೊಂಡು ರಾಜಕೀಯವಾಗಿ ಪ್ರವಾದಮಾನಕ್ಕೆ ಬಂದು ನಮ್ಮ ಜನಾಂಗದ ಅಭಿವೃದ್ಧಿಗೆ ಅಡ್ಡಗಾಲು ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದ ಅವರು, ನಮ್ಮ ಜನಾಂಗವನ್ನು ಸಾಮಾಜಿಕ ಮತ್ತು ರಾಜಕೀಯವಾಗಿ ತುಳಿಯುವ ಹುನ್ನಾರ ನಡೆಸಿದ್ದಾರೆ ಎಂದು ದೂರಿದರು.
ಬಿಜೆಪಿ, ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಕಾಡುಗೊಲ್ಲ ಜನಾಂಗವನ್ನು ಎಸ್ಟಿ ಮೀಸಲಾತಿಗೆ ತರುವಂತೆ ಪ್ರಸ್ತಾವನೆ ಯನ್ನು ಕೇಂದ್ರ ಸರ್ಕಾರಕ್ಕೆ ಬಿ.ಎಸ್. ಯಡಿಯೂರಪ್ಪನವರು ಶಿಫಾರಸ್ಸು ಮಾಡಿ ದ್ದರು. ಆ ಸಂದರ್ಭದಲ್ಲಿ ಶಾಸಕರಾಗಿದ್ದ ಪೂರ್ಣಿಮ ಮತ್ತು ಅವರ ಪತಿ ಶ್ರೀನಿವಾಸ್ ಸರ್ಕಾರದ ಮೇಲೆ ಒತ್ತಡ ತಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಹಾಗೂ ಪಕ್ಷ ತೊರೆಯುವ ಬೆದರಿಕೆ ಒಡ್ಡಿ ಇದಕ್ಕೆ ಅಡ್ಡಿಯಾದರು ಎಂದರು.
ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆ, ನೋಂದಣಿ, ಅನುಷ್ಠಾನ, ಅನುದಾನ ಬಿಡುಗಡೆ ಈ ವಿಚಾರವಾಗಿ ಇದೆ ದಂಪತಿ ಅಡ್ಡಿ ಪಡಿಸದ್ದಲ್ಲದೆ ಗೊಲ್ಲ ಅಭಿವೃದ್ಧಿ ನಿಗಮ ಎಂದು ಮರು ನಾಮ ಕರಣ ಮಾಡುವಂತೆ ಒತ್ತಡ ಹಾಕಿ ಅದರಲ್ಲಿ ಯಶಸ್ವಿಯೂ ಆದರು. ಈ ದಂಪತಿ ಕಾಡುಗೊಲ್ಲರ ಹೆಸರೇಳಿಕೊಂಡು ರಾಜಕೀಯ ಭಯೋತ್ಪಾದನೆ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.
ಪೂರ್ಣಿಮ ಮತ್ತು ಶ್ರೀನಿವಾಸ್ ದಂಪತಿ ಕಾಡುಗೊಲ್ಲರ ವಿರೋಧಿಗಳಾಗಿ ರುವುದನ್ನು ಮನಗಂಡ ನಮ್ಮ ಸಮುದಾಯ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣಿಮ ಅವರನ್ನು ಸೋಲಿಸಿದ್ದು, ಇದನ್ನು ಮುಂದೆ ಅವರು ಅರ್ಥ ಮಾಡಿ ಕೊಳ್ಳಬೇಕಾಗಿದೆ ಎಂದರು.
ಕಾಡುಗೊಲ್ಲರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಬಹಳ ಹಿಂದುಳಿದಿದ್ದು ಬುಡಕಟ್ಟು ನೆಲೆಯುಳ್ಳ ನಮ್ಮ ಜನಾಂಗಕ್ಕೆ ಸಂವಿಧಾನಾತ್ಮಕವಾಗಿ ಪರಿಶಿಷ್ಟ ಪಂಗಡ ಮೀಸಲಾಗಿ ನೀಡುವಂತೆ ೨೦೦೮ರಲ್ಲಿ ಹಕ್ಕು ಮಂಡಿಸಿ, ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಆಗಿನ ಸರ್ಕಾರ ಇವರ ಆಚಾರ, ವಿಚಾರಗ ಳನ್ನು ಮತ್ತು ಕುಲಶಾಸ್ತçವನ್ನು ಅಧ್ಯಯನ ಮಾಡಿ ವರದಿ ನೀಡುವಂತೆ ಮೈಸೂರು ವಿ.ವಿ.ಯ ಆಂಥ್ರೋಪಾಲಜಿಸ್ಟ್ ಡಾ. ಅನ್ನ ಪೂರ್ಣಮ್ಮ ಆಯೋಗವನ್ನು ನೇಮಿಸಿದಾಗ ಇವರಿಗೂ ಪತ್ರ ಬರೆದು ಅಡ್ಡಿಪಡಿಸಿರುವ ನಿದರ್ಶನವಿದೆ ಎಂದರು. ವೇದಿಕೆ ಅಧ್ಯಕ್ಷ ಜಿ.ಎಂ.ಈರಣ್ಣ, ಗೋವಿಂದರಾಜು, ಮಂಜುನಾಥ್, ಚಿನ್ನಪ್ಪ, ರಮೇಶ್ ಇದ್ದರು.
ಕಾಡುಗೊಲ್ಲ ಜನಾಂಗದ ವಿರೋಧಿಗಳು.
Leave a comment
Leave a comment