ಅಫಜಲಪೂರ : ತಾಲೂಕಿನಲ್ಲಿ ಕಳೆದ ಸೋಮವಾರ ನಡೆದ ಕಲಬುರಗಿ ಜಿಲ್ಲಾ ಕಾರ್ಯ ನೀರತ ಪತ್ರಕರ್ತರ ಧ್ವನಿ ಸಂಘದ ಜಿಲ್ಲಾ ಮಟ್ಟದ ಬೃಹತ ಸಮಾವೇಶ ಯಶಸ್ವಿಯಾಗಿದ್ದು ಅತ್ಯಂತ ಸಂತೋಷವಾಗಿದೆ ಎಂದು ಪಟ್ಟಣದ ಶ್ರೀ ಗುರು ಮಳೇಂದ್ರ ಸಂಸ್ಥಾನ ಹಿರೇಮಠದ ಪೀಠಧಿಪತಿಗಳಾದ ಶ್ರೀ ಅಭಿನವ ಷ. ಬ್ರ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಹರ್ಷ ವ್ಯಕ್ತ ಪಡಿಸಿದರು.
ಶ್ರೀ ಮಠದಲ್ಲಿ ತಾಲೂಕಾ ಕಾರ್ಯ ನೀರತ ಪತ್ರಕರ್ತರ ಧ್ವನಿ ಸಂಘದ ಪಧಾಧಿಕಾರಿಗಳಿಂದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ತಾಲೂಕಿನಲ್ಲಿ ಪ್ರಥಮ ಭಾರಿಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಜಿಲ್ಲಾ ಪತ್ರಿಕಾ ಸಮಾವೇಶ ನಡೆದಿದ್ದು ಅತ್ಯಂತ ಐತಿಹಾಸಿಕ ಹಾಗೂ ಅವಿಸ್ಮರಣೀಯ ವಿಚಾರ ಎಂದರು. ಪತ್ರಕರ್ತರು ಸಮಾಜದಲ್ಲಿ ಹಾಗೂ ನಾಡು ನುಡಿ ದೇಶ ಸಂರಕ್ಷಣೆಯ ಕುರಿತು ಕಾರ್ಯ ಪ್ರವೃತ್ತರಾಗಬೇಕು ಅಂದಾಗ ಮಾತ್ರ ನಮ್ಮ ದೇಶವನ್ನು ಅಭಿವೃದ್ಧಿಎಡೆಗೆ ಸಾಗಲು ಸಾಧ್ಯ, ಸರ್ಕಾರ ಮತ್ತು ಸಮಾಜದ ಅಂಕು ಡೊಂಕುಗಳನ್ನು ಎತ್ತಿ ತೋರಿಸುವ ಕೆಲಸ ಪತ್ರಕರ್ತರು ಮಾಡಬೇಕು ಎಂದರು. ಘಟಾನುಘಟಿ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಸಿದ್ದು ನಮ್ಮೆಲ್ಲರ ಹಾಗೂ ನಮ್ಮ ತಾಲೂಕಗೆ ಹೆಮ್ಮೆ ಎಂದರು.

ಈ ಸಂದರ್ಭದಲ್ಲಿ ಕ ಕಾ ನಿ ಪ ಧ್ವನಿ ಸಂಘದ ತಾಲೂಕಾ ಅಧ್ಯಕ ಯಲ್ಲಾಲಿಂಗ ಪೂಜಾರಿ, ಗೌರವ ಅಧ್ಯಕ್ಷರಾದ ಶ್ರೀಶೈಲ್ ಸಿಂಗೆ,ಉಪಾಧ್ಯಕ್ಷರಾದ ಚನ್ನು ಹಿಂಚಗೇರಿ ಕಾರ್ಯದಕ್ಷರಾದ ಹಸನಪ್ಪ ಗುಡ್ಡಡಗಿ, ಕಾರ್ಯದರ್ಶಿ ರಾಹುಲ ಅಣ್ಣೆನವರ,ಉಮೇಶ ಆಚಲೇರಿ, ಮಲ್ಲು ಭಗಲುರ, ಮಂಜುನಾಥ ಹಡಪಾದ, ಪ್ರವೀಣಿ ಎಳಸಂಗಿ, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.