ತುಮಕೂರು : ನಗರದ ಬೆಳಗುಂಬದಲ್ಲಿರುವ ಶ್ರೀ ಗುರು ಸಿದ್ಧರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದಿನಾಂಕ ೧೫-೦೧-೨೦೨೬ ಗುರುವಾರದಿಂದ ರಿಂದ ೧೭-೦೧-೨೦೨೬ ಶನಿವಾರದವರೆಗೆ ೮೫೩ನೇ ಜಯಂತ್ಯೋತ್ಸವ ಮತ್ತು ಜಾತ್ರಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಆ ಪ್ರಯುಕ್ತ ದಿನಾಂಕ ಜನವರಿ ೧೫ ರಂದು ಅಭಿಷೇಕಾದಿ ಸೇವಾ ಕಾರ್ಯಗಳು, ಅಡ್ಡಪಲ್ಲಕಿ ಉತ್ಸವ ಪೂರ್ವಕವಾಗಿ ರಥೋತ್ಸವ, ಜನವರಿ ೧೬ರಂದು ಪುಷ್ಪಾರ್ಚನೆ, ಮಹಾಮಂಗಳಾರತಿ, ಹರಕೆ ಹೊತ್ತವರ ಮಡಿ ನೀರಿನ ಹೆಜ್ಜೆ ನಮಸ್ಕಾರ, ತೀರ್ಥೋತ್ಸವ, ನಡೆಮುಡಿ ಹಾಗೂ ಮಹಾರಥೋತ್ಸವ ಮತ್ತು ಜನವರಿ ೧೭ ರಂದು ಅಷ್ಟೋತ್ತರವ ಶತನಾಮವಳಿ ಸಹಿತ ಬಿಲ್ವ ಪುಷ್ಪಾರ್ಚನೆ ನಡೆಯಲಿದ್ದು, ಜಾತ್ರಾ ಮಹೋತ್ಸವದ ಅಂಗವಾಗಿ ಅನ್ನದಾಸೋಹವನ್ನು ಏರ್ಪಡಿಸಲಾಗಿದ್ದು ಭಕ್ತಾದಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಪ್ರಧಾನ ಅರ್ಚಕರಾದ ವೇ|| ಮೂ|| ಶಾಂತಮಲ್ಲೇಶಯ್ಯರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.



