ನಗರದ ಶಿರಾರಸ್ತೆಯ ಶ್ರೀದೇವಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿAಗ್ ಕಾಲೇಜಿನ ಆಡಿಟೋರಿಯಂ ಸಭಾಂಗಣದಲ್ಲಿ ಜೂ.೨೭ರಂದು ಮಂಗಳವಾರ ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೪ ಗಂಟೆಯವರೆಗೆ “ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ, ಡೈರೆಕ್ಟರೇಟ್ ಜನರಲ್ ಆಫ್ ಟ್ರೆöÊನಿಂಗ್ ಕೌಶಲ್ಯ ಅಭಿವೃದ್ಧಿ ಪ್ರಾದೇಶಿಕ ನಿರ್ದೇಶಕರು ಮತ್ತು ಉದ್ಯಮಶೀಲತೆ, ಕರ್ನಾಟಕ ರಾಜ್ಯ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ” ಸಹಯೋಗದೊಂದಿಗೆ ಒಂದು ದಿನದ ಅಪ್ರೆಂಟಿಸ್ಶಿಪ್ (ಶಿಶಿಕ್ಷÄ) ತರಬೇತಿ ಜಾಗೃತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್ರವರು ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಎಲ್ಲ ಕ್ಷೇತ್ರಗಳಲ್ಲಿ ಕೈಗಾರಿಕಾ ಅಭಿವೃದ್ಧಿ ಹೊಂದಲು ಸಾಧ್ಯವಾಗಲಿದೆ, ವಿದ್ಯಾರ್ಥಿಗಳು ಮುಂದಿನ ಉಜ್ವಲ ಭವಿಷ್ಯವನ್ನು ರೂಪಿಸಲು ಐ.ಟಿ.ಐ. ಕೋರ್ಸ್ ಅಗತ್ಯವಾದ ಕ್ಷೇತ್ರವಾಗಿದೆ. ಕೈಗಾರಿಕಾ ಪ್ರದೇಶದ ವಿದ್ಯಾರ್ಥಿಗಳಿಗಾಗಿ ಸರ್ಕಾರದಿಂದ ಬರುವ ಅನೇಕ ಯೋಜನೆಗಳು ಮತ್ತು ಸೌಲಭ್ಯಗಳು ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಕಾರ್ಯಾಗಾರದಲ್ಲಿ ಬೆಂಗಳೂರಿನ ಉಪನಿರ್ದೇಶಕರು ಆರ್.ಡಿ.ಎಸ್.ಡಿ.ಇ. ಜಿ.ವೆಂಕಟೇಶ್, ಡಿ.ಐ.ಇ.ಟಿ.ಯ ಸಹಾಯಕ ನಿರ್ದೇಶಕರಾದ ವಿಜಯ್ಕುಮಾರ್ರವರು ಅಪ್ರೆಂಟಿಸ್ಶಿಪ್ (ಶಿಶಿಕ್ಷÄ) ವಿಭಾಗೀಯ ಕಚೇರಿ ಬೆಂಗಳೂರು ಇವರುಗಳು ನಡೆಸಿಕೊಟ್ಟು ಉದ್ಯಮಿಗಳಿಗೆ ವಿವಿಧ ಆಯಾಮಗಳಲ್ಲಿ ಅಪ್ರೆಂಟಿಸ್ಶಿಪ್ (ಶಿಶಿಕ್ಷÄ) ತರಬೇತಿ ಬಗ್ಗೆ ಅರಿವು ಮೂಡಿಸಿದರು.
ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಎಂ.ಎಸ್.ಪಾಟೀಲ್ರವರು ಮಾತನಾಡುತ್ತಾ ವಿದ್ಯಾರ್ಥಿಗಳು ಜೀವನದಲ್ಲಿ ಲಭಿಸುವ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಹೊಸ ಹೊಸ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳ ಮುಂದೆ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುವಾಗ ನಿರಂತರವಾಗಿ ಕಲಿಕೆಯನ್ನು ಮುಂದುವರೆಸಿ ಹೊಸ ಬಗೆಯ ತಂತ್ರಜ್ಞಾನವನ್ನು ಬೆಳೆಸಿಕೊಂಡರೆ ಮಾತ್ರ ತಾವು ತಮ್ಮ ಜೀವನದಲ್ಲಿ ಯಶಸ್ಸನ್ನುಗಳಿಸಲು ಸಾಧ್ಯವಾಗುತ್ತದೆ. ತುಮಕೂರಿನ ವಸಂತನರಸಾಪುರ, ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂದು ಹರ್ಷವ್ಯಕ್ತಪಡಿಸಿದ್ದರು.
ಇದೇ ಸಮಾರಂಭದಲ್ಲಿ ಶ್ರೀದೇವಿ ಇಂಜಿನಿಯರಿAಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ನರೇಂದ್ರ ವಿಶ್ವನಾಥ್ರವರು ಮಾತನಾಡುತ್ತಾ ಉತ್ತಮ ಕೌಶಲ್ಯವಿದ್ದರೆ ಉತ್ತಮ ಜ್ಞಾನಪಡೆಯಲು ಸಾಧ್ಯವೆಂದು ಹಾಗೂ ಐ.ಟಿ.ಐ. ವಿದ್ಯಾರ್ಥಿಗಳು ಕೋರ್ಸ್ ಮುಗಿದ ಕ್ಷಣ ಯಾವ ಯಾವ ಉದ್ಯೋಗಾವಕಾಶಗಳು ಲಭಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಐ.ಟಿ.ಐ. ತೇರ್ಗಡೆಯಾದವರಿಗೆ ಉದ್ಯೋಗ ಲಭಿಸುತ್ತದೆ ಎಂದು ಅರ್ಥಪೂರ್ಣವಾಗಿ ವಿವರಿಸಿದರು.
ತುಮಕೂರಿನ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಯಾದ ಶ್ರೀನಿವಾಸ್ರವರು ಮಾತನಾಡುತ್ತಾ ಕೌಶಲ್ಯಾಭಿವೃದ್ಧಿಯಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಹೆಚ್ಚು ಪ್ರಯೋಜನಕಾರಿಯಾಗಲಿ. ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ಸರ್ಕಾರದ ಸಹಯೋಗದೊಂದಿಗೆ ಪ್ರಾರಂಭಿಸಲಾಗುತ್ತದೆ. ಈ ತರಬೇತಿಗಳು ಬೌದ್ಧಿಕ ಮತ್ತು ಪ್ರಾಯೋಗಿಕ ಕೌಶಲ್ಯಗಳನ್ನು ಹೊಂದಿರುತ್ತದೆ ಎಂದು ಅರ್ಥಪೂರ್ಣವಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಶ್ರೀದೇವಿ ಕಾಲೇಜಿನ ಆಡಳಿತಾಧಿಕಾರಿಯಾದ ಟಿ.ವಿ.ಬ್ರಹ್ಮದೇವಯ್ಯ, ಬೆಂಗಳೂರಿನ ಆರ್.ಡಿ.ಎಸ್.ಡಿ.ಇ. ನಿರ್ದೇಶಕರಾದ ಜಿ.ವೆಂಕಟೇಶ್, ಬೆಂಗಳೂರಿನ ಡಿ.ಐ.ಇ.ಟಿ.ಯ ಸಹಾಯಕ ನಿರ್ದೇಶಕರಾದ ವಿಜಯ್ಕುಮಾರ್, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ.ಕಿರಣ್ಕುಮಾರ್ ಹಾಗೂ ಗುಬ್ಬಿಯ ಸರ್ಕಾರಿ ಐ.ಟಿ.ಐ. ಕಿರಿಯ ತರಬೇತಿ ಅಧಿಕಾರಿ ಗಿರೀಶ್ಕುಮಾರ್ ಹೆಚ್.ಎಸ್., ಶ್ರೀದೇವಿ ಸಂಸ್ಥೆಯ ಐ.ಟಿ.ಐ. ವಿಭಾಗದ ಕಿರಿಯ ತರಬೇತಿ ಅಧಿಕಾರಿ ಹೆಚ್.ಎಸ್.ಶ್ರೀಕಾಂತ್ ಹಾಗೂ ವಿವಿಧ ಕೈಗಾರಿಕಾ ಪ್ರದೇಶದ ತರಬೇತಿದಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಐ.ಟಿ.ಐ. ವ್ಯಾಸಂಗ ಪಡೆದ ವಿದ್ಯಾರ್ಥಿಗಳಿಗೆ ಸ್ವಯಂ ಉದ್ಯೋಗ

Leave a comment
Leave a comment