ತುಮಕೂರು:ಸಮಾಜದಲ್ಲಿ ಉನ್ನತ ಹುದ್ದೆಗಳಿಗೆ ಹೋದವರಿಗೆ ಮಾತ್ರ ಗೌರವ ಎಂಬ ಭಾವನೆ ತಪ್ಪು.ಕಲೆ, ಸಾಹಿತ್ಯ, ಸಾಂಸ್ಕೃತಿಕ ರಂಗಗಳಲ್ಲಿ ಹೆಸರು ಮಾಡಿದವರನ್ನು ನಾಡಿನ ಜನತೆ ಗೌರವದಿಂದ ಕಾಣುತ್ತಾರೆ.ಇದಕ್ಕೆ ನಾನೇ ಜೀವಂತ ನಿರ್ದಶನ ಎಂದು ಕಲಾಶ್ರೀ ಡಾ.ಲಕ್ಷö್ಮಣದಾಸ್ ತಿಳಿಸಿದ್ದಾರೆ.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕುಂದೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸ್ವರಸಿಂಚನ ಸುಗಮ ಸಂಗಿತ, ಜಾನಪದ ಕಲಾ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿದ್ದ ಸರಕಾರಿ ಶಾಲೆಯ ಮಕ್ಕಳಿಗೆ ಜಾನಪದ ನೃತ್ಯಗಳ ಕಲಿಕಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಓದಿದವರೆಲ್ಲಾ ಡಾಕ್ಟರ್, ಇಂಜಿನಿಯರ್, ಐಎಎಸ್ ಅಧಿಕಾರಿಗಳಾಗಲು ಸಾಧ್ಯವಿಲ್ಲ. ಹಾಗಾಗಿ ಪಠ್ಯದ ಜೊತೆಗೆ,ಪಠ್ಯೇತರ ಚಟುವಟಿಕೆಗಳಾದ ಸಂಗೀತ,ನಾಟಕ,ನೃತ್ಯಗಳಲ್ಲಿ ಆಸಕ್ತಿ ಬೆಳೆಸಿಕೊಂಡರೆ ಹೆಚ್ಚಿನ ಯಶಸ್ವಿನ ಜೊತೆಗೆ,ಒಳ್ಳೆಯ ಸಂಪಾದನೆಯನ್ನು ಮಾಡಬಹುದು ಎಂದರು.
ಸ್ವರಸಿAಚನ ಸುಗಮ ಸಂಗೀತ, ಜಾನಪದ ಕಲಾ ಸಂಸ್ಥೆ ಕಳೆದ ೨೫ ವರ್ಷಗಳಿಂದಲು ಮಕ್ಕಳಿಗಾಗಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ.ಇದರ ಜೊತೆಗೆ, ಮಕ್ಕಳಿಗೆ ಈ ರೀತಿಯ ತರಬೇತಿ ನೀಡಿ, ಅವರಲ್ಲಿರುವ ಸುಪ್ತ ಪ್ರತಿಭೆಗೆ ವೇದಿಕೆ ಕಲ್ಪಿಸುವ ಕೆಲಸ ಮಾಡುತ್ತಿದೆ.ಇಂದು ವೀರಗಾಸೆ, ಕೋಲಾಟ, ಗಾರುಡಿ ಗೊಂಬೆ,ಕAಸಾಳೆ ಕಲೆಯನ್ನು ಮಕ್ಕಳಿಗೆ ಹಿರಿಯ ಜನಪದ ವಿದ್ಯಾಂಸರಾದ ಸಿ.ಎಂ.ಲೋಕೇಶ್ ಅವರುಗಳು ಕಲಿಸಿಕೊಡಲಿದ್ದು, ಮಕ್ಕಳು ಆಸಕ್ತಿಯಿಂದ ಕಲಿತು, ವೇದಿಕೆಗಳಲ್ಲಿ ಪ್ರದರ್ಶಿಸಿ, ಗ್ರಾಮಕ್ಕೆ, ಜಿಲ್ಲೆಗೆ ಕೀರ್ತಿ ತರುವಂತೆ ಸಲಹೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ಮಾತನಾಡಿ,ಮಕ್ಕಳಿಗೆ ಜನಪದ ಕಲೆಗಳನ್ನು ಕಲಿಸುವಂತಹ ಶಿಬಿರ ನಿಜಕ್ಕೂ ಹೊಸ ಆಲೋಚನೆ.ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಗಳತ್ತ ಮಕ್ಕಳನ್ನು ಸೆಳೆಯುವ ನಿಟ್ಟಿನಲ್ಲಿ ಇದೊಂದು ಅಪರೂಪದ ಪ್ರಯತ್ನವಾಗಿದೆ.ಜಾನಪದ ಕಲೆಗಳು ನಸಿಸುತ್ತಿವೆ ಎಂಬAತಹ ಕಾಲದಲ್ಲಿ ಮಕ್ಕಳಿಗೆ ಈ ರೀತಿಯ ಕಲೆಗಳನ್ನು ಕಲಿಸುವ ಮೂಲಕ ಅದರ ಪುನಶ್ಚೇತನಕ್ಕೆ ನಾಂದಿ ಹಾಡಿದ್ದಾರೆ.ಇದೇ ರೀತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅನುದಾನ ಪಡೆಯುವ ಸಾಂಸ್ಕೃತಿಕ ಸಂಸ್ಥೆಗಳು ಇದೇ ರೀತಿಯ ಆಲೋಚನೆಗಳನ್ನು ಮಾಡಿದರೆ ಮತ್ತಷ್ಟು ಉತ್ತೇಜನ ನೀಡಿದಂತಾಗುತ್ತದೆ.ಅಲ್ಲದೆ ಮಕ್ಕಳ ಸಮಗ್ರ ವಿಕಾಸಕ್ಕೆ ಪೂರಕವಾಗಲಿದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಕುಂದೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸೌಭಾಗ್ಯ,ಶಿಷ್ಠ ಸಾಹಿತ್ಯಕ್ಕಿಂತ ಜನಪದ ಸಾಹಿತ್ಯ ಅತಿ ಹೆಚ್ಚುಜನರನ್ನು ಬಹುಬೇಗ ತಲುಪಬಲ್ಲದು.ಮಕ್ಕಳು ಸಿನಿಮಾ ಹಾಡುಗಳಿಗೆ ಮಾರು ಹೋಗಿ,ನಮ್ಮ ಪೂರ್ವಜರು ರೂಪಿಸಿಕೊಂಡು ಬಂದಿರುವ ಜನಪದ ಕಲೆಗಳತ್ತ ನಿರಾಸಕ್ತಿ ಹೊಂದಿರುವ ಕಾಲದಲ್ಲಿ ಸ್ವರಸಿಂಚನ ಸಂಸ್ಥೆಯ ಈ ಕಾರ್ಯಾಗಾರ ಹೆಚ್ಚು ಉಪಯುಕ್ತವಾಗಲಿದೆ ಎಂದರು.
ಉನ್ನತ ಹುದ್ದೆಗಳಿಗೆ ಹೋದವರಿಗೆ ಮಾತ್ರ ಗೌರವ ಎಂಬ ಭಾವನೆ ತಪ್ಪು

Leave a comment
Leave a comment


