ತುಮಕೂರು: ಒಳ್ಳೆ ಅಭ್ಯಾಸ ರೂಡಿಸಿಕೊಂಡು ವಿದ್ಯಾರ್ಥಿಗಳು ಪಠೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದು ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿಗಳಾದ ಬಿ. ನಂಜುAಡಪ್ಪ ಅವರು ಕರೆ ನೀಡಿದರು
ನಗರದ ಶ್ರೀ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಚಟುವಟಿಕೆ ಕ್ರೀಡೆ, ಎನ್ಎಸ್ಎಸ್, ಎನ್ಸಿಸಿ ಚಟುವಟಿಕೆಗಳ ‘ಗಾನ ಕಲಾ ಸಂಭ್ರಮ -28ರ ವಿಜೇತರಿಗೆ ಸಹುಮಾನ ವಿತರಿಸಿ ಅವರು ಮಾತನಾಡಿದರು.
ಪ್ರಾರಂಭಿಕ ಹಂತದಲ್ಲಿ ಎಲ್ಲವೂ ಕಷ್ಟ. ಆದರೆ ಅದನ್ನು ಕೈ ಬಿಡದೆ ಸತತ ಪ್ರಯತ್ನದಲ್ಲಿದ್ದರೆ ಗುರಿ ತಲುಪಲು ಸಾಧ್ಯ. ಸಮಾಜ ಎಂದರೆ ತರ ತರಹದ ಮಾನವ ಗುಣಗಳು ಇರುತ್ತವೆ. ಜಾತಿ-ಜನಾಂಗ ,ಧರ್ಮದ ಬೇದ-ಭಾವ ಇಲ್ಲದೆ ಐಕ್ಯತೆಗೆ ನಾವು ಹೊಂದಿಕೊಳ್ಳಬೇಕು ಎಂದು ಬಿ. ನಂಜುoಡಪ್ಪ ಹೇಳಿದರು.
ಏಕಾಗ್ರತೆ, ಭಾವಶುದ್ಧಿ, ತನ್ವಯತೆ ಇವೆಲ್ಲವೂ ಅಳವಡಿಸಿಕೊಂಡರೆ ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿ ಆಗಲು ಸಾಧ್ಯ. ಎಷ್ಟೇ ಹಣ, ಆಸ್ತಿ, ಸಂಪತ್ತು ಇದ್ದರು ನೆಮ್ಮದಿ ಇಲ್ಲದಿದ್ದರೆ ಎಲ್ಲವೂ ವ್ಯರ್ಥ ಎಂದು ಅವರು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಕುಣಿಗಲ್ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ. ಗೋವಿಂದರಾಯ ಎಂ ಮಾತನಾಡಿ, ಅವರು ಸೋಲು ಗೆಲುವಿನ ಮೆಟ್ಟಿಲು. ಸಂಗೀತ ಕ್ಷೇತ್ರ ಬಹಳ ವಿಸ್ತಾರವಾಗಿದೆ. ಆಸಕ್ತಿದಾಯಕವಾದ ಪಠ್ಯದಲ್ಲಿ ನಾವು ತೊಡಗಿ ಉನ್ನತ ಸ್ಥಾನಕ್ಕೆ ಬರಬೇಕೆಂದು ವಿದ್ಯಾರ್ಥಿಗಳಿಗೆ ಪ್ರೇರಣೆಯ ಮಾತುಗಳನ್ನಾಡಿದರು