ತುಮಕೂರು:ಶಿಕ್ಷಣದಿಂದ ಮಾತ್ರ ಮನುಷ್ಯ ಸ್ವಾಭಿಮಾನ ಮತ್ತು ಸ್ವಾವಲಂಬನೆಯಿoದ ಬದುಕಲು ಸಾಧ್ಯ.ಹಾಗಾಗಿ ಬೀದಿ ಬದಿ ವ್ಯಾಪಾರಿಗಳು ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಿದ ಕಾರ್ಯದರ್ಶಿ ನ್ಯಾ.ಶ್ರೀಮತಿ ನೂರುನ್ನಿಸಾ ಕರೆ ನೀಡಿದ್ದಾರೆ.

ನಗರದ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ರಸ್ತೆ ಬದಿ ವ್ಯಾಪಾರಿಗಳ ಮಹಾಮಂಡಳ(ರಿ), ತುಮಕೂರು ಜಿಲ್ಲಾ ಬೀದಿ ಬದಿ ವ್ಯಾಪಾರಿಗಳ ಕ್ಷೇಮಾಭಿವೃದ್ದಿ ಸಂಘ(ರಿ), ಮತ್ತು ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದವತಿಯಿಂದ ಆಯೋಜಿಸಿದ್ದ ೪ನೇ ವರ್ಷದ ಬೀದಿ ಬದಿ ವ್ಯಾಪಾರಿಗಳ ಮತ್ತು ಕಾರ್ಮಿಕರ ಸಮಾವೇಶ ಹಾಗೂ ಪ್ರತಿಭಾಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ನಿಮ್ಮ ಮಕ್ಕಳು ನಿಮಗಿಂತೆ ನೆಮ್ಮದಿಯ ಜೀವನ ನಡೆಸಬೇಕೆಂದರೆ ಇಂದಿನಿoದಲೇ ಅವರಿಗೆ ಒಳ್ಳೆಯ ಶಿಕ್ಷಣ ನೀಡಿ ಎಂದರು.
ಸAವಿಧಾನದಲ್ಲಿ ಎಲ್ಲರೂ ಗೌರವಯುತವಾಗಿ ಬದುಕಲು ಬೇಕಾದ ಹಕ್ಕುಗಳನ್ನು ನೀಡಿದೆ.ಆ ಹಕ್ಕುಗಳ ನಿಮ್ಮವಾಗಬೇಕಾದರೆ ನೀವು ಸಂಘಟಿತರಾಗಿ ಹೋರಾಟ ನಡೆಸಬೇಕಾಗಿದೆ.ಜನರಿಗೆ ಗೌರವಯುತವಾದ ಬದುಕು ದೊರೆಯಬೇಕು ಎಂಬ ಉದ್ದೇಶದಿಂದಲೇ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.ಜೊತೆಗೆ ಅದರ ಮೇಲ್ವಿಚಾರಣೆಗೆ ಸಮಿತಿಗಳನ್ನು ರಚಿಸಿದೆ.ತುಮಕೂರು ಮಹಾನಗರಪಾಲಿಕೆಯಲ್ಲಿ ಬೀದಿಗಳ ವ್ಯಾಪಾರಿಗಳ ಕುಂದುಕೊರತೆ ಆಲಿಸಲು ನಿವೃತ್ತ ನ್ಯಾಯಾಧೀಶರೊಬ್ಬರನ್ನು ಸರಕಾರ ನೇಮಕ ಮಾಡಿದೆ.ನಿಮ್ಮ ದುಖಃ ದುಮ್ಮಾನಗಳನ್ನು ಅವರ ಬಳಿ ಹೇಳಿಕೊಂಡಲ್ಲಿ ಪರಿಹಾರ ದೊರೆಯಲಿದೆ ಎಂದು ನ್ಯಾ.ನೂರುನ್ನಿಸಾ ಸಲಹೆ ನೀಡಿದರು.
ಇಂದು ಮನೆಗಳ ನಡುವೆ ಗೋಡೆ ಎದ್ದಂತೆ,ಮನಸ್ಸುಗಳ ನಡುವೆಯೂ ಗೋಡೆಗಳು ಎದ್ದಿವೆ.ಯಾವ ಧರ್ಮವೂ ಹಿಂಸೆಯನ್ನು,ದ್ವೇಷವನ್ನು ಬೋಧಿಸುವುದಿಲ್ಲ.ಎಲ್ಲಾ ಧರ್ಮ ಗ್ರಂಥಗಳನ್ನು ಒಳ್ಳೆಯದನ್ನೇ ಹೇಳಿವೆ.ಅವುಗಳೆಲ್ಲದರ ಸಾರವನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಲಾಗಿದೆ.ಹಾಗಾಗಿ ಎಲ್ಲಾ ಧರ್ಮ ಗ್ರಂಥಗಳಿಗಿoತ ಸಂವಿಧಾನ ಶ್ರೇಷ್ಠವಾದುದ್ದು, ಅದರ ಅಡಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಗು ಘನತೆಯಿಂದ ಬದುಕಲು ಅವಕಾಶ ಕಲ್ಪಿಸಿದೆ.ಇನ್ನೊಬ್ಬನಿಗೆ ನೋವುಂಟು ಮಾಡದೆ, ಇನ್ನೊಬ್ಬರ ಹಕ್ಕನ್ನು ಕಸಿಯದೆ ಹೇಗೆ ನನ್ನ ಹಕ್ಕು ಮತ್ತು ಕರ್ತವ್ಯಗಳನ್ನು ನಿಭಾಯಿಸಬಹುದು ಎಂಬ ಸಾಮಾನ್ಯ ಪ್ರಜ್ಞೆಯನ್ನು ಪ್ರತಿಯೊಬ್ಬ ಪ್ರಜೆಯೂ ಬೆಳೆಸಿಕೊಂಡರೆ,ಕೋರ್ಟು,ಕಾನೂನು,ಪೊಲೀಸ್ ಠಾಣೆಗಳಿಂದ ದೂರ ಉಳಿಯ ಬಹುದು ಎಂದು ನ್ಯಾ.ನೂರನ್ನಿಸಾ ಕಿವಿ ಮಾತು ಹೇಳಿದರು.



