ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ಇಂಜಿನಿಯರಿAಗ್ ಕಾಲೇಜಿನಲ್ಲಿ ಅಂತರಾಷ್ಟಿçÃಯ ಸಮ್ಮೇಳನ ಮತ್ತು ಕಾರ್ಯಾಗಾರ
ಐ.ಒ.ಟಿ.- ಇಂಟರ್ನೆಟ್ ಆಫ್ ಥಿಂಗ್ಸ್ ೨೧ ನೇ ಶತಮಾನದ ಅದ್ಭುತ ಸಾಧನೆ : ಡಾ.ರಾಜ್ಕುಮಾರ್ ಬುಯ್ಯ
ತುಮಕೂರು:
೨೧ನೇ ಶತಮಾನದ ಅದ್ಭುತ ಸಾಧನೆಗಳಲ್ಲೊಂದಾಗಿರುವ ಇಂಟರ್ನೆಟ್ ಆಫ್ ಥಿಂಗ್ಸ್ ಹಲವಾರು ವರ್ಷಗಳಿಂದಲೂ ಅಸ್ತಿತ್ವದಲ್ಲಿದ್ದು, ಇತ್ತೀಚೆಗೆ ವೇಗೋತ್ಕರ್ಷ ಪಡೆದುಕೊಂಡು ಜನಜೀವನದ ಪ್ರತಿಯೊಂದು ಕ್ಷೇತ್ರಗಳಲ್ಲೂ ಅಂದರೆ ಅಡಿಗೆಮನೆಯಿಂದ ಹಿಡಿದು ಕಾರು, ಕಡಿಮೆ ವೆಚ್ಚದ ವಸತಿ ನಿರ್ಮಾಣ, ಕಡಿಮೆ ವಿದ್ಯುಚ್ಚಕ್ತಿ, ಬಳಕೆ, ತ್ವರಿತ ಸಂಪರ್ಕ ಸಾಧಿಸುವಿಕೆ, ಕೃತಕ ಬುದ್ದಿಮತ್ತೆಯ ವಿಸ್ತರಣೆಯಂತಹ ಹಲವಾರು ಕ್ಷೇತ್ರಗಳಲ್ಲಿ ತನ್ನ ಛಾಪು ಮೂಡಿಸಿ ಜನಜೀವನವನ್ನು ಸುಲಭ ಮತ್ತು ಸುಗಮಗೊಳಿಸುವ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ಗಳ ಸಂಯೋಜಿತ ತಂತ್ರಜ್ಞಾನವಾಗಿದೆಯೆAದು ಮೆಲ್ಬರ್ನ್ ವಿಶ್ವವಿದ್ಯಾಲಯದ ಕಂಪ್ಯೂಟಿAಗ್ ಮತ್ತು ಇನ್ಫರ್ಮೆಷನ್ ಸಿಸ್ಟಮ್ಸ್ ವಿಭಾಗದ ಪ್ರೊಫೆಸರ್ ಡಾ.ರಾಜ್ಕುಮಾರ್ ಬುಯ್ಯರವರು ನುಡಿದರು.
ನಗರದ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿರುವ ೨ ದಿನಗಳ ಐ.ಸಿ.ಕ್ಯೂಬ್ ಇಂಟರ್ ನ್ಯಾಷನಲ್ ಕಾನ್ಫರೆನ್ಸ್ ಆನ್ ಇಂಟರ್ನೆಟ್ ಆಫ್ ಥಿಂಗ್ಸ್, ಕಮ್ಯೂನಿಕೇಷನ್, ಇಂಟಲಿಜೆನ್ಸ್ ಮತ್ತು ಕಂಪ್ಯೂಟಿAಗ್ ಹಾಗೂ ಕ್ಲೌಡ್ ಮತ್ತು ಎಡ್ಜ್ ಕಂಪ್ಯೂಟಿAಗ್ ಕಾರ್ಯಾಗಾರವು ಮೇ.೫ ರಂದು ಬೆಳಿಗ್ಗೆ ೧೧ ಗಂಟೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಸಮಾವೇಶದಲ್ಲಿ ಭಾಗವಹಿಸಿದ್ದ ಹಲವಾರು ರಾಜ್ಯಗಳ ಮತ್ತು ಹತ್ತು ದೇಶಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನಡೆಯುವ ಚರ್ಚೆ ಮತ್ತು ಕಾರ್ಯಾಗಾರಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಜ್ಞಾನದ ವಿಸ್ತಾರ ಮಾಡಿಕೊಳ್ಳಬೇಕೆಂದರು
ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಸಮ್ಮೇಳನ
Leave a comment
Leave a comment