ತುಮಕೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ತುಮಕೂರು ಜಿಲ್ಲೆ ರವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ಭಾರತ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮವನ್ನು ದಿನಾಂಕ 27-01-2024 ರಂದು ಬೆಳಗುಂಬ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಪುಷ್ಪಲತಾ ರವರು ಚಾಲನೆ ನೀಡಿದರು.
ಕರ್ನಾಟಕ ರಾಜ್ಯ ಘನ ಸರ್ಕಾರದ ಆದೇಶದಂತೆ ಭಾರತ ಸಂವಿಧಾನದ 75ನೇ ವರ್ಷದ ಅಮೃತ ಮಹೋತ್ಸವ ಅಂಗವಾಗಿ ಭಾರತ ಸಂವಿಧಾನ ಜಾಗೃತಿ ಜಾಥವು ಸ್ತಬ್ಧ ಚಿತ್ರಗಳೊಂದಿಗೆ ಸಂವಿಧಾನದ ಆಶಯ ಮತ್ತು ಮಹತ್ವಗಳನ್ನು ಸರ್ವರಿಗೂ ತಿಳಿಸುವ ಸಲುವಾಗಿ ತುಮಕೂರು ತಾಲ್ಲೂಕಿನ ಬೆಳಗುಂಬ ಗ್ರಾಮ ಪಂಚಾಯತಿಯಿoದ ಪ್ರಾರಂಭವಾಗಿ ತಾಲ್ಲೂಕಿನ 41 ಗ್ರಾಮ ಪಂಚಾಯಿತಿಗಳಲ್ಲೂ ಸಂಚರಿಸುತ್ತದೆ.
ಈ ಅವಿಸ್ಮರಣೀಯ ಮತ್ತು ಐತಿಹಾಸಿಕ ಕಾರ್ಯಕ್ರಮಕ್ಕೆ ತುಮಕೂರು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು,ತಾಲೂಕು ದಂಡಾಧಿಕಾರಿಗಳು, ತಾಲ್ಲೂಕು ಯೋಜನಾಧಿಕಾರಿ,ಸಹಾಯಕ ನಿರ್ದೇಶಕರು (ಗ್ರಾ ಉ),ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ,ಗ್ರಾಮ ಪಂಚಾಯತಿ ಉಪಾಧ್ಯಕ್ಷರು, ಚುನಾಯಿತ ಸದಸ್ಯರು, ಸರ್ವ ನಾಗರೀಕರು,ಶಿಕ್ಷಕರು, ವಿದ್ಯಾರ್ಥಿಗಳು,ನೌಕರರು,ತಾಲ್ಲೂಕಿನ ಸಮಸ್ತ ಜನಾಂಗದ ಸಂಘ-ಸoಸ್ಥೆಗಳು,ರೈತಪರ, ಕನ್ನಡಪರ, ದಲಿತಪರ, ಮಹಿಳಾ ಪರ ಸಂಘಟನೆಗಳ ಪದಾಧಿಕಾರಿಗಳು,ಮುಖಂಡರು ,ಹೋರಾಟಗಾರರು, ಮಹಿಳೆಯರು ಈ ಅಭೂತ ಪೂರ್ವ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ನಮ್ಮೆಲ್ಲರಿಗೂ ಆಸರೆಯಾಗಿರುವ ವಿಶ್ವ ಶ್ರೇಷ್ಠ ಭಾರತ ಸಂವಿಧಾನಕ್ಕೆ ಮತ್ತು ಇದರ ಕತೃ ಭಾರತ ರತ್ನ,ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ರವರಿಗೆ ಗೌರವ ನಮನ ಸಲ್ಲಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.