ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಕೌಶಲ್ಯ ತರಬೇತಿಯನ್ನು ಪಡೆದರೆ ಮುಂದೆ ನಿಮ್ಮ ಭವಿಷ್ಯ ಉತ್ತಮ ದಾರಿಯಲ್ಲಿ ಸಾಗಲಿದೆ ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದರು.
ನಗರದ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಾಲಪ್ಪ ಪ್ರತಿಷ್ಠಾನ, ಯುಕ್ತ ಕೌಶಲ್ಯ ತರಬೇತಿ ಕೇಂದ್ರ ಮತ್ತು ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಕೌಶಲ್ಯ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಗುರಿ ಸಾಧಿಸಲು ಕೌಶಲ್ಯ ತರಬೇತಿಗಳು ಅತ್ಯವಶ್ಯಕವಾಗಿವೆ ಎಂದು ಹೇಳಿದರು.
ಉದ್ಯೋಗಕ್ಕೆ ಮತ್ತು ಉದ್ಯಮಿಗೆ ಅಜಗಜಾಂತರ ವ್ಯತ್ಯಾಸವಿದೆ. ಕೆಲಸಕ್ಕೆ ಸೇರಿದರೆ ಒಂದು ಸೀಮಿತ ಚೌಕಟ್ಟು ಇರುತ್ತದೆ. ಆದರೆ ಉದ್ಯಮಿಯಾದವರು ಆಕಾಶದೆತರಕ್ಕೂ ಬೆಳಯಬಹುದು. ಸೀಮಿತ ಚೌಕಟ್ಟು ಇರುವುದಿಲ್ಲವಾದ್ದರಿಂದ ಉದ್ಯಮ ಆರಂಭಿಸುವವರಿಗೆ ಅದರಲ್ಲಿಯು ಮುಖ್ಯವಾಗಿ ಸರ್ಕಾರದ ಯೋಜನೆಗಳಲ್ಲಿ ಕೌಶಲ್ಯ ತರಬೇತಿ ಪಡೆದಂತಹವರು ಮುಂದೆ ಉದ್ಯಮಿ ಯಾಗಬಹುದು ಎಂದರು.
ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಾದ ಐಎಎಸ್, ಐಪಿಎಸ್, ಐಎಫ್ಎಸ್, ಕೆಎಎಸ್ ಸೇರಿದಂತೆ ವಿವಿಧ ಬ್ಯಾಂಕಿAಗ್ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಲು ಈಗಿನಿಂದಲೇ ಶ್ರದ್ಧೆಯಿಂದ ಓದುವ ಮುಖೇನ ನಿಮ್ಮ ಗುರಿ ತಲುಪಬಹುದು ಎಂದು ತಿಳಿಸಿದರು.
ಬ್ಯಾಂಕಿAಗ್ ಪರೀಕ್ಷೆಗೆ ಯಾವ ವಿಷಯಗಳನ್ನು ಅಧ್ಯಯನ ಮಾಡಬೇಕು, ಸಮಯ ಪರಿಪಾಲನೆ, ಆನ್ಲೈನ್ ಪರೀಕ್ಷೆ ಎದುರಿಸುವ ವಿಧಾನ, ಉತ್ತರಿಸಲು ಅನುಸರಿಸಬೇಕಾದ ಮಾರ್ಗ, ಸರಳವಾಗಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ವಿಧಾನ, ಅಂಕ ನೀಡುವ ವಿಧಾನ, ಯಾವ ಮನಸ್ಥಿತಿ ಅಗತ್ಯ ಹಾಗೂ ಅದರಿಂದಾಗುವ ಉಪಯೋಗ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಮುರಳೀಧರ ಹಾಲಪ್ಪ ಕೂಲಂಕುಷವಾಗಿ ವಿವರಿಸಿದರು.
ಜೀವನದಲ್ಲಿ ಏನಾದರು ಸಾಧನೆ ಮಾಡಬೇಕು ಇತರರಿಗೆ ಮಾದರಿಯಾಗಬೇಕು ಎಂದುಕೊAಡವರು ನಿರಂತರವಾಗಿ ಶ್ರಮವಹಿಸಿ, ಪ್ರತಿಕ್ಷಣ ನಿಮ್ಮ ಆ ಕನಸು ನನಸಾಗಲು ಕಷ್ಟಪಡಿ ಆಗ ನಿಮ್ಮ ಗೆಲುವು ನಿಶ್ಚಯವಾಗುತ್ತದೆ ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಐಎಎಸ್ ಎನ್ನುವುದು ಕಬ್ಬಿಣದ ಕಡಲೆ ಅದನ್ನು ಪಾಸ್ ಮಾಡುವುದು ತುಂಬಾ ಕಷ್ಟ ಎನ್ನುವು ನಿಮ್ಮ ಅನುಮಾನ, ಸಂದೇಹಗಳನ್ನ ನಿಮ್ಮ ಮನಸ್ಸಿನಿಂದ ದೂರ ಮಾಡಿ. ನಿಮ್ಮಲ್ಲಿ ತಾಳ್ಮೆ, ಏನಾದರು ಸಾಧನೆ ಮಾಡಬೇಕು ಎನ್ನುವ ತುಡಿತ ಇದ್ದರೆ ಯಶಸ್ಸು ನಿಮಗೆ ಒಲಿಯಲಿದೆ ಎಂದರು.
ಮಹಾನಗರಪಾಲಿಕೆ ಮುಖ್ಯ ಲೆಕ್ಕಾಧಿಕಾರಿ ಗುರು ಬಸವಗೌಡ ಮಾತನಾಡಿ, ನಿಮ್ಮಲ್ಲಿ ಹಲವಾರು ಕನಸುಗಳು ಇರಬಹುದು. ಐಎಎಸ್ ಆಗಬೇಕು ಎನ್ನುವ ಕನಸು ನಿಮ್ಮ ಮನದಲ್ಲಿ ಮೂಡಬೇಕು, ಅಂತಹ ಕನಸು ಕಾಣಲು ಯಾವುದೇ ಭಯಬೇಡ. ಆದರೆ ಯಶಸ್ಸು ನಿಮ್ಮದಾಗಲು ನಿಮ್ಮ ಕಠಿಣ ಪರಿಶ್ರಮ, ಶಿಸ್ತು, ಸಮಯ ಪಾಲನೆ ಅತೀ ಮುಖ್ಯ ಎಂದರು.
ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ್ ಮಾತನಾಡಿ, ನಿಮ್ಮ ತಂದೆ- ತಾಯಿ ಜಮೀನಿಗಳಲ್ಲಿ ಯಾವುದೇ ಮಳೆ, ಬಿಸಿಲು, ಚಳಿ ಎನ್ನದೆ ವರ್ಷಪೂರ್ತಿ ಕೆಲಸ ಮಾಡುತ್ತಾರೆ. ಅವರಿಗೆ ವಿಶ್ರಾಂತಿ ಎನ್ನುವುದೇ ಇಲ್ಲ. ಅವರೇ ನಿಮ್ಮ ಕನಸಿಗೆ ನಿಜವಾದ ಹೀರೋಗಳು. ನೀವು ಸಹ ನಿಮ್ಮ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಿ, ನಿಮ್ಮ ಬಗ್ಗೆ ನಿಮಗೆ ನಂಬಿಕೆ ಇರಲಿ, ಶಿಸ್ತು ಮತ್ತು ಕಠಿಣ ಶ್ರಮವನ್ನು ಎಂದಿಗೂ ಮರೆಯದಿರಿ ಎಂದು ಸಲಹೆ ನೀಡಿದರು.
ಗ್ರಾಮೀಣ ಭಾಗದವರು ನಗರದಲ್ಲಿ ಅಭ್ಯಾಸ ಮಾಡುವವರಿಗೆ ಸ್ಪರ್ಧೆ ಮಾಡಲು ಆಗುವುದಿಲ್ಲ ಎನ್ನುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಡಿ, ಶ್ರದ್ಧೆ, ಆಸಕ್ತಿ, ಶಿಸ್ತು ಎಲ್ಲಿದ್ದರೂ ಕಲಿಯಬಹುದು. ಇದರ ಜತಗೆ ಸತತ ಅಭ್ಯಾಸ, ಕಠಿಣ ಪರಿಶ್ರಮ, ಒಂದು ನಿಶ್ಚಯವಾದ ಗುರಿ, ಮಾರ್ಗದರ್ಶನ ನೀಡಲು ಒಬ್ಬ ಒಳ್ಳೆಯ ಗುರು ಇದ್ದರೆ ಗೆಲುವು ನಿಮ್ಮದಾಗಲಿದೆ ಎಂದರು.
ಬೈಕ್ ರೈಡರ್ ಕೇದಾರನಾಥ್ ಜಿ.ಎಮ್. ಅವರು ಸುಮಾರು ೩೩ ದೇಶಗಳನ್ನು ಬೈಕ್ನಲ್ಲಿ ಸುತ್ತಿದ ಅನುಭವವನ್ನು ಹಂಚಿಕೊAಡರು.
ಕಾರ್ಯಕ್ರಮದಲ್ಲಿ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ವಿಜಯ ಭಾಸ್ಕರ್, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮಂಜುನಾಥ್, ಯುಕ್ತ ಕೌಶಲ್ಯ ತರಬೇತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಮಧುಗಿರಿ ದಿಲೀಪ್, ರಾಜ್ಯ ನೋಡಲ್ ಕಾರ್ಯಕ್ರಮ ಆಯೋಜಕಿ ದೀಪಿಕಾ ವೆಂಕಟೇಶ್ ಸೇರಿದಂತೆ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂಧಿ ಹಾಗೂ ಯುಕ್ತ ಕೌಶಲ್ಯ ತರಬೇತಿ ಕೇಂದ್ರದ ತಂಡದವರು ಭಾಗವಹಿಸಿದ್ದರು.
ವಿದ್ಯಾಭ್ಯಾಸದ ಜೊತೆಗೆ ಕೌಶಲ್ಯ ತರಬೇತಿಯನ್ನು ಪಡೆದರೆ ನಿಮ್ಮ ಭವಿಷ್ಯ ಉತ್ತಮ

Leave a comment
Leave a comment