ರಕ್ತ ಚಿಮ್ಮಿ ಬಟ್ಟೆ ಮೇಲೆ ಬಿದ್ದಾಗ ನನನ್ನು ಗಮನಿಸಿ ಕೆಳಗೆ ಇಳಿಸಿದ್ರು ಎಂದು ಘಟನೆಯನ್ನು ವಿವರಿಸಿದರು.
ಅದಕ್ಕೂ ಮುಂಚೆ ನನ್ನನ್ನ ಭೇಟಿ ಮಾಡೋಕೆ ಅಲ್ಲಿಗೆ ಬಂದ ನಮ್ಮ ಸಿದ್ದಾರ್ಥ ಕಾಲೇಜಿನ ವೈದ್ಯರೊಬ್ಬರು ಬಂದಿದ್ರು. ಕೂಡಲೇ ಅವರೇ ನನ್ನನ್ನ ಅಕ್ಕಿರಾಂಪುರ ದಲ್ಲಿನ ಆರೋಗ್ಯ ಕೆಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ತುಮಕೂರಿಗೆ ಕರೆದುಕೊಂಡು ಬಂದರು ಎಂದು ವಿವರಿಸಿದರು.

ತನಿಖೆಯಾಗಲಿ: ನನ್ನ ತಲೆಗೆ ಬಿದ್ದ ಕಲ್ಲು ಹೂವಿನಲ್ಲಿ ಬಂತು ಅಂತಾ ಹೇಳೋಕೆ ಆಗಲ್ಲಾ. ಅದು ತುಂಬಾ ದಪ್ಪ ಇತ್ತು. ಆದ್ದರಿಂದಲೇ ರಕ್ತ ಚಿಮ್ಮಿ ಹರಿಯಿತು. ಸಮಯ ನೋಡಿ ಯಾರೋ ದುಳ್ಕರ್ಮಿಗಳು ಕಲ್ಲು ಹಾಕಿದ್ರು ಅ£್ನಸುತ್ತದೆ. ಬೇಕಂತಲೇ ಎಸೆದಿದ್ರೇ? ಯಾರು? ಮತ್ತು ಯಾಕೆ ಎಸೆದ್ರು ಗೊತ್ತಿಲ್ಲಾ. ಈ ಬಗ್ಗೆ ಪೋಲೀಸರಿಗೆ ದೂರು £Ãಡಿದ್ದೇವೆ. ತ£ಖೆಯಾಗಲಿ ಎಂದು ಪರಮೇಶ್ವರ ಆಗ್ರಹಿಸಿದರು.
೩ನೇ ಬಾರಿ ಘಟನೆ: ಈ ಹಿಂದೆಯೂ ೧೯೯೯ರಲ್ಲಿ ನನ್ನ ಮೇಲೆ ಇದೇ ರೀತಿ ಹಲ್ಲೆ ನಡೆದಿತ್ತು.ಫಲಿತಾಂಶ ಬಳಿಕ ವಿಜಯೋತ್ಸವ ಆಚರಿಸೋ ವೇಳೆ ಚಾಕು ಇರಿಯೋದಕ್ಕೆ ಪ್ರಯತ್ನ ನಡೆದಿತ್ತು. ಇತ್ತೀಚಿಗೆ ನಾಮಪತ್ರ ಸಲ್ಲಿಸುವ ವೇಳೆ ಕಲ್ಲು ತೂರಲಾಯಿತು. ಈಗ ಮತ್ತೆ ನನ್ನ ಮೇಲೆ ಕಲ್ಲು ಬಿದ್ದಿದೆ.
ಹೀಗಾಗಿ ಪದೇ ಪದೇ ಯಾಕೆ ಹೀಗಾಗ್ತಿದೆ ತಿಳಿಯು ತ್ತಿಲ್ಲಾ ಎಂದು ಪರಮೇಶ್ವರ ಆತಂಕ ವ್ಯಕ್ತಪಡಿಸಿದರು.
ಭದ್ರತೆ ಅಗತ್ಯವಿಲ್ಲ:
ನಾಯಕ£ಗೆ ದೈಹಿಕವಾಗಿ ಪೆಟ್ಟು ಬಿದ್ದಾಗ ಮತ್ತು ಹಲ್ಲೆಯಾದಾಗ ಕಾರ್ಯ ಕರ್ತರು ಪ್ರತಿಭಟಿಸುವುದು-ಆರೋಪ ಮಾಡುವುದು ಸಹಜ. ನಾನು ಸದಾ ಜನಸಮುದಾಯದೊಂದಿಗೆ ಆರೋಗ್ಯ, ಶಿಕ್ಷಣ ಮತ್ತು ಜನಸೇವೆಯಲ್ಲಿ ಇದ್ದವನು. ನನಗೆ ಸಾರ್ವಜ£ಕವಾಗಿ ದಾಳಿ ಮಾಡುತ್ತಾರೆಂಬ ಭಯವಿಲ್ಲ.ಆದ್ದರಿಂದ ನನಗೆ ಪೋಲೀಸ್ ಭದ್ರತೆಯ ಅವಶ್ಯಕತೆ ಇಲ್ಲ ಎಂದು ಅವರು ನುಡಿದರು.
ಒಂದೂವರೆ ಇಂಚು ಗಾಯ:
ಕಲ್ಲು ಬಿದ್ದಿದ್ದರಿಂದ ತಲೆಯಲ್ಲಿ ಒಂದೂವರೆ ಇಂಚು ಗಾಯವಾಗಿದೆ. ಸರ್ಜಿಕಲ್ ಗಮ್ ಹಾಕಿದ್ದಾರೆ.
ನೋವಿದೆ. ಸದ್ಯಕ್ಕೆ ವೈದ್ಯರು ವಿಶ್ರಾಂತಿ ಮಾಡಲು ಹೆಳಿದ್ದಾರೆ. ಅವರ ಸಲಹೆ ಪಡೆಯುತ್ತೇನೆ. ಅವಕಾಶ £Ãಡಿದರೆ ನಾಳೆಯೇ ಪ್ರಚಾರಕ್ಕೆ ಹೋಗ್ತೀ£ ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಡ್ರಾಮ ಬರೋಲ್ಲ:
ಪರಮೇಶ್ವರ್ ತಲೆಗೆ ಬಿದ್ದ ಕಲ್ಲೆಸೆತ ಘಟನೆಯನ್ನು ಡ್ರಾಮ ಎಂದು ಕುಮಾರಸ್ವಾಮಿ ಹೇಳಿದ್ದಾರಲ್ಲಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಬಹುಳಃ ಅವರಿಗೆ ಡ್ರಾಮಾ ಮಾಡಿ ಅಭ್ಯಾಸ ಇರಬೇಕು. ನನಗೆ ಅತ್ತು ಕರೆದು ಡ್ರಾಮಾ ಮಾಡಿ ಅಭ್ಯಾಸ ಇಲ್ಲಾ. ಏಕೆಂದರೇ ಏಟು ತಿಂದವನು ನಾನು ಅಲ್ವಾ, ಅವರಲ್ಲಾ. ಅತ್ತು-ಕರೆದು ಹೇಳುವ ಅವಶ್ಯಕತೆ ನನಗೆ ಇಲ್ಲಾ. ಆ ರೀತಿಯಲ್ಲಿ ರಾಜೀಕೀಯ ಜೀವನ ನಡೆಸಿಲ್ಲ. ನಾನೇ ಜನರ ಮುಂದೆ ಹೋಗ್ತೀ£. ೫ ಸಲ ಗೆದ್ದಿದ್ದೇನೆ. ಎರಡು ಬಾರಿ ಸೋತಿದ್ದೇನೆ. ನಾನು ಸ್ಪೋರ್ಟ್ಸ್ ಪರ್ಸನ್. ಸೋಲು-ಗೆಲುವು ಒಂದೇ ನನಗೆ.ಎಲ್ಲವನ್ನು ಸಮಾನಾಗಿ ಸ್ವೀಕರಿಸಿದ್ದೇನೆ.ಯಾವುದೇ ಕಪ್ಪಚುಕ್ಕೆ ಇಲ್ಲದ ರಾಜಕೀಯ ಜೀವನ ಮಾಡಿದ್ದೇನೆ ಎಂದು ವಿರೋಧಿಗಳಿಗೆ ಖಡಕ್ಕ ಸಂದೇಶ ರವಾ£ಸಿದರು.
ಶಾಂತಿಯಿAದ ವರ್ತಿಸಲು ಕಾರ್ಯಕರ್ತರಿಗೆ ಕರೆ:
ಇತ್ತೀಚಿನ ದಿನಗಳಲ್ಲಿ ಇಂತಹ ಅಹಿತಕರ ಘಟನೆಗಳು ನಡೆಯುತ್ತಾ ಬರುತ್ತಿದ್ದು, ಮಾರ್ಚ-೦೫ ರಂದು ನಡೆದ ರಾಜೀವ ಭವನ ಉದ್ಘಾಟನಾ ಸಮಾರಂಭದಲ್ಲಿನ ಲೋಪ, ನಾಮಪತ್ರ ಸಲ್ಲಿಸುವ ವೇಳೆ ನಡೆದ ಕಲ್ಲೆಸೆತ, £ನ್ನೆ ಪ್ರಚಾರದಲ್ಲಿ ನಡೆದ ಘಟನೆಗಳು ಕ್ಷೇತ್ರದಲ್ಲಿ ಅಶಾಂತಿಯ ವಾತಾವರಣವನ್ನು ಹರಡುತ್ತಿವೆ ಮತ್ತು ಕ್ಷೇತ್ರದ ಜನರನ್ನು ಹಾಗೂ ಅಭಿಮಾ£ಗಳು/ಕಾರ್ಯಕರ್ತರನ್ನು ಆತಂಕಕ್ಕೆ ದೂಡುತ್ತಿವೆ.ಆದರೆ ಇದಕ್ಕೆ ದೃತಿಗೆಡೆದೆ ಶಾಂತಿಯಿAದ ವರ್ತಿಸಲು ಕಾರ್ಯಕರ್ತರಿಗೆ ಪರಮೇಶ್ವರ ಕರೆ £Ãಡಿದರು.
ಯಾರೂ ಸಹ ಆತಂಕಕ್ಕೆ ಒಳಗಾಗಬಾರದು, ನಾನು £ಮ್ಮೆಲ್ಲರ ಆಶೀರ್ವಾದ ಹಾಗೂ £Ãವು ತೋರಿದ ಪ್ರೀತಿಯಿಂದಾಗಿ ಮತ್ತಷ್ಟು ಬಲಿಷ್ಠನಾಗಿದ್ದೇನೆ. ಕ್ರಿಯೆಗೆ, ಪ್ರತಿಕ್ರಿಯೆ ನನ್ನ ಉದ್ದೇಶವಲ್ಲ. ಈ ಘಟನೆಯನ್ನು ಸವಾಲಾಗಿ ಸ್ವೀಕರಿಸಿದ್ದೇನೆ. ಇದು ಚುನಾ ವಣಾ ಸಮಯ ಶಾಂತಿಯಿAದ ವರ್ತಿಸಿ, ಯಾವುದೇ ಅಹಿತಕರ ಘಟನೆಗಲಿಗೆ ಅವಕಾಶ £Ãಡಬೇಡಿ. ಕ್ಷೇತ್ರದ ಜನತೆಗಾಗಿ ಇದ್ದೇನೆ. ವೈದ್ಯರು ಅವಕಾಶ £Ãಡಿದರೆ ನಾಳೆಯಿಂದಲೇ ಪ್ರಚಾರಕ್ಕೆ ಧುಮುಕುತ್ತೇನೆ ಎಂದು ಅವರು ಹೇಳಿದರು.




Free business listing adsquicks.com