ಇಂದು ತುಮಕೂರು ಸ್ಲಂ ಭವನದಲ್ಲಿ ಪಿಯುಸಿಎಲ್, ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಎಎಲ್ಎಫ್ ನಿಂದ ನಡೆದ ಮಾನವ ಹಕ್ಕುಗಳ ಸಮಾಲೋಚನಾ ಸಭೆಯಲ್ಲಿ ಮ್ಯಾನ್ಯೂಲ್ ಸ್ಕ್ಯಾವೆಂಜರ್ಸ್ ನಿಷೇಧ ಜಾಗೃತಿ ಎಸ್.ಸಿ/ಎಸ್.ಟಿ ದೌರ್ಜನ್ಯ ತಡೆ ಮತ್ತು ಪಿಟಿಸಿಎಲ್ ಜಾಗೃತಿಯ ಪೋಸ್ಟರ್ಸ್ಗಳನ್ನು ಬಿಡುಗಡೆ ಮಾಡಲಾಯಿತು, ನಂತರ ಎನ್.ಆರ್ ಕಾಲೋನಿಯ ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಸಭೆಗಳನ್ನು ಮಾಡಲಾಗಿತು.ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಿಯುಸಿಎಲ್ನ ಅಧ್ಯಕ್ಷರಾದ ಕೆ.ದೊರೆರಾಜ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂಬೇಡ್ಕರ್ ಕುರಿತ ಹೇಳಿಕೆಯನ್ನು ಖಂಡಿಸಿ ದೇಶದ ಜನರ ಕ್ಷಮೆಯಾಚನೆ ಮಾಡಬೇಕೆಂದು ಒತ್ತಾಯಿಸಿದ್ದರು ಇಂದು ಕರ್ನಾಟಕ ರಾಜ್ಯ ಸೇರಿದಂತೆ ತುಮಕೂರು ಜಿಲ್ಲೆಯ ಗ್ರಾಮಾಂತರ ಪ್ರದೇಶದ ಹೆಣ್ಣುಮಕ್ಕಳ ಮೇಲೆ ಹಾಗೂ ನಗರಗಳ ಸ್ಲಂಗಳಲ್ಲಿರುವ ದಲಿತರು/ಅಲ್ಪಸಂಖ್ಯಾತರು ವಾಸಿಸುವ ಸ್ಥಳಗಳಲ್ಲಿ ಮೈಕ್ರೋಫೈನಾನ್ಸ್ಗಳ ಹಾವಳಿ ಜಾಸ್ತಿಯಾಗಿ ದಿನೇದಿನ ಮಾನವಹಕ್ಕುಗಳ ಉಲ್ಲಂಘಟನೆಯಾಗುತ್ತಿದೆ. ಅದೇ ರೀತಿ ಜಿಲ್ಲೆಯಲ್ಲಿ ಮ್ಯಾನ್ಯೂಲ್ ಸ್ಕ್ಯಾವೆಂಜರ್ಗಳ ಸಮರ್ಪಕವಾದ ಸಮೀಕ್ಷೆಯನ್ನು ಜಿಲ್ಲಾಡಳಿತ ಮಾಡದಿರುವುದರಿಂದ ಜಿಲ್ಲೆಯಲ್ಲಿ ವ್ಯಾಪಕವಾದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಈ ಬಗ್ಗೆ ಪಿಯುಸಿಎಲ್ನಿಂದ ಸತ್ಯಶೋಧನೆ ಕೈಗೊಂಡು ಪ್ರಗತಿಪರ ಸಂಘಟನೆಗಳಿಂದ ಸಾರ್ವಜನಿಕ ಅಹವಾಲು ನಡೆಸಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಈ ಸಮಸ್ಯೆಗಳ ಮೇಲೆ ಮಾನವ ಹಕ್ಕುಗಳ ಜಾಗೃತಿ ಮೂಡಿಸಲು ಒತ್ತಡ ಹೇರುವ ಅವಶ್ಯವಿದೆ ಎಂದರು.ತುಮಕೂರು ಮಹಾನಗರ ಪಾಲಿಕೆ, ತಿಪಟೂರು, ಶಿರಾ ನಗರ ಸಭೆ, ಚಿಕ್ಕನಾಯಕನಹಳ್ಳಿ, ಕುಣಿಗಲ್, ಮಧುಗಿರಿ, ಪಾವಗಡ ಪುರಸಭೆ, ಕೊರಟಗೆರೆ, ತುರುವೇಕೆರೆ, ಗುಬ್ಬಿ ಮತ್ತು ಹುಳಿಯಾರು ಪಟ್ಟಣ ಪಂಚಾಯ್ತಿಯಲ್ಲಿ ಕಟಾಚಾರಕ್ಕೆ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಗಳ ಸಮೀಕ್ಷೆಯನ್ನು ಸಮರ್ಪಕವಾಗಿ ಮಾಡಲಾಗಿಲ್ಲ, ಅನೈರ್ಮಲ್ಯ ಶೌಚಾಲಯಗಳ ಸಮೀಕ್ಷೆ ಮಾಡಿ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಸ್ಕ್ಯಾವೆಂಜರ್ಸ್ ಗಳ ಸಮೀಕ್ಷೆ ನಡೆಸಬೇಕೆಂದು ಆಗ್ರಹಿಸಿದರು.ಪಿಯುಸಿಎಲ್ ತುಮಕೂರು ಜಿಲ್ಲಾ ಸಮಿತಿ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ರೈತ ಕೃಷಿಕೂಲಿ ಕಾರ್ಮಿಕರ ಫಾರಂ ನಂಬರ್ 50,53 ಮತ್ತ 57 ಕಂದಾಯ ಸಮಸ್ಯೆಗಳ ಮೇಲೆ, ಎಸ್.ಸಿ/ಎಸ್.ಟಿ ಅಟ್ರಾಸಿಟಿ ತಡೆಗೆ ಜಾಗೃತಿ ಮತ್ತು ಅಟ್ರಾಸಿಟಿ ಕೇಸ್ ಗಳಿಗೆ ಕೌಂಟರ್ ಕೇಸ್ ತಡೆಗೆ ರಾಷ್ಟ್ರ ಪಿಯುಸಿಎಲ್ ಮಧ್ಯಸ್ಥಿಕೆ, ಕೋಮು ಸೌಹಾರ್ದತೆ ಕುರಿತು, ಹಾಸ್ಟೆಲ್ ವಿಧ್ಯಾರ್ಥಿ ನಿಲಯಗಳ ಸಮಸ್ಯೆ, ಕಾಲೇಜು ವಿಧ್ಯಾರ್ಥಿಗಳು ಮತ್ತು ಯುವಜನರೊಂದಿಗೆ ಸಂವಿಧಾನ ಜಾಗೃತಿ ಮಾಡಲಾಗುವುದೆಂದು ಸದಸ್ಯರಾದ ಸ್ಲಂ ಜನಾಂದೋಲನ ಸಂಘಟನೆಯ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ ತಿಳಿಸಿದರು.ಈ ಸಂದರ್ಭದಲ್ಲಿ ರಾಜ್ಯ ಪಿಯುಸಿಎಲ್ ನ ಪ್ರಧಾನ ಕಾರ್ಯದರ್ಶಿ ಸುಜಾಯತ್, CITU ತುಮಕೂರು ಜಿಲ್ಲಾಧ್ಯಕ್ಷರಾದ ಮುಜೀಬ್, ಹಿರಿಯ ಪ್ರಗತಿಪರರಾದ ಕೆ.ಪಿ ನಟರಾಜಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಗೋವಿಂದಪ್ಪ, ಎಪಿಸಿಆರ್ ಪ್ರಮುಖರಾದ ತಾಜೂದ್ದೀನ್, ಮಾದಿಗ ದಂಡೋರಾದ ಆಟೋ ಶಿವರಾಜ್, ಸಾವಿತ್ರಿಬಾಯಿಪುಲೆ ಮಹಿಳಾ ಸಂಘಟನೆಯ ಅನುಪಮ, ತುಮಕೂರು ಕೊಳಗೇರಿ ನಿವಾಸಿಗಳ ಸಮಿತಿಯ ತಿರುಮಲಯ್ಯ, ಅರುಣಾ, ಸುನೀಲ್, ಜಯಂತ್, ಸ್ಲಂ ಜನಾಂದೋಲನದ ತೇಜಸ್ ಮತ್ತು ಪರ್ಯಾಯ ಕಾನೂನು ವೇದಿಕೆಯ ಮನೋಜ್ ಕುಮಾರ್