ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ
ಸೊಗಡು ಶಿವಣ್ಣರವರಿಗೆ ಭರ್ಜರಿ ರೆಸ್ಪಾನ್ಸ್
ತುಮಕೂರು: ನಗರ ವಿಧಾನಸಭಾಕ್ಷೇತ್ರದ ವ್ಯಾಪ್ತಿಯಲ್ಲಿ ಸ್ವಾಭಿಮಾನಿ ತುಮಕೂರು ನಾಗರೀಕರು ಭರ್ಜರಿ ರೆಸ್ಪಾನ್ಸ್ ನೀಡುತ್ತಿದ್ದಾರೆಂದು ಪಕ್ಷೇತರ ಅಭ್ಯರ್ಥಿ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದ್ದಾರೆ.
ಇವರು ಬುಧವಾರ ಸಂಜೆ ಕ್ಯಾತ್ಸಂದ್ರದ ವಾರ್ಡ್ ೩೩ ಮತ್ತು ೩೪ನೇ ವ್ಯಾಪ್ತಿಯಲ್ಲಿನ ಚಂದ್ರಮೌಳೇಶ್ವರ ಬಡಾವಣೆಯ ಸ್ವಾಭಿಮಾನಿ ಮತದಾರರ ಸಭೆಯಲ್ಲಿ ಮಾತನಾಡುತ್ತಾ, ನಗರದ ಅಭಿವೃದ್ಧಿಗೆ ಪ್ರಗತಿಪರ ಹಾಗೂ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳುವ ವ್ಯಕ್ತಿ ಆಯ್ಕೆಯಾದರೆ ಸೂಕ್ತ ಎಂದು ತುಮಕೂರಿನ ಸ್ವಾಭಿಮಾನಿ ಮತದಾರರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಹಿಂದೂ-ಮುಸ್ಲಿA-ಕ್ರೆöÊಸ್ತ ಸಮುದಾಯದ ಬಂಧುಗಳು ನಗರದಲ್ಲಿ ಶಾಂತಿ, ಸೌಹಾರ್ಧತೆ, ಅಭಿವೃದ್ಧಿಗೆ ಪೂರಕವಾದ ವಾತಾವರಣದಿಂದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗುವ ವಾತಾವರಣ ನಿರ್ಮಾಣವಾಗಲಿ ಎಂದು ಬಯಸುತ್ತಿದ್ದಾರೆ. ಕಳೆದ ನಾಲ್ಕು ಅವಧಿ ಶಾಸಕ ಹಾಗೂ ಎರಡು ಅವಧಿಗೆ ಮಂತ್ರಿಗಳನ್ನಾಗಿ ಮಾಡಿದ್ದ ತುಮಕೂರು ನಗರದ ನಾಗರೀಕರ ಋಣವನ್ನು ತೀರಿಸಲು ಸಾಧ್ಯವಾಗುವುದಿಲ್ಲ. ಈ ಬಾರಿಯ ಚುನಾವಣೆ ನನಗೆ ನಿರ್ಣಾಯಕವಾಗಿದ್ದು, ಮತದಾರರ ಆರ್ಶೀವಾದವು ನನ್ನ ಮೇಲೆ ಇದೆ ಎಂದು ಸೊಗಡು ಶಿವಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.