*ನಿಸ್ವಾರ್ಥದಿಂದ ಸಮಾಜ ಸೇವೆ ಮಾಡಬೇಕಾ! ಹಾಗಾದ್ರೆ ಖಾದ್ರಿ ಚಾರಿಟೇಬಲ್ ಟ್ರಸ್ಟ್ ಗೆ ಭೇಟಿ ನೀಡಿ!!
*ಜಾತಿ ಧರ್ಮ ಭೇದವಿಲ್ಲದೆ ನಿಸ್ವಾರ್ಥ ಸಮಾಜ ಸೇವೆ ಮಾಡುತ್ತಿರುವ ಖಾದ್ರಿ ಟ್ರಸ್ಟ್.
*ಬಡವರಿಗೆ ಉಚಿತ ಸಾಮೂಹಿಕ ವಿವಾಹ ಹಾಗೂ ಶಿಕ್ಷಣ ನೀಡುತ್ತಿರುವ ಖಾದ್ರಿ ಟ್ರಸ್ಟ್ ಗೆ ಒಂದು ಸಲಾಂ.
ತುಮಕೂರು: ಬಡವರಿಗೆ ಹಾಗೂ ಹಿಂದುಳಿದ ದಿನದಲಿತ ಮತ್ತು ಅಲ್ಪಸಂಖ್ಯಾತರಿಗಾಗಿ ಹಲವು ವರ್ಷಗಳಿಂದ ನಿಸ್ವಾರ್ಥ ಸೇವೆ ಮಾಡುತ್ತಾ ಸಾವಿರಾರು ಜನರಿಗೆ ಜೀವನವನ್ನು ಕಟ್ಟಿಕೊಟ್ಟ ಹೆಚ್ಎಂಕೆ ಸಾನಿ ಆರೀಫ್ ಚಿಷ್ಠಿ ಖಾದ್ರಿ ಚಾರಿಟೇಬಲ್ ಟ್ರಸ್ಟ್ ಅದ್ಭುತವಾದ ಕಾರ್ಯವನ್ನು ಮಾಡುತ್ತ ಪ್ರಸಿದ್ಧಿ ಪಡೆಯುತ್ತಿದೆ.
ತುಮಕೂರು ನಗರದ ಭೀಮಸಂದ್ರದಲ್ಲಿ ಇರುವ ಟ್ರಸ್ಟಿನ ಅಡಳಿತವು ಬಡವ ಶ್ರೀಮಂತ ಎನ್ನದೆ, ಜಾತಿಭೇದ ಧರ್ಮಭೇದವಿಲ್ಲದೆ, ಸರ್ವರಿಗೂ ಸಮ ಬಾಳು ಸರ್ವರಿಗೂ ಸಮಪಾಲು ಎನ್ನುವ ಹಾಗೆ ಎಲ್ಲಾ ಧರ್ಮದವರಿಗೂ ಮುಕ್ತವಾದ ಅವಕಾಶವನ್ನು ಕೊಟ್ಟು ಭಾವೈಕ್ಯತೆ ಮೆರೆದಿದೆ. ಬಡ ಕುಟುಂಬದವರಿಗೆ ಉಚಿತ ಸಾಮೂಹಿಕ ಮದುವೆ, ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಬಡವರಿಗೆ ಆರ್ಥಿಕ ಸಹಾಯ, ಹಾಗೂ ಹಲವು ಸಮಾಜಮುಖಿ ಕಾರ್ಯ ಮಾಡುತ್ತಿದೆ. ಈ ಟ್ರಸ್ಟಿನ ಅಡಿಯಲ್ಲಿ ಮದರಸಾ ಶಾಲೆಕೂಡ ನಡೆಯುತ್ತಿದ್ದು ಸುಮಾರು 35ಕ್ಕೂ ಹೆಚ್ಚು ಜನ ವಿದ್ಯಾರ್ಥಿಗಳು ವಸತಿ ಸಹಿತ ಶಿಕ್ಷಣವು ಕೂಡ ಉಚಿತವಾಗಿ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಉಚಿತ ಶಿಕ್ಷಣ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಅವಶ್ಯಕವಾಗಿರುವ ಆಂಬುಲೆನ್ಸ್ ವ್ಯವಸ್ಥೆ ಕೂಡ ಮಾಡಲು ಉದ್ದೇಶ ಹೊಂದಿದ್ದು ಇಂತಹ ತೀರ ಅಪರೂಪದ ಸಮಾಜ ಸೇವೆ ಮಾಡುತ್ತಿರುವ ಖಾದ್ರಿ ಟ್ರಸ್ಟ್ ನವರಿಗೆ ದಾನಿಗಳು ಕೈ ಜೋಡಿಸಬೇಕು ಹಲವು ರೀತಿಯಲ್ಲಿ ಸಹಾಯ ಸಹಕಾರ ನೀಡಿ ಇನ್ನು ಉತ್ತಮವಾಗಿ ಬೆಳೆಯಲು ದಾನಿಗಳು ಸಮಾಜದ ಹಿತ ಬಯಸುವರು ಸಹಕಾರ ನೀಡಬೇಕಾಗಿರುವುದು ತುಂಬಾ ಅವಶ್ಯಕವಾಗಿದೆ. ಸಮಾಜ ಸೇವೆ ಹೆಸರಿನಲ್ಲಿ ಇವತ್ತು ಅನೇಕರು ಪ್ರಚಾರ ಗಿಟ್ಟಿಸಿ ಕೊಳ್ಳುತ್ತಿದ್ದಾರೆ ಆದರೆ ನಿಜವಾಗಲೂ ಬಡ ಜನರಿಗಾಗಿ ಮಾಡುವ ನಿಸ್ವಾರ್ಥ ಸೇವೆಗೆ ನಾವೆಲ್ಲರೂ ಕೈಜೋಡಿಸಬೇಕು ದಾನಿಗಳು ಇಂತಹ ಸೇವೆಯನ್ನು ಗುರುತಿಸಿ ಆರ್ಥಿಕ ಸಹಾಯ ಮತ್ತು ನೆರವು ನೀಡಲು ಮುಂದೆ ಬರಬೇಕು. ಟ್ರಸ್ಟಿಗೆ ಖುದ್ದಾಗಿ ಭೇಟಿ ನೀಡಿ ದೇಣಿಗೆಯನ್ನು ಸಲ್ಲಿಸಬಹುದು ಎಂದು ಟ್ರಸ್ಟ್ ಅಧ್ಯಕ್ಷರಾದ ಉಬೇದ್ ಉಲ್ಲಾ ಖಾನ್, ಕಾರ್ಯದರ್ಶಿ ಇನಾಯತ್ ಉಲ್ಲ್ ಖಾನ್, ಖಜಾಂಚಿಗಳಾದ ನಾಜಿಯಾ, ಮುನೀರ್ ಖಾನ್, ಆರೀಫ್ ಪಾಶಾ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ +91 96119 94046
HMK ಸಾನಿ ಆರಿಫ್ ಚಿಶ್ತಿ ಖಾದ್ರಿ ಚಾರಿಟೇಬಲ್ ಟ್ರಸ್ಟ್

Leave a comment
Leave a comment


