ತುಮಕೂರು:ದೇಶದ ಶೇ೭೩ರಷ್ಟು ಜನತೆ ನರೇಂದ್ರಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕೆಂದು ಬಯಸಿದ್ದಾರೆ.ಹಾಗಾಗಿ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗುವುದು ಖಚಿತ.ಇದನ್ನು ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರು ಮನಸ್ಸಿನಲ್ಲಿಟ್ಟು ಕೊಂಡು ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡಬೇಕಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿಳಿಸಿದ್ದಾರೆ.
ನಗರದ ಶ್ರೀಸಿದ್ದಿವಿನಾಯಕ ಸಮುದಾಯಭವನದಲ್ಲಿ ಬಿಜೆಪಿ ನಗರ ಮಂಡಲದಿAದ ಆಯೋಜಿಸಿದ್ದ ಪ್ರಧಾನಿ ನರೇಂದ್ರಮೋದಿ ಅವರ ೯ ನೇ ವರ್ಷದ ವಾರ್ಷಿಕೋತ್ಸವ ಹಾಗೂ ಮತದಾರರಿಗೆ ಕೃತಜ್ಞತಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ೨೦ ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿ, ೦೯ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ಅವರು ತೆಗದುಕೊಂಡಿರುವ ನಿರ್ಧಾರಗಳ ಫಲವಾಗಿ ಇಂದು ದೇಶ ಎಲ್ಲಾ ವಿಭಾಗಗಳಲ್ಲಿಯೂ ಅಭಿವೃದ್ದಿ ಹೊಂದಿದೆ. ಅಭಿವೃದ್ದಿ ಶೀಲ ರಾಷ್ಟçಗಳ ಸಾಲಿನಲ್ಲಿ ಐದನೇ ಸ್ಥಾನದಲ್ಲಿದೆ ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್ ೧೩೬ ಸೀಟುಗಳನ್ನು ಪಡೆದು, ಅಧಿಕಾರಕ್ಕೆರುವಲ್ಲಿ ಬಿಜೆಪಿ ಮುಖಂಡರ ತಪ್ಪು ಹೆಚ್ಚಾಗಿದೆ.ಅಧಿಕಾರದ ರುಚಿ ಕಂಡ ನಾವು,ಚುನಾವಣೆ ಸಂದರ್ಭದಲ್ಲಿ ಅದನ್ನು ಸಾರ್ವಜನಿಕ ಅಭಿಪ್ರಾಯವಾಗಿಸುವಲ್ಲಿ ವಿಫಲರಾದೆವು. ಇದರ ಭಾಗವಾಗಿಯೇ ಬಿಜೆಪಿ ಸೋಲು ಕಾಣಬೇಕಾಯಿತು ಎಂದ ರವಿಕುಮಾರ್, ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳ ನಡುವೆ ಬಾರಿ ವೆತ್ಯಾಸವಿದ್ದು,ಎಲ್ಲವನ್ನು ಮರೆತು ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಅಧಿಕಾರ ಹಿಡಿಯಲು ಪ್ರಯತ್ನಿಸೋಣ ಎಂದು ಕಾರ್ಯಕರ್ತರಿಗೆ ಹುರಿದುಂಬಿಸಿದರು.
ಮೋದಿಯವರ ಮೇಕ್ಇನ್ ಇಂಡಿಯಾ ಮತ್ತು ಮೇಡ್ ಇನ್ನ ಇಂಡಿಯಾ ಪರಿಕಲ್ಪನೆ ಅದ್ಬುತವಾಗಿದೆ.ತಂತ್ರಜ್ಞಾನವನ್ನು ಎರವಲು ಪಡೆದು,ವಸ್ತುಗಳನ್ನು ಭಾರತದಲ್ಲಿಯೇ ಉತ್ತಾಧಿಸುವ ಕೆಲಸ ನಡೆದಿದೆ. ಇದರ ಭಾಗವಾಗಿಯೇ ಅಮದಿಗಿಂತ ರಫ್ತು ಪ್ರಮಾಣ ಹೆಚ್ಚಾಗಿ, ದೇಶದ ಜಿಡಿಪಿ ೭.೫ಕ್ಕೆ ಜಿಗಿದಿದೆ.ಭಾರತದ ಮುಂದೆ ಬೇರೆಲ್ಲಾ ದೇಶಗಳ ಜಿಡಿಪಿ ಕಡಿಮೆ ಇದ್ದು, ಭಾರತ ಅಭಿವೃದ್ದಿ ಪಥದಲ್ಲಿದೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕೆ ಎಂದು ಎನ್.ರವಿಕುಮಾರ್ ಪ್ರಶ್ನಿಸಿದರು.
ಸಂಸದ ಜಿ.ಎಸ್.ಬಸವರಾಜು ಮಾತನಾಡಿ,ಪ್ರಧಾನಿ ನರೇಂದ್ರ ಮೋದಿ ಅವರು ೯ ವರ್ಷಗಳ ಆಡಳಿತ ಭಾರತದ ರಾಜಕೀಯ ಇತಿಹಾಸದಲ್ಲಿಯೇ ಮಹತ್ವದ ದಿನಗಳು.ಅರ್ಥಿಕವಾಗಿ,ಸಾಮಾಜಿಕವಾಗಿ,ಶೈಕ್ಷಣಿಕವಾಗಿ,ಔದ್ಯೋಗಿಕವಾಗಿ,ರಕ್ಷಣಾ ವಲಯದಲ್ಲಿಯೂ ಭಾರತ ಶರವೇಗದಲ್ಲಿ ಮುನ್ನುಗುತಿದೆ. ಈ ವೇಗವನ್ನು ಕಾಯ್ದುಕೊಳ್ಳಬೇಕೆಂದರೆ ಮತ್ತೊಮ್ಮೆ ನರೇಂದ್ರಮೋದಿ ಪ್ರಧಾನಿಯಾಗುವ ಅಗತ್ಯವಿದೆ ಎಂದರು.
ಪ್ರಧಾನಿಯಾಗಬೇಕೆಂದು ಬಯಸಿದ್ದಾರೆ.

Leave a comment
Leave a comment


