ತುಮಕೂರು: ಪ್ರಜಾಪ್ರಭುತ್ವದ ಉಳಿವಿಗಾಗಿ ನಾವು ಕೆಲಸ ಮಾಡುತ್ತಿದ್ದೇವೆ ಅದರಂತೆ ನವ ಸಮಾಜದ ನಿರ್ಮಾಣಕ್ಕಾಗಿ ಸೊಗಡು ಶಿವಣ್ಣ ಹೋರಾಡುತ್ತಿದ್ದಾರೆ ಅವರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ನೀಡುತಿದ್ದೇವೆ ಎಂದು ಜೆಡಿಯು ಪಕ್ಷದ ಮುಖಂಡರಾದ ಮಹಿಮಾ ಪಟೇಲ್ ತಿಳಿಸಿದರು.
ಅವರಿಂದು ಖಾಸಗಿ ಹೋಟೆಲ್ನಲ್ಲಿ ಸ್ವತಂತ್ರö್ಯ ಅಭ್ಯರ್ಥಿ ಸೊಗಡು ಶಿವಣ್ಣ ಅವರಿಗೆ ಬೆಂಬಲ ಸೂಚಿಸಿ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಪ್ರಸಕ್ತ ರಾಜಕೀಯ ವಿದ್ಯಾಮಾನಗಳ ಕುರಿತು ಮಾತನಾಡಿದರು.

ನಮ್ಮ ಪಕ್ಷದ ವತಿಯಿಂದ ಹಲವಾರು ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ನಿಲ್ಲಿಸಿದ್ದೇವೆ ನಾನು ಜೆ ಹೆಚ್ ಪಟೇಲ್ ರವರ ಮಗನಾಗಿ ತುಮಕೂರು ಜನತೆಗೆ ಮಹಿಮಾ ಪಟೇಲ್ ಮನವಿ ಮಾಡುವುದೇನೆಂದರೆ ಈ ಭಾರಿ ಅತೀ ಹೆಚ್ಚಿನ ಸಂಖ್ಯೆಯ ಅಂತರದಲ್ಲಿ ಗೆಲ್ಲಿಸುವುದರೊಂದಿಗೆ ನಾವು ಅವರಿಗೆ ಬೆಂಬಲಕ್ಕೆ ಸೂಚಿಸುತ್ತಿದ್ದೇವೆ ಮತ್ತು ನಮ್ಮ ಪಕ್ಷದ ಎಲ್ಲಾ ಕಾರ್ಯಕರ್ತರು ಹಾಗೂ ನಮ್ಮ ಬೆಂಬಲಿಗರು ಇವರಿಗೆ ಸಹಕಾರ ನೀಡುತ್ತಿದ್ದೇವೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಸೊಗಡು ಶಿವಣ್ಣ, ಜೆಡಿಯು ಪಕ್ಷದ ಮಹಿಮಾ ಪಟೇಲ್, ಕೆಜಿಎಲ್ ರವಿ, ಜಯಪ್ರಕಾಶ್, ಆಟೋ ನವೀನ್, ಹಾಗೂ ಇತರರು ಭಾವಹಿಸಿದ್ದರು.



