ವಿ. ಸೋಮಣ್ಣ ಅಭಿಮಾನಿ ಬಳಗ ದಿಂದ ಕೇಂದ್ರ ಜಲಶಕ್ತಿ ಮತ್ತು ರಾಜ್ಯ ರೈಲ್ವೆ ಖಾತೆ ಸಚಿವರಾದ
ವಿ. ಸೋಮಣ್ಣನವರ ಜನ್ಮದಿನದ ಅಂಗವಾಗಿ
ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ಸಿದ್ದಗಂಗಾ ವೈದ್ಯಕೀಯ ಮಹಾವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ
ಉಚಿತ ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ, ನೇತ್ರದಾನ ಶಿಬಿರವನ್ನು ದಿನಾಂಕ: 20-07-2024 ರಂದು, ಬೆಳಿಗ್ಗೆ 10 ಗಂಟೆಯಿಂದ, ತುಮಕೂರು ಮಹಾನಗರ ಪಾಲಿಕೆ ಆವರಣದಲ್ಲಿ ಆಯೋಜಿಸಲಾಗಿದ್ದು, ಇದರ ಸಂಪೂರ್ಣ ಮಾಹಿತಿಯನ್ನು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಸೇನೆಯ ಜಿಲ್ಲಾಧ್ಯಕ್ಷರಾದ ದನಿಯಾ ಕುಮಾರ್, ಮುಖಂಡರಾದ ಪಾವಗಡ ಶ್ರೀರಾಮ್, ಸಂತೋಷ್, ಶಬ್ಬೀರ್ ಅಹ್ಮದ್, ಎಸ್ ರಾಮಚಂದ್ರ ರಾವ್, ಕೊಪ್ಪಲ್ ನಾಗರಾಜು, ಬೇವಿನ ಮರದ ಸಿದ್ದಪ್ಪ, ಮಂಜುನಾಥ್, ವೆಂಕಟಾಚಲ,ಜಿಮ್ ನಟರಾಜು,ಹರಿಪ್ರಸಾದ್, ವಿಠಲ್, ಗುರು ಇನ್ನು ಮುಂತಾದವರು ಉಪಸ್ಥಿತರಿದ್ದರು.