ಬರ ನಿರ್ವಹಣೆ: ಸಹಾಯವಾಣಿ ಸ್ಥಾಪನೆ
ತುಮಕೂರು(ಕ.ವಾ.)ಸೆ.೧೬: ಜಿಲ್ಲೆಯ ೧೦ ತಾಲ್ಲೂಕುಗಳಲ್ಲಿಯೂ ಬರಪರಿಸ್ಥಿತಿ ತಲೆದೋರಿರುವ ಹಿನ್ನಲೆಯಲ್ಲಿ ಸಮರ್ಪಕವಾಗಿ ಬರ ಪರಿಸ್ಥಿತಿಯನ್ನು ನಿರ್ವಹಣೆ ಮಾಡಲು ರೈತರ ಅನುಕೂಲಕ್ಕಾಗಿ ಸಹಾಯವಾಣಿ ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.
ಬರಪರಿಸ್ಥಿತಿಯಲ್ಲಿ ರೈತರು ಎದೆಗುಂದದೆ ಆತ್ಮಸ್ಥೆöÊರ್ಯ ಹೊಂದಿರಬೇಕು. ರೈತರ ಸಂಕಷ್ಟದಲ್ಲಿ ಸ್ಪಂದಿಸಲು ಆಯಾ ತಾಲ್ಲೂಕು ತಹಶೀಲ್ದಾರರಿಗೆ ಈಗಾಗಲೇ ಸೂಚಿಸಲಾಗಿದೆ.
ಬೆಳೆ ನಷ್ಟ, ಸಾಲ ಮರುಪಾವತಿ ಮತ್ತಿತರ ಯಾವುದೇ ಸಮಸ್ಯೆಗಳಿದ್ದಲ್ಲಿ ಜಿಲ್ಲೆಯ ರೈತರು ಸಹಾಯವಾಣಿ ಸಂಖ್ಯೆ: ೦೮೧೬-೨೨೧೩೪೦೦, ೧೫೫೩೦೪(ಸ್ಮಾರ್ಟ್ ಸಿಟಿ ಹೆಲ್ಪ್ಲೈನ್ ೨೪*೭), ೭೩೦೪೯೭೫೫೧೯ನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಬರ ನಿರ್ವಹಣೆ: ಸಹಾಯವಾಣಿ ಸ್ಥಾಪನೆ
Leave a comment
Leave a comment