ತುಮಕೂರು: ವಿದ್ಯಾರ್ಥಿಗಳಲ್ಲಿ ಉದ್ಯೋಗ ಮತ್ತು ಉದ್ಯಮ ಶೀಲತೆ ಕೌಶಲ್ಯ ಕಲ್ಪಿಸುವ ನಿಟ್ಟಿನಲ್ಲಿ ನಿ ಬೆಂಗಳೂರಿನ ರಾಬರ್ಟ್ ಬೋಷ ಕಂಪನಿ ಸೇರಿದಂತೆ ವಿವಿಧ ರಾಜ್ಯದ ಕಂಪನಿಗಳ ಜೊತೆ ಸಾಹೇ ವಿಶ್ವವಿದ್ಯಾಲಯ ಇಂದು ಪರಸ್ಪರ ಸಹಕಾರ ಒಪ್ಪಂದ ಒಡಂಬಡಿಕೆಗೆ ಸಹಿ ಹಾಕಿತು.
ನಗರದ ಸಿದ್ಧಾರ್ಥ ನಗರದಲ್ಲಿರುವ ಶ್ರೀ ಸಿದ್ದಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್(ಸಾಹೇ) ಕಚೇರಿಯಲ್ಲಿ ನಡೆದ ಪರಸ್ಪರ ಮಾತುಕತೆ ಮತ್ತು ಚರ್ಚೆಯ ನಂತರ ಕೌಶಲ್ಯಾಭಿವೃದ್ಧಿ ಕಲಿಕೆ ಸೇರಿದಂತೆ ಹಲವು ಕ್ಷೇತ್ರದಲ್ಲಿ ಸಾಹೇ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಲು ವಿವಿಧ ಕಂಪನಿಯ ಜೊತೆಗೆ ಪರಸ್ಪರ ಒಪ್ಪಂದ ಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಲಿಂಗೇಗೌಡ ಅವರು ಮಾತನಾಡಿ ಸಾಹೇ ಹಾಗೂ ಬಾಷ್ ಕಂಪನಿಯ ಜೊತೆ ಉದ್ಯೋಗ ಮತ್ತು ಉದ್ಯಮಶೀಲತೆ ಕಾರ್ಯ ಚಟುವಟಿಕೆ ಜೊತೆ ವಿಶ್ವವಿದ್ಯಾಲಯವು ಕೈ ಜೋಡಿಸುತ್ತದೆ. ಈ ಕಂಪನಿಗಳು ಉದ್ಯಮ ಕ್ಷೇತ್ರಕ್ಕೆ ಸಂಬAಧಿಸಿದAತೆ ನಡೆಸುವಂತ ವಿಭಿನ್ನ ಕಾರ್ಯಚಟುವಟಿಕೆಗಳು ನಮ್ಮ ಸಂಸ್ಥೆಯಲ್ಲಿ ನಡೆಯುತ್ತವೆ ಎಂದರು.

ಸುಮಾರು ೨೫ ಕಂಪನಿಗಳು ವಿಶ್ವವಿದ್ಯಾಲಯದ ಜೊತೆ ಒಡಬಂಡಿಕೆ ಮಾಡಿಕೊಂಡಿದ್ದು ವಿದ್ಯಾರ್ಥಿಗಳಿಗೆ ಸಂಶೋಧನೆ ಮತ್ತು ತರಬೇತಿ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುವಲ್ಲಿ ಸಾಹೇ ವಿಶ್ವವಿದ್ಯಾಲಯವು ಮುಂಚೂಣಿಯಲ್ಲಿದೆ. ಡಾ.ಓ.ಪಿ.ಗೋಯಲ ಅವರ ನೇತೃತ್ವದಲ್ಲಿ “ಪ್ರೆöÊಡ್” ಎಂಬ ಹೊಸ ಕಾರ್ಯ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಾಹೇ ಕುಲಸಚಿವರಾದ ಡಾ.ಎಮ್.ಝಡ್.ಕುರಿಯನ್ ಮಾತನಾಡಿ, ಒಡಂಬಡಿಕೆಯಿAದಾಗಿ ವಿದ್ಯಾರ್ಥಿಗಳು ಉನ್ನತ ಅಧ್ಯಯನ ಮತ್ತು ತರಬೇತಿಗೆ ಆರ್ಥಿಕ ನೆರವು ದೊರೆತಂತಾಗಿದೆ. ಎಸ್ಎಸ್ಐಟಿಯಲ್ಲಿ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳಿಗೆ ಹಾಗೂ ಕಾಲೇಜಿನ ಪ್ರಾಧ್ಯಾಪಕರಿಗೆ ಆಧುನಿಕ ತಂತ್ರಜ್ಞಾನ ಬಳಕೆ ಬಗ್ಗೆ ತರಬೇತಿ ನೀಡಲಾಗುತ್ತದೆ. ಈ ಕಂಪನಿಯ ವತಿಯಿಂದ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ, ಸಂಶೋಧನೆಗಳು, ಪ್ರಾಜೆಕ್ಟ್ಗಳನ್ನು ಮಾಡಲು ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಬಾಷ್ ಸಂಸ್ಥೆಯ ಮುಖ್ಯಸ್ಥ ಡಾ.ಓ.ಪಿ.ಗೋಯಲ ಅವರ ನೇತೃತ್ವದಲ್ಲಿ ಉದ್ಯೋಗ ಮತ್ತು ಉದ್ಯಮ ಶೀಲತೆ ಕುರಿತು ತರಬೇತಿ ಪಡೆದುಕೊಂಡ ವಿವಿಧ ರಾಜ್ಯದ ಅಭ್ಯರ್ಥಿಗಳು ತಮ್ಮ ಅನುಭವ ಹಂಚಿಕೊAಡರು.
ಸಾಹೇ ವಿಶ್ವ ವಿದ್ಯಾಲಯದ ಮಾಜಿ ಉಪಕುಲಪತಿ ಡಾ. ಪಿ.ಬಾಲಕೃಷ್ಣಶೆಟ್ಟಿ ಅವರು ಮಾತನಾಡಿ ಶೈಕ್ಷಣಿಕ ವರ್ಷದ ಕಾರ್ಯ ಚಟುವಟಿಗಳ ಕುರಿತಾದ ಮಾಹಿತಿಯನ್ನು ಪಿಪಿಟಿ ಮೂಲಕ ವಿವಿದ ಕಂಪನಿಗಳ ಮುಖ್ಯಸ್ಥರಿಗೆ ಮನವರಿಕೆ ಮಾಡಿಕೊಟ್ಟರು.
ಎಸ್ಎಸ್ಐಟಿ ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ್, ಪ್ರಾಧ್ಯಾಪಕರಾದ ಡಾ.ಆರ್.ಪ್ರಕಾಶ, ಸಂಯೋಜನಾ ಕೇಂದ್ರದ ಡಾ.ಜಿ.ಎ.ಶ್ರೀನಿಧಿ,ಪ್ರಾಧ್ಯಾಪಕರು ಹಾಗೂ ಕಂಪನಿಯ ಸಿಬ್ಬಂದಿ ಈ ಸಂದರ್ಭದಲ್ಲಿಹಾಜರಿದ್ದರು.



