ತುಮಕೂರು;ಜನರ ನಿರೀಕ್ಷೆಯಂತೆ ಬಿಜೆಪಿ ಪಕ್ಷ ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಮದ್ಯಪ್ರದೇಶ್,ರಾಜ್ಯಸ್ಥಾನ ಮತ್ತು ಚತ್ತಿಸ್ಘಡಗಳಲ್ಲಿ ಪ್ರಚಂಡ ಜಯಗಳಿಸಿದೆ. ತೆಲಂಗಾಣದಲ್ಲಿಯೂ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ಪಡೆದಿದ್ದು, ಕಾಂಗ್ರೆಸ್ ಪಕ್ಷವನ್ನು ಜನರು ಸಾರ ಸಗಟಾಗಿ ತಿರಸ್ಕರಿಸಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈ ಐದು ರಾಜ್ಯಗಳ ಚುನಾವಣೆಯ ಫಲಿತಾಂಶ ಐರನ್ ಲೆಗ್ ಎಂದು ಪ್ರಧಾನಿಯವರನ್ನು ಗೇಲಿ ಮಾಡುತಿದ್ದ ಕಾಂಗ್ರೆಸ್ ಮುಖಂಡರಿಗೆ ಸರಿಯಾದ ಉತ್ತರ ನೀಡಿದೆ.ಈ ಬಾರಿಯ ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯವನ್ನು ನೋಡಲು ಪ್ರಧಾನಿಯವರು ಹೋಗಿದ್ದರು. ಪಂದ್ಯದ ಸೋಲಲು ಪ್ರಧಾನಿ ಹೋಗಿದ್ದೇ ಕಾರಣ ಎಂಬAತೆ ಕೆಲವರು ಬಿಂಬಿಸಿದರು.ಇದಕ್ಕೆಲ್ಲಾ ಜನತೆ ಉತ್ತರ ನೀಡಿದ್ದಾರೆ ಎಂದರು.
ಐದು ರಾಜ್ಯಗಳ ಚುನಾವಣೆಯ ಫಲಿತಾಂಶ ಐರನ್ ಲೆಗ್

Leave a comment
Leave a comment