ಕಲಿಕೆಯ ಜೊತೆಗೆ ಕೌಶಲ್ಯ ಮತ್ತು ಜ್ಞಾನವನ್ನು ಒದಗಿಸಿಕೊಡುವಂತಹ ಉತ್ತಮ ಡಿಜಿಟಲ್ ವೇದಿಕೆ ಇನ್ಫೋಸಿಸ್ ಸ್ಪಿçಂಗ್ಬೋರ್ಡ್ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ. ವೈ. ಎಸ್. ಸಿದ್ದೇಗೌಡ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯ ಸೋಮವಾರ ಆಯೋಜಿಸಿದ್ದ ‘ಇನ್ಫೋಸಿಸ್ ಸ್ಪಿçಂಗ್ಬೋರ್ಡ್’ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅವಕಾಶಗಳನ್ನು ನಾವೇ ಸೃಷ್ಟಿಸಿಕೊಳ್ಳಬೇಕು. ಅಂತಹ ಅವಕಾಶಗಳಿಗೆ ಮಾರ್ಗದರ್ಶನ ನೀಡುವುದು ಇನ್ಫೋಸಿಸ್ ಸ್ಪಿçಂಗ್ಬೋರ್ಡ್ ಡಿಜಿಟಲ್ ಪ್ಲಾಟ್ಫಾರ್ಮ್ ಆಗಿದೆ. ಹೆಚ್ಚಿನ ವಿದ್ಯಾರ್ಥಿಗಳು ಇದರಲ್ಲಿ ಸದುಪಯೋಗ ಪಡೆಯುತ್ತಿರುವುದು ಶಿಕ್ಷಣ ಪ್ರಗತಿಯ ಸಂಕೇತವಾಗಿದೆ ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಮಾತನಾಡಿ, ಇನ್ಫೋಸಿಸ್ ಸ್ಪಿçಂಗ್ಬೋರ್ಡ್ ಸಂಸ್ಥೆಯ ಮುಖ್ಯ ಉದ್ದೇಶವೆ ಪ್ರಾಯೋಗಿಕ ಜ್ಞಾನದೊಂದಿಗೆ ಪ್ರಗತಿ ಪಡೆದು, ಇಂದಿನ ಯುಗದ ವೇಗಕ್ಕೆ ಹೊಂದಿಕೊಳ್ಳುವುದು. ಹಾಗಾಗಿ, ಅಧ್ಯಾಪಕರ ಜವಾಬ್ದಾರಿ ನಮ್ಮ ವಿವಿಯ ಎಲ್ಲ ವಿದ್ಯಾರ್ಥಿಗಳಿಗೆ ಇನ್ಫೋಸಿಸ್ ಸ್ಪಿçಂಗ್ಬೋರ್ಡ್ ಪ್ಲಾಟ್ಫಾರ್ಮ್ನ ಅಗತ್ಯದ ಬಗ್ಗೆ ತಿಳಿಸಿ, ಬರುವಂತಹ ದಿನಗಳಲ್ಲಿ ಎಲ್ಲರೂ ಇದರ ಉಪಯೋಗ ಪಡೆಯುವು ಹಾಗೆ ಮಾಡುವುದು ಎಂದು ಹೇಳಿದರು.
ಇನ್ಫೋಸಿಸ್ ಸಂಸ್ಥೆಯ ಕಾರ್ಪೊರೇಟ್ ವ್ಯವಹಾರಗಳ ಮುಖ್ಯಸ್ಥ ಸಂತೋಷ್ ಅನಂತಪುರ ಮಾತನಾಡಿ, ಇನ್ಫೋಸಿಸ್ ಸ್ಪಿçಂಗ್ಬೋರ್ಡ್ ಸಾಮಾಜಿಕ ಜವಾಬ್ದಾರಿಯನ್ನು ತೆಗೆದುಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆ ಒದಗಿಸಿಕೊಟ್ಟಿದೆ ಎಂದರು.
ಇನ್ಫೋಸಿಸ್ ಸಂಸ್ಥೆಯ ಜಾಗತಿಕ ಮುಖ್ಯಸ್ಥ ತಿರುಮಲ ಆರೋಹಿ ಮಾತನಾಡಿ, ಇನ್ಫೋಸಿಸ್ ಸ್ಪಿçಂಗ್ಬೋರ್ಡ್ನಲ್ಲಿ ಒಟ್ಟು ೧೬೦೦೦ ಕೋರ್ಸುಗಳಿದ್ದು, ವಿದ್ಯಾರ್ಥಿಗಳು ಇದರ ಉಪಯೋಗವನ್ನು ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಬೇಕಾದ ಅವಶ್ಯಕ ಮಾಹಿತಿಯನ್ನು ಅನೇಕ ವಿಶ್ವವಿದ್ಯಾನಿಲಯಗಳಿಗೆ ಇನ್ಫೋಸಿಸ್ ಸ್ಪಿçಂಗ್ಬೋರ್ಡ್ ಒದಗಿಸುತ್ತಿದೆ ಎಂದು ಶಿಕ್ಷಣ ಪ್ರಗತಿಯ ಸಂಕೇತವಾಗಿದೆTumkuru News.
ಕಾರ್ಯಕ್ರಮದಲ್ಲಿ ವಿವಿ ಕುಲಸಚಿವೆ ನಾಹಿದಾ ಜûಮ್ ಜûಮ್, ಐಕ್ಯೂಎಸಿ ನಿರ್ದೇಶಕ ಪ್ರೊ. ರಮೇಶ್ ಬಿ., ಪಿಎಂಇಬಿ ನಿರ್ದೇಶಕ ಪ್ರೊ. ಸಂಪತ್ ಕುಮಾರ್ ಬಿ. ಟಿ., ಶೈಕ್ಷಣಿಕ ವಿಭಾಗದ ಉಪಕುಲಸಚಿವೆ ಡಾ. ಮಂಗಳಾಗೌರಿ ಎಂ., ಜೀವತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ಶರತ್ಚಂದ್ರ ಆರ್. ಜಿ., ಇನ್ಫೋಸಿಸ್ ಸಂಸ್ಥೆಯ ತರಬೇತುದಾರೆ ಸಹನಾ ಕುಮಾರಸ್ವಾಮಿ ಭಾಗವಹಿಸಿದ್ದರು.