ಜಾತಿ ದೌರ್ಜನ್ಯ ಶಿಕ್ಷೆ ಪ್ರಮಾಣ ಹೆಚ್ಚಿಸಲು ಜನರಲ್ಲಿ ಜಾಗೃತಿ ಅಗತ್ಯ – ಡಾ .ಎಸ್ ರಮೇಶ್
ಇಂದು ಪರ್ಯಾಯ ಕಾನೂನು ವೇದಿಕೆ ಮತ್ತು ಸ್ಲಂ ಜನಾಂದೋಲನ ಕರ್ನಾಟಕದಿಂದ ವೃತ್ತಿಪರ ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರಿಗೆ ಎಸ್ಸಿ/ಎಸ್ಟಿ ಧೌರ್ಜನ್ಯ ತಡೆ ಕಾಯಿದೆ ಮತ್ತು ಪಿಟಿಸಿಎಲ್ ಕಾಯಿದೆ ಕುರಿತು ಕಾರ್ಯಗಾರವನ್ನು ನಗರದ ಸುಧಾ ಟೀ ಹೌಸ್ನಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಸೂಫಿಯ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್ ರಮೇಶ್ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ಧೌರ್ಜನ್ಯ ತಡೆ ಕಾಯಿದೆ 1989 ರಲ್ಲಿ ಪ್ರತಿಬಂಧಿಸಲಾಗಿದೆ. ನಮ್ಮ ಭಾರತದ ಸಂವಿಧಾನ ಅನುಚ್ಚೇದ 14, 15 ರಲ್ಲಿ ಕಾನೂನಿನ ಮುಂದೆ ಎಲ್ಲರು ಸಮಾನರು ಅನುಚ್ಚೇದ 17ರಲ್ಲಿ ಅಸ್ಪೃಶ್ಯತೆ ಆಚರಣೆಯನ್ನು ನಿಷೇಧಿಸಲಾಗಿದೆ. ಧೌರ್ಜನ್ಯ ತಡೆ ಕಾಯಿದೆ ಜಾರಿಯಾದ ಹಿನ್ನಲೆ ಭಾರತದಲ್ಲಿದ್ದ ಜಾತಿಯತೆಯನ್ನು ಹೋಗಲಾಡಿಸಿ ಜಾತಿ ಧೌರ್ಜನ್ಯಕ್ಕೆ ಒಳಗಾದವರಿಗೆ ರಕ್ಷಣೆ ನೀಡುವ ಸಲುವಾಗಿದೆ 2015ರ ತಿದ್ದುಪಡ ಮತ್ತು 2018ರ ತಿದ್ದಪಡಿ ಕಾಯಿದೆಯನ್ನು ಬಲಗೊಳಿಸಿದೆ ಆದ್ದರಿಂದ ಜಾತಿ ಧೌರ್ಜನ್ಯ ಮಾಡಿದವರಿಗೆ ಶಿಕ್ಷೆಯ ಪ್ರಮಾಣ ಹೆಚ್ಚಿಸಲು ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ದೂರು ನೀಡುವ ಸಂದರ್ಭದಲ್ಲೆ ಸಾಕ್ಷಿಗಳನ್ನು ಪುಷ್ಠೀಕರಿಸುವ ಅಂಶಗಳಿರಬೇಕು, ಹಾಗೂ ಸಾಕ್ಷಿಗಳಿಗೆ ಭದ್ರತೆ ನೀಡಬೇಕು. ಐಒಗಳು ಸೇರಿದಂತೆ ಪೋಲಿಸ್ ಇಲಾಖೆ, ಜ್ಯುಡಿಷಿಯಲ್ ಆಫೀಸರ್ಗಳು, ವಕೀಲರು ಹಾಗೂ ಜಿಲ್ಲಾ ಮೇಲುಸ್ತುವಾರಿ ಸದಸ್ಯರು ಸೇರಿದಂತೆ, ಜಿಲ್ಲಾಡಳಿತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಕಾಯಿದೆಯ ಸೂಕ್ಷ್ಮತೆಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಎಸ್ಸಿ/ಎಸ್ಟಿ ಅಟ್ರಾಸಿಟಿ ಕ್ರೌನ್ ಜಿಲ್ಲೆಯಾಗಿ ತುಮಕೂರು- ಹೈ ಕೋರ್ಟ್ ವಕೀಲರು ಶಿವಮಣಿ
ಕರ್ನಾಟಕದಲ್ಲಿ ದೊಡ್ಡ ಜಿಲ್ಲೆಯಾಗಿರುವ ತುಮಕೂರು ಅಟ್ರಾಸಿಟಿ ನಡೆಯುತ್ತಿರುವ ಕ್ರೌನ್ ಜಿಲ್ಲೆಯಾಗಿದೆ ಎಂದು ಹೈ ಕೋರ್ಟ್ ವಕೀಲರಾದ ಶಿವಮಣಿಥನ್ ಹೇಳಿದರು, ಇತ್ತೀಚೆಗೆ ಕರ್ನಾಟಕ ಸರ್ಕಾರದಸಮಾಜ ಕಲ್ಯಾಣ ಇಲಾಖೆಯಿಂದ ಬಿಡುಗಡೆ ಮಾಡಿರುವ ಧೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರುವ ಜಿಲ್ಲೆಗಳಲ್ಲಿ ತುಮಕೂರು ಎರಡನೇ ಸ್ಥಾನದಲ್ಲಿದೆ, ಆದರೆ ಇದುವರೆಗೂ ಕರ್ನಾಟಕ ಸರ್ಕಾರ ಕ್ರೌನ್ ಜಿಲ್ಲೆಗಳನ್ನು ಘೋಷಣೆ ಮಾಡಿಲ್ಲ, ಸುಪ್ರೀಂ ಕೋರ್ಟ್ ಜಡ್ಜಮೆಂಟ್ನ ಪ್ರಕಾರ ಜಾತಿ ಧೌರ್ಜನ್ಯ ಪ್ರಕರಣಗಳಲ್ಲಿ ಸಾಕ್ಷಿಗಳನ್ನು ಒದಗಿಸುವ ಸಂದರ್ಭದಲ್ಲಿ 3(1)ಆರ್ಎಸ್ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಿಂಧಿಸಿದಾಗ ಅಥವಾ ಜಾತಿ ಧೌರ್ಜನ್ಯವಾದಾಗ ನಾನ್ ಎಸ್ಸಿಗಳು ವಿಟ್ನೆಸ್ ಆಗಬೇಕು ಎಂದು ಕೇಳಲಾಗುತ್ತದೆ. ಕೋರ್ಟ್ ಗಳು ಸಹ ಚಾಪ್ಟರ್ 4(ಎ)ನಲ್ಲಿ ಇರುವ ಅವಕಾಶಗಳನ್ನು ಬಳಸಿಕೊಳ್ಳದಿರುವುದರಿಂದ ಜ್ಯುಡಿಷಿಯಲ್ ಮತ್ತು ಪೋಲಿಸ್ ಇಲಾಖೆಯ ಲ್ಯಾಪ್ಸ್ ಸ್ ಳಿಂದ ಹಾಗೂ ಐಓಗಳ ತನಿಖೆ ಸಮಪರ್ಕವಾಗಿ ಮಾಡದಿರುವುದರಿಂದ ದೂರುದಾರರು ಪ್ರಾರಂಭದಲ್ಲೇ ಸರಿಯಾಗಿ ದೂರು ನೀಡಿದಿರುವುದರಿಂದ ಶಿಕ್ಷೆಯ ಪ್ರಮಾಣ ಕರ್ನಾಟಕದಲ್ಲಿ ಶೇ 4% ರಷ್ಟಿದ್ದರೆ ತಮಿಳುನಾಡಿನಲ್ಲಿ ಶೇ 14ರಷ್ಟಿದೆ ತುಮಕೂರು ಜಿಲ್ಲೆಯಲ್ಲಿ 2ರಷ್ಟಿದೆ ಈ ಪ್ರಮಾಣ ಏರಿಕೆಯಾಗಿ ಧೌರ್ಜನ್ಯ ಮಾಡುವವರಿಗೆ ಶಿಕ್ಷೆಯಾಗಬೇಕೆಂದರೆ ಜಿಲ್ಲಾ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿ ರೂಲ್-6 ನಲ್ಲಿರುವ ಪ್ರಾವಿಜನ್ ಮತ್ತು ರೀವ್ಯೂ ಆದಾರಗಳ ಮೇಲೆ ವಿಶ್ಲೇಷಣೆ ಮಾಡಬೇಕು ಅಂದರೆ ಕಾಯಿದೆಯ ಅನ್ವಯ ರೂಪಿತವಾಗಿರುವ ನಿಯಮ 6 ರಲ್ಲಿ ಐಒಗಳು ಘಟನೆ ನಡೆದ ಸಂದರ್ಭದಲ್ಲಿ ಸ್ಥಳ ಭೇಟಿ ಮಾಡಿ ಜಾತಿ ಧೌರ್ಜನ್ಯಕ್ಕ ಸಂಬಂಧಿಸಿದ ಪ್ರಮಾಣ ಆಸ್ತಿಗಳ ಹಾನಿ ಮಟ್ಟ ಸಾಕ್ಷಿಗಳ ಕುರಿತು ವರದಿ ಮಾಡಿ ಕೋಟರ್್ಗೆ ಸಲ್ಲಿಸಬೇಕು. ಈ ವರದಿ ಆದರಿಸಿ ಎಸ್ಐಆರ್ ದಾಖಲಿಸಬೇಕು ಈಗಾದಾಗ ಜಿಲ್ಲಾ ಮತ್ತು ಹೈ ಕೋರ್ಟ್ ಗಳಲ್ಲಿ ಕೇಸ್ಗಳು ಕ್ವಾಶ್ ಆಗಲು ಸಾಧ್ಯವಿಲ್ಲ,
ರೂಲ್ 6 ಪ್ರಕಾರ ಘಟನೆ ವರದಿಯನ್ನು ಪೋಲಿಸ್ ಇಲಾಖೆ ನೀಡಬೇಕು ಸೆಕ್ಷನ್ 4 ರ ಪ್ರಕಾರ ಪೋಲಿಸ್ ಇಲಾಖೆ ಇದನ್ನು ಅನುಸರಿಸದಿದ್ದರೆ ಪೋಲಿಸ್ ಇಲಾಖೆ ಮೇಲೆ ದೂರು ದಾಖಲಿಸಬಹುದು ಇದರ ಬಗ್ಗೆ ಜಿಲ್ಲಾ ಜಾಗೃತಿ ಸಮಿತಿ ಪರಿಶೀಲನೆ ನಡೆಸಬೇಕು, ಚಾಪ್ಟರ್ 4(ಎ)ನಲ್ಲಿ ದೂರುದಾರರಿಗೆ ಸ್ಥಳದಲ್ಲೇ ದೂರಿನ ಪ್ರತಿಯನ್ನು ನೀಡಬೇಕು, ಇತ್ತೀಚೆಗೆ ರಾಜ್ಯದಲ್ಲಿ ಹೋಮಿನಿ ಬಸ್ ಅಲಿಗೇಷನ್ ಕೇಸ್ಗಳಿಂದ ಶಿಕ್ಷೆ ಪ್ರಮಾಣ ಕಡಿಮೆಯಾಗುತ್ತಿದೆ ಧೌರ್ಜನ್ಯಗಳ ಬಗ್ಗೆ ಮತ್ತು ಜಾತಿ ನಿಂಧನೆಗಳ ಬಗ್ಗೆ ಎಫ್ಐಆರ್ ದಾಖಲಾಗದೆ, ಚಾರ್ಜ್ ಶೀಟ್ ನಿಗದಿತ ಕಾಲಮಿತಿಯಲ್ಲಿ ಜ್ಯುಡಿಷಿಯಲ್ ಪ್ರಕಾರ ನಡೆದಿರುವುದರಿಂದ ಆಕ್ವಿಟ್ ರೇಟ್ ಕಡಿಮೆಯಾಗುತ್ತಿದೆ. ಸಿವಿಲ್ ಡಿಸ್ಬ್ಯೂಟ್ ನಲ್ಲಿ ಈಗಾಗಲೇ ಒಎಸ್ ಸಿವಿಲ್ ದಾವಾಗಳಿದ್ದಲ್ಲಿ ಅಟ್ರಾಸಿಟಿ ಕೇಸ್ ದಾಖಲಿಸಬಾರದೆಂದು ಇತ್ತೀಚೆಗೆ ಸುಪ್ರೀಂ ಕೋಟ್ ಆದೇಶ ಇರುವುದರಿಂದ ಸಾಕಷ್ಟು ಸಿವಿಲ್ ಧೌರ್ಜನ್ಯಗಳನ್ನು ದಾಖಲಿಸುವುದಿಲ್ಲ ಆದರೆ ಸೆಕ್ಷನ್ 18 ರಲ್ಲಿ ಸಿವಿಲ್ ಡಿಸ್ಬ್ಯೂಟ್ ದಾಖಲಿಸಲು ಕಾಯಿದೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಈ ವೈರುದ್ಯದಲ್ಲಿ ಕೋರ್ಟ್ ಗಳು ಜಾತಿ ಧೌರ್ಜನ್ಯ ನೋಡುತ್ತಿದೆ. ಸೆಕ್ಷನ್ 15 ರಲ್ಲಿ ದೂರುದಾರರ ಪರವಾಗಿ ಎನ್ಜಿಒ ಅಥವಾ ಸಂಘಟನೆ ಪ್ರತಿನಿಧಿಗಳು ಹಾಜರಿರಲು ಅವಕಾಶ ನೀಡಲಾಗಿದೆ. ಜಿಲ್ಲೆಯ ಪೆದ್ದನಹಳ್ಳಿ, ದಂಡಿನಶಿರ, ಕೆಂಪನಹಳ್ಳಿ, ಕೊಲೆ ಪ್ರಕರಣಗಳಲ್ಲಿ ಪೋಸ್ಟ್ ಮಾರ್ಟಂ ರಿಪೋರ್ಟ್ ಗಳನ್ನ ಮೃತರ ಕುಟುಂಬಗಳಿಗೆ ನೀಡಿಲ್ಲ, ಆದರೆ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರವೇ ಪೋಸ್ಟ್ ಮಾರ್ಟಂ ರಿಪೋರ್ಟ್ 24 ಗಂಟೆಯೊಳಗೆ ಕುಟುಂಬಕ್ಕೆ ನೀಡಬೇಕು. ಸರಿಯಾದ ರೀತಿಯಲ್ಲಿ ದೂರುದಾರರು ದೂರನ್ನು ರೆಕಾರ್ಡ್ ಮಾಡದಿರುವುದು ಶಿಕ್ಷೆಯ ಪ್ರಮಾಣ ಕಡಿಮೆಯಾಗಲು ಕಾರಣವಾಗಿದೆ. ಇತ್ತೀಚೆಗೆ ಹೈ ಕೋರ್ಟ್ ಪೋಲಿಸ್ ಇಲಾಖೆಗೆ ಎಚ್ಚರಿಕೆ ನೀಡಿದ್ದು ಸೆಕ್ಷನ್ 204 ಪ್ರಕಾರ ಪೋಲಿಸ್ ಅಧಿಕಾರಿ ಪ್ರಶ್ನೆಗಳನ್ನು ಕೇಳಿ ಸ್ಟೇಟ್ಮೆಂಟ್ನ್ನು ರೆಕಾರ್ಡ್ ಮಾಡಬೇಕು ಈ ರೀತಿ ರೆಕಾರ್ಡ್ ಮಾಡದೇ ಸ್ಟೀರಿಯೋ ಟೈಪ್ನಲ್ಲಿ ಚಾರ್ಜ್ ಶೀಟ್ ಹಾಕುತ್ತಿರುವುದರಿಂದ ಹಾಗೂ ಬಿ ರಿಪೋರ್ಟ್ ಹಾಕುತ್ತಿರುವುದರಿಂದ ಕಾಯಿದೆ ಬಳಕೆ ಬಗ್ಗೆ ವ್ಯವಸ್ಥೆಗೆ ಒಂದು ರೀತಿಯ ಗುಮಾನಿ ಇದೆ. ಇವೆಲ್ಲ ಹಂತಗಳನ್ನು ಜಿಲ್ಲಾ ಜಾಗೃತಿಯ ಸಮಿತಿ ಪ್ರತೀ 3 ತಿಂಗಳಿಗೊಮ್ಮೆ ಪರಿಶೀಲಿಸಿ ತಮ್ಮ ಪರಿಶೀಲನೆಯನ್ನು ರಾಜ್ಯ ಪರಿಷತ್ ಗೆ ಕಳುಹಿಸಬೇಕು ಆದರೆ ಈ ರಿತಿಯಲ್ಲಿ ಕರ್ನಾಟಕದಲ್ಲಿ ಎಲ್ಲಿಯು ಆಗುತ್ತಿಲ್ಲವೆಂದರು,
ಕಾರ್ಯಗಾರದಲ್ಲಿ ಜಿಲ್ಲಾ ಜಾಗೃತಿ ಸಮಿತಿಯ ನಿಕಟಪೂರ್ವ ಸದಸ್ಯರಾದ ಎ.ನರಸಿಂಹಮೂರ್ತಿ, ರಂಗಯ್ಯ, ತಮ್ಮ ಅನುಭವಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ಪಯರ್ಾಯ ಕಾನೂನು ವೇದಿಕೆಯ ನರಸಿಂಹಪ್ಪ, ಪೂರ್ಣ, ವಿನಯ್ಶ್ರೀನಿವಾಸ್, ಚೈತ್ರಾ, ಮನೋಜ್ ಕುಮಾರ್, ಶಿವಣ್ಣ, ಮತ್ತು ತುಮಕೂರು ಸ್ಲಂ ಸಮಿತಿಯ ತಿರುಮಲಯ್ಯ, ಅರುಣ್, ಶಂಕ್ರಯ್ಯ ಹಾಗೂ ವೃತ್ತಿಪರ ವಕೀಲರು, ಸೂಫಿಯ ಕಾನೂನು ಕಾಲೇಜಿನ ಪ್ರಾಧ್ಯಾಪಕರಾದ ಮಮತಾ ಹಾಗೂ ಅಂತಿಮ ಸೆಮಿಸ್ಟರ್ನ ವಿದ್ಯಾರ್ಥಿಗಳು ಭಾಗವಹಿಸಿದ್ದರು.



