ತುಮಕೂರು:ರಂಗಭೂಮಿ ಟ್ರಸ್ಟ್ (ರಿ).ಕೊಡಗು ಇವರ ವತಿಯಿಂದ ನವೆಂಬರ್ 28 ಮತ್ತು 29 ರಂದು ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸತ್ಯವನ್ನೇ ಹೇಳುತ್ತೇನೆ ಎಂಬ ನಾಟಕದ ಪ್ರದರ್ಶನವನ್ನು ಹಮ್ಮಿಕೊಂಡಿದ್ದು, ನಾಟಕದ ಪ್ರವೇಶಕ್ಕೆ 200 ರೂ ಪ್ರವೇಶ ಶುಲ್ಕ ನಿಗಧಿ ಮಾಡಲಾಗಿದೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಮೈಸೂರಿನ ರಂಗಾಯಣದ ನಿಕಟಪೂರ್ವ ನಿರ್ದೇಶಕರಾಗಿರುವ ಅಡ್ಡಂಡ ಕಾರ್ಯಪ್ಪ ಅವರ ನಿರ್ದೇಶನದಲ್ಲಿ ಚರಿತ್ರೆಯ ಕುರಿತ ಸತ್ಯವನ್ನೇ ಹೇಳುತ್ತೇನೆ ಎಂಬ ನಾಟಕ ಎರಡು ದಿನಗಳ ಕಾಲ ಪ್ರದರ್ಶನಗೊಳ್ಳಲಿದ್ದು,ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವೀಕ್ಷಿಸುವಂತೆ ಮನವಿ ಮಾಡಿದರು.
ರಂಗಭೂಮಿ ಟ್ರಸ್ಟ್ (ರಿ)ಕೊಡಗುನ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾತನಾಡಿ,ಮೈಸೂರಿನ ರಂಗಾಯಣದ ನಿರ್ದೇಶಕ ನಾಗಿದ್ದಾಗ,ಅಲ್ಲಿನ ಕಲಾವಿದರನ್ನು ಬಳಸಿಕೊಂಡು ಟಿಪ್ಪುವಿನ ನಿಜ ಕನಸು ಎಂಬ ನಾಟಕವನ್ನು ರಾಜ್ಯದ ಎಲ್ಲಡೆ ಪ್ರದರ್ಶನ ನಡೆಸಿದ್ದು,ಸುಮಾರು ಅರವತ್ತು ಪ್ರದರ್ಶನ ಕಂಡಿತ್ತು.ತದನoತರ ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾಗಿಯೂ ಅಪಹಾಸ್ಯಕ್ಕೆ ಒಳಗಾಗಿದ್ದ ನಿಜ ಸ್ವಾತಂತ್ರ ಹೋರಾಟಗಾರ ವೀರ ಸಾರ್ವಕರ್ ಕುರಿತ ಕರಿನೀರಿನ ವೀರ ನಾಟಕ ಸಹ ನಮ್ಮ ಸಂಸ್ಥೆಯಿoದ ಪ್ರದರ್ಶನಗೊಂಡಿತ್ತು.ಈ ಬಾರಿಯ ರೆಪಟರಿಯಲ್ಲಿ ಸುಮಾರು 49 ವಿವಿಧ ಚಾರಿತ್ರಿಕ ಪುಸಕ್ತಗಳನ್ನು ಅಧ್ಯಯನ ಮಾಡಿ, ಸತ್ಯವನ್ನೇ ಹೇಳುತ್ತೇನೆ ಎಂಬ ನಾಟಕವನ್ನು ರಚಿಸಿ, ರಂಗವಿನ್ಯಾಸಕ್ಕೆ ಅಳವಡಿಸಿ, ನಿರ್ದೇಶನ ಮಾಡಿದ್ದು, ನಾನು ಕೂಡ ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದೇನೆ.ಚರಿತ್ರೆಯಲ್ಲಿ ಆಗಿರುವ ತಪ್ಪುಗಳನ್ನು, ಚಾರಿತ್ರಿಕ ವ್ಯಕ್ತಿಗಳಿಂದಲೇ ಹೊರಗೆಡವುವ ನಾಟಕ ಇದಾಗಿದೆ ಎಂದರು.
ಸತ್ಯವನ್ನೇ ಹೇಳುತ್ತೇನೆ ನಾಟಕದಲ್ಲಿ ಸುಮಾರು 6 ಪಾತ್ರಗಳು ಬರುತ್ತೇವೆ.ಮಹಾತ್ಮಗಾಂಧಿ, ನೆಹರು, ಸರದಾರ ವಲ್ಲಭಾಯಿ ಪಟೇಲ್, ಸುಭಾಷ್ ಚಂದ್ರಬೋಸ್,ವೀರಸಾರ್ವಕರ್ ಹಾಗೂ ಅಂಬೇಡ್ಕರ್ ಅವರನ್ನು ಒಳಗೊಂಡ ಒಂದು ನ್ಯಾಯಾಲಯದ ಸನ್ನಿವೇಶಗಳನ್ನು ಸೃಷ್ಟಿಸಿ, ಸಾಕ್ಷಿದಾರರಾದ ಮೇಲಿನ ಎಲ್ಲರಿಗೂ ಸಮನ್ಸ್ ಜಾರಿ ಮಾಡಿ,ಮುಚ್ಚಿಟ್ಟ, ಬಚ್ಚಿಟ್ಟ ಸತ್ಯವನ್ನು ಅವರ ಬಾಯಿಂದಲೇ ಹೇಳಿಸುವ ಪ್ರಕ್ರಿಯೆ ಇದಾಗಿದೆ. ನಾನೊಬ್ಬ ದೇಶಪ್ರೇಮಿ ನಾಟಕ ನಿರ್ದೇಶಕನಾಗಿದ್ದು, ಮನರಂಜನೆಗಾಗಿ ನಾನು ನಾಟಕಗಳನ್ನು ರಚಿಸುವುದಿಲ್ಲ ಎಂದು ಅಡ್ಡಂಡ ಕಾರ್ಯಪ್ಪ ನುಡಿದರು.
ಸುಮಾರು 3 ಗಂಟೆಗಳ ಸತ್ಯವನ್ನೇ ಹೇಳುತ್ತೇನೆ ನಾಟಕದಲ್ಲಿ 10 ನಿಮಿಷಗಳ ಮಧ್ಯಾಂತರ ಬಿಡುವು ಇದೆ.ಸತತ ಮೂರು ತಿಂಗಳ ಕಾಲ ಕಲಾವಿದರು ಅಭ್ಯಾಸ ಮಾಡಿ ಈ ನಾಟಕವನ್ನು ಪ್ರದರ್ಶಿಸುತಿದ್ದು,ಪ್ರದರ್ಶನ ಪ್ರವೇಶಕ್ಕೆ 200 ರೂ ಪ್ರವೇಶ ಶುಲ್ಕ ನಿಗಧಿ ಮಾಡಿದೆ.ನಾಟಕ ನೋಡಿದವರು ನನ್ನನ್ನು ಹೊಗಳಲು ಬಹುದು,ತೆಗಳಲು ಬಹುದು.ಎರಡಕ್ಕೂ ಸ್ವಾಗತವಿದೆ. ನಾಟಕಕಾರನಾಗಿ ನನ್ನ ಕೆಲಸವನ್ನು ಮಾಡಿದ್ದೇನೆ. ಇತಿಹಾಸದಲ್ಲಿ ಮುಚ್ಚಿಟ್ಟ ಸತ್ಯಗಳನ್ನು ಹೊರೆಗೆಳೆಯುವ ಕೆಲಸವನ್ನು ಓರ್ವ ದೇಶಪ್ರೇಮಿ ನಾಟಕಕಾರನಾಗಿ ಮಾಡುತ್ತಿದ್ದೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಸಂದೀಪಗೌಡ,ಭೈರಣ್ಣ ಮತ್ತಿತರರು ಉಪಸ್ಥಿತರಿದ್ದರು.
ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸತ್ಯವನ್ನೇ ಹೇಳುತ್ತೇನೆ ಎಂಬ ನಾಟಕದ ಪ್ರದರ್ಶನ
Leave a comment
Leave a comment