ಎಸ್ ವೀಕ್ಷಕರೆ ತಾಲೂಕಿನ ನೂರಾರು ಜನರ ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಹಾಗೂ ಜನಸ್ಪಂದನ ಕಾರ್ಯಕ್ರಮದಲ್ಲಿ ಅಫಜಲಪೂರ ತಾಲೂಕಿನ ಜನತೆ ಹಲವಾರು ಸಮಸ್ಯೆ ಗಳನ್ನು ಹೊತ್ತು ತಂದಿದ್ದೀರಿ ಅವುಗಳಲ್ಲಿ ಸುಮಾರು ನೂರಕ್ಕೂ ಹೆಚ್ಚು ಸಮಸ್ಯೆಗಳನ್ನು ಬಗೆ ಹರಿಸಿದ್ದೇವೆ ಇನ್ನುಳಿದ ಸಮಸ್ಯೆಗಳ್ಳನ್ನು ಅತೀ ಶೀಘ್ರದಲ್ಲಿ ಒಂದು ತಿಂಗಳಲ್ಲಿ ಬಗೆಹರಿಸುವಂತಹ ಕೆಲಸ ಮಾಡುತ್ತೇವೇ ಎಂದು ಕಲಬುರಗಿ ಜಿಲ್ಲಾಧಿಕಾರಿ ಪಿ. ತರನುಮ್ ಹೇಳಿದರು.ಪಟ್ಟಣದ ನ್ಯಾಷನಲ್ ಪಂಕ್ಷನ್ ಹಾಲನಲ್ಲಿ ಹಮ್ಮಿಕೊಂಡ ಜನಸ್ಪಂದನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಬಹಳಷ್ಟು ಜನರು ಈ ಕಾರ್ಯಕ್ರಮದ ಸದುಪಯೋಗ ಪಡೆದಿದ್ದೀರಿ ಅದ್ರಲ್ಲೂ ನಮ್ಮ ಗ್ರಾಮೀಣ ಭಾಗದ ಜನ ಅನೇಕ ಜನರು ಈ ಜನಸ್ಪಂದನ ಕಾರ್ಯಕ್ರಮಕ್ಕೆ ಬರಲು ಆಗಿಲ್ಲ, ಹಾಗಾಗಿ ಅವರು ಸ್ಥಳೀಯ ಮಟ್ಟದ ನಮ್ಮ ಅಧಿಕಾರಿಗಳ ಹತ್ತಿರ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಮತ್ತು ನಮ್ಮ ರೈತರು ಆದಷ್ಟು ಬೇಗ ಬೆಳೆ ವಿಮೆ ಮಾಡಿಸಿಕೊಳ್ಳಬೇಕು ಎಂದರು, ಕಾರ್ಯಕ್ರಮದಲ್ಲಿ ಕುಷ್ಟ ರೋಗ ನಿಯಂತ್ರಣದ ಅರಿವು, ಆಯುಸ್ಮಾನ್ ಕಾರ್ಡ್ ವಿತರಣೆ, ಮಾತೃ ವೃಂದ ಫಲಾನುಭವಿಗಳು, ಅಂಗನವಾಡಿ ಕಾರ್ಯಕರ್ತರಿಗೆ ಮೊಬೈಲ್ ವಿತರಣೆ, ಸಂದ್ಯಾ ಸುರಕ್ಷಾ ಯೋಜನೆ ಫಲಾನುಭವಿಗಳಿಗೆ ಅಭಿನಂದನೆ ಸಲ್ಲಿಕೆ, ಸೇರಿದಂತೇ ಅನೇಕ್ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ತಾಲೂಕಿನ ಎಲ್ಲ ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ಶಾಸಕ ಎಂ ವಾಯ್ ಪಾಟೀಲ್ ಹೆಚ್ಚುವರಿ ಪೊಲೀಸ ಆಯುಕ್ತರು ಶ್ರೀನಿಧಿ.ಸೇರಿದಂತೆ ತಾಲೂಕಿನ ಸಾರ್ವಜನಿಕರು ಭಾಗವಹಿಸಿದರು.