ಮಾನ್ಯ ವೀಕ್ಷಕರು ಮತ್ತು ಪೊಲೀಸ್ ವೀಕ್ಷಕರುಗಳೊಂದಿಗೆ ಜಿಲ್ಲಾಡಳಿತ ಸಭೆ
ತುಮಕೂರು(ಕ.ವಾ) ಏ.೨೧: ಜಿಲ್ಲೆಯಲ್ಲಿನ ೪೩೨ ಮದ್ಯದಂಗಡಿಗಳಲ್ಲಿ ಆನ್ಲೈನ್ ಪಾವತಿಯನ್ನು ಉತ್ತೇಜಿಸುವ ಸಂಬAಧ ಎಲ್ಲ ಮದ್ಯದಂಗಡಿಗಳಲ್ಲಿ ಕ್ಯೂಆರ್ ಕೋಡ್ಗಳನ್ನು ಕಡ್ಡಾಯಗೊಳಿಸುವಂತೆ ಜಿಲ್ಲಾ ಅಬಕಾರಿ ಆಯಕ್ತರಿಗೆ ಜಿಲ್ಲಾಧಿಕಾರಿ ವೈಎಸ್ ಪಾಟೀಲ್ ಅವರು ನಿರ್ದೇಶನ ನೀಡಿದರು.

ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-೨೦೨೩ರ ಸಂಬAಧ ಜಿಲ್ಲೆಗೆ ಆಗಮಿಸಿರುವ ಚುನಾವಣಾ ಸಾಮಾನ್ಯ ವೀಕ್ಷಕರು ಹಾಗೂ ಪೊಲೀಸ್ ವೀಕ್ಷಕರುಗಳೊಂದಿಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಸಂಜೆ ಸಭೆ ನಡೆಸಲಾಯಿತು.
ಜಿಲ್ಲೆಗೆ ಆಗಮಿಸಿರುವ ಚುನಾವಣಾ ಸಾಮಾನ್ಯ ವೀಕ್ಷಕರು ಹಾಗೂ ಪೊಲೀಸ್ ವೀಕ್ಷಕರುಗಳನ್ನು ಸ್ವಾಗತಿಸಿದ ಜಿಲ್ಲಾಧಿಕಾರಿಗಳು,ಚುನಾವಣಾ ವೀಕ್ಷಕರ ಸಲಹೆಯ ಮೇರೆಗೆ ಈ ಮೇಲಿನಂತೆ ನಿರ್ದೇಶನ ನೀಡಿದರು.
ಮತದಾರರು ಬಿಸಿಲಿನಲ್ಲಿ ಬಸವಳಿಯದಂತೆ ಮತಗಟ್ಟೆಗಳ ಬಳಿ ಶಾಮಿಯಾನ, ಪೆಂಡಾಲ್ ವ್ಯವಸ್ಥೆ, ಪಿಡ್ಲೂö್ಯಡಿ ಮತದಾರರು ಮತ್ತು ೮೦ ವರ್ಷ ಮೇಲ್ಪಟ್ಟ ಮತದಾರರ ಮತದಾನ ಗೌಪ್ಯತೆ, ಮತಗಟ್ಟೆಗಳ ಬಳಿ ಬಿಎಲ್ಓಗಳ ಮಾಹಿತಿ ಅಳವಡಿಕೆ ಮುಂತಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.