ಬಡ ಕುಟುಂಬಗಳಿಗೆ ಹುದಾ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ನಿಂದ ದಿನಸಿ ಕಿಟ್ ವಿತರಣೆ
ತುಮಕೂರು ನಗರದ ಮರಳೂರು ದಿಣ್ಣೆ 1ನೇ ಕ್ರಾಸ್ನಲ್ಲಿ ಮಾನವೀಯತೆ ಮತ್ತು ಸಮಾಜ ಸೇವೆಗೆ ಮಾದರಿಯಾಗುವಂತಹ ಕಾರ್ಯಕ್ರಮವೊಂದು ನಡೆಯಿತು.
ಹುದಾ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸುಮಾರು 100 ಬಡ ಕುಟುಂಬಗಳಿಗೆ ಆಹಾರ ದಿನಸಿ ಕಿಟ್ಗಳನ್ನು ವಿತರಿಸಲಾಯಿತು.
ಟ್ರಸ್ಟ್ನ ಅಧ್ಯಕ್ಷರಾದ ಮುಫ್ತಿ ಸಲೀಂ ಅಹಮದ್ ಅವರ ನೇತೃತ್ವದಲ್ಲಿ ಹಾಗೂ ಟ್ರಸ್ಟಿಗಳ ಸಹಕಾರದೊಂದಿಗೆ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಕರ್ನಾಟಕ ಉರ್ದು ಫೌಂಡೇಶನ್ನ ಸದಸ್ಯರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಫೌಂಡೇಶನ್ನ ಸದಸ್ಯರ ಅಮೃತ ಹಸ್ತದಿಂದ ಬಡ ಕುಟುಂಬಗಳಿಗೆ ದಿನಸಿ ಕಿಟ್ಗಳನ್ನು ವಿತರಿಸಲಾಯಿತು.

ಹುದಾ ಟ್ರಸ್ಟ್ ಕಳೆದ ಸುಮಾರು ಎರಡೂವರೆ ವರ್ಷಗಳಿಂದ ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಬಡ ಮತ್ತು ಅಗತ್ಯವಿರುವ ಮಕ್ಕಳಿಗೆ ಶಾಲಾ ಶುಲ್ಕದ ನೆರವು ಹಾಗೂ ಆಹಾರ ಕಿಟ್ಗಳ ವಿತರಣೆ ಸೇರಿದಂತೆ ವಿವಿಧ ರೀತಿಯ ಸಹಾಯವನ್ನು ಮಾಡುತ್ತಾ ಬಂದಿದೆ.
ಅಗತ್ಯವಿರುವ ಕುಟುಂಬಗಳ ನೆರವಿಗೆ ನಿಲ್ಲುವ ಈ ಸೇವಾ ಕಾರ್ಯಕ್ಕೆ ಸ್ಥಳೀಯರು ಹಾಗೂ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಉರ್ದು ಫೌಂಡೇಶನ್ನ ಹಬೀಬುರ್ ರಹಮಾನ್, ಯಾಹ್ಯಾ ಖಾನ್, ಫಾರೂಕ್, ಶಬ್ಬೀರ್ ಅಹಮದ್, ದಾದಾ ಪೀರ್, ಚಾಂದು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಡವರ ಮುಖದಲ್ಲಿ ಸಂತೋಷ ಮೂಡಿಸುವ ಇಂತಹ ಸೇವಾ ಕಾರ್ಯಗಳು ಸಮಾಜದಲ್ಲಿ ಮಾನವೀಯತೆಯ ಸಂದೇಶವನ್ನು ಮತ್ತಷ್ಟು ಬಲಪಡಿಸುತ್ತವೆ.



